ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸಿಕ್ಕಿಂ ಜನರ ಸರಾಸರಿ ಆಯುಷ್ಯ 100 ವರ್ಷ ತಲುಪಿಸಲು ಸರಕಾರ ಚಿಂತನೆ'

|
Google Oneindia Kannada News

ಸತತ ಆರನೇ ಬಾರಿಗೆ ಮುಖ್ಯಮಂತ್ರಿ ಗಾದಿಗೆ ಏರುವ ಕನಸು ಹೊತ್ತಿರುವ ಸಿಕ್ಕಿಂನ ಮುಖ್ಯಮಂತ್ರಿ ಹಾಗೂ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ನ ಮುಖ್ಯಸ್ಥ ಪವನ್ ಚಾಮ್ಲಿಂಗ್ ಮತದಾರರಿಗೆ ಹೊಸ ಭರವಸೆ ನೀಡಿದ್ದಾರೆ. ನಮ್ಮ ಸರಕಾರವು ರಾಜ್ಯದ ಜನರ ಸರಾಸರಿ ಆಯುಷ್ಯವನ್ನು (ಲೈಫ್ ಎಕ್ಸ್ ಪೆಕ್ಟೆನ್ಸಿ) ನೂರು ವರ್ಷಕ್ಕೆ ಹೆಚ್ಚಿಸುವ ಕಡೆಗೆ ಚಿಂತಿಸುತ್ತಿದೆ ಎಂದಿದ್ದಾರೆ.

ಪುಟ್ಟ ರಾಜ್ಯ ಸಿಕ್ಕಿಂ ಜಲ ವಿದ್ಯುತ್ ವೊಂದರಿಂದಲೇ ಎರಡು ಸಾವಿರ ಬಿಲಿಯನ್ ರುಪಾಯಿ ಆದಾಯ ಗಳಿಸುತ್ತಿದೆ. ಸಿಕ್ಕಿಂ ರಾಜ್ಯಕ್ಕೆ ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭೆ ಜತೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಸಿಕ್ಕಿಂನ ಒಟ್ಟು ಮೂವತ್ತೆರಡು ಕ್ಷೇತ್ರಗಳ ಪೈಕಿ ಇಪ್ಪತ್ತೊಂಬತ್ತರಲ್ಲಿ ಎಸ್ ಡಿಎಫ್ ಗೆದ್ದಿದೆ.

ಸಿಕ್ಕಿಂ ರಾಜ್ಯದ ರಾಯಭಾರಿಯಾಗಿ ಎ.ಆರ್. ರೆಹಮಾನ್ಸಿಕ್ಕಿಂ ರಾಜ್ಯದ ರಾಯಭಾರಿಯಾಗಿ ಎ.ಆರ್. ರೆಹಮಾನ್

ವಿರೋಧ ಪಕ್ಷವಾದ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಎರಡು ಸ್ಥಾನ ಪಡೆದಿದೆ. ಇನ್ನು ಚಾಮ್ಲಿಂಗ್ ರ ತಮ್ಮ ಸ್ವತಂತ್ರ ಶಾಸಕರಾಗಿದ್ದಾರೆ. 1975ರಲ್ಲಿ ಸಿಕ್ಕಿಂ ಭಾರತಕ್ಕೆ ಸೇರ್ಪಡೆಯಾಯಿತು. ಅದಕ್ಕೂ ಮುನ್ನ ಚೋಗ್ಯಲ್ ರ ರಾಜ್ಯಭಾರ ಇತ್ತು. ‌2011ರ ಜನಗಣತಿ ಪ್ರಕಾರ ಇಲ್ಲಿನ ಜನಸಂಖ್ಯೆ 6.1 ಲಕ್ಷ. 2018-19ನೇ ಸಾಲಿನಲ್ಲಿ 7050 ಕೋಟಿ ರುಪಾಯಿಯ ಬಜೆಟ್ ಮಂಡಿಸಲಾಗಿತ್ತು.

Sikkim CM Pawan Chamling promises 100 years of life expectancy

ಈಗ ಜನರ ಸರಾಸರಿ ಆಯುಷ್ಯ 71 ವರ್ಷ ಇದೆ. 1994ರಲ್ಲಿ ನಾವು ಅಧಿಕಾರಕ್ಕೆ ಬಂದಾಗ ಆ ಪ್ರಮಾಣ 60 ವರ್ಷ ಇತ್ತು. ಎಸ್ ಡಿಎಫ್ ಪಕ್ಷ ಸಂಸ್ಥಾಪನಾ ದಿನಾಚರಣೆಯಲ್ಲಿ 250 ನಿಮಿಷಗಳ ಸುದೀರ್ಘ ಭಾಷಣ ಮಾಡಿದರು. 25 ವರ್ಷಗಳ ನಮ್ಮ ಆಡಳಿತದಲ್ಲಿ 11 ವರ್ಷ ಸರಾಸರಿ ಆಯುಷ್ಯ ಹೆಚ್ಚಾಗಿದೆ. ನಮ್ಮ ಗುರಿ ಏನೆಂದರೆ, ಸಿಕ್ಕಿಂ ಜನರ ಸರಾಸರಿ ಆಯುಷ್ಯ 100 ವರ್ಷ ತಲುಪಬೇಕು ಎಂದಿದ್ದಾರೆ.

ಚಾಮ್ಲಿಂಗ್ ಅವರಿಗೆ ವಿರೋಧ ಪಕ್ಷದಿಂದ ಕಠಿಣ ಸವಾಲು ಎದುರಾಗಿದೆ. ಇನ್ನು ಭಾರತೀಯ ಫುಟ್ಬಾಲ್ ನ ಮಾಜಿ ನಾಯಕ ಬೈಚುಂಗ್ ಭುಟಿಯಾ ಸ್ಥಾಪಿಸಿದ ಹಮ್ರೋ ಸಿಕ್ಕಿಂ ಪಾರ್ಟಿ ಕೂಡ ಭಾರೀ ಸವಾಲು ಒಡ್ಡುತ್ತಿದೆ. ಇನ್ನು ಮೊನ್ನೆಯ ಭಾಷಣದಲ್ಲಿ ಮಾತನಾಡುತ್ತಾ ಚಾಮ್ಲಿಂಗ್, ಪ್ರತಿ ಕುಟುಂಬಕ್ಕೂ ಉದ್ಯೋಗ ನೀಡಿರುವ ಮೊದಲ ರಾಜ್ಯ ಸಿಕ್ಕಿಂ ಎಂದಿದ್ದಾರೆ.

ಜೀವ ಉಳಿಸಿದ ಸೈನಿಕರಿಗೆ ಕಣ್ಣೀರಿಟ್ಟು ಧನ್ಯವಾದ ಸಲ್ಲಿಸಿದ ಮಹಿಳೆಜೀವ ಉಳಿಸಿದ ಸೈನಿಕರಿಗೆ ಕಣ್ಣೀರಿಟ್ಟು ಧನ್ಯವಾದ ಸಲ್ಲಿಸಿದ ಮಹಿಳೆ

ಈಚೆಗಷ್ಟೇ ಹನ್ನೆರಡು ಸಾವಿರಕ್ಕೂ ಹೆಚ್ಚು ಯುವಕ-ಯುವತಿಯರನ್ನು ಸರಕಾರಿ ಉದ್ಯೋಗಕ್ಕೆ ಚಾಮ್ಲಿಂಗ್ ನೇಮಿಸಿದ್ದಾರೆ. 'ಒಂದು ಕುಟುಂಬ ಒಂದು ಉದ್ಯೋಗ ಯೋಜನೆ' ಅಡಿಯಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಮಂದಿಗೆ ಸರಕಾರಿ ಉದ್ಯೋಗ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಹನ್ನೆರಡನೇ ತರಗತಿ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ಐವತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪುಕ್ಕಟೆ ಲ್ಯಾಪ್ ಟಾಪ್ ವಿತರಿಸುತ್ತಿದೆ. ಈ ಮಧ್ಯೆ ವಿರೋಧ ಪಕ್ಷಗಳು ಪವನ್ ಚಾಮ್ಲಿಂಗ್ ವಿರುದ್ಧ ಭಾರೀ ಭ್ರಷ್ಟಾಚಾರದ ಆರೋಪ ಮಾಡಿವೆ. ಸದ್ಯಕ್ಕಂತೂ ದೀರ್ಘಾವಧಿಗೆ ಮುಖ್ಯಮಂತ್ರಿ ಹುದ್ದೆ ನಿರ್ವಹಿಸುತ್ತಿರುವ ದಾಖಲೆಗೆ ಪವನ್ ಚಾಮ್ಲಿಂಗ್ ಭಾಜನರಾಗಿದ್ದಾರೆ.

English summary
“The life expectancy right now is 71 years, up from 60 years in 1994, when we came in power,” Sikkim CM Pawan Chamling said on Sunday while kickstarting the campaign on the SDF’s foundation day with a 250-minute speech.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X