ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಲಸಿಕೆಯ ಕಚ್ಚಾ ಸಾಮಗ್ರಿ ನಿರ್ಬಂಧ ತೆರವುಗೊಳಿಸಿ: ಅಮೆರಿಕಕ್ಕೆ ಮನವಿ

|
Google Oneindia Kannada News

ನವದೆಹಲಿ, ಏಪ್ರಿಲ್ 16: ಲಸಿಕೆಗಳಿಗೆ ಅತ್ಯಗತ್ಯವಾಗಿರುವ ಕಚ್ಚಾ ಸಾಮಗ್ರಿಗಳ ರಫ್ತಿನ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದಾರ್ ಪೂನಾವಲ್ಲಾ ಮನವಿ ಮಾಡಿದ್ದಾರೆ. ಕೋವಿಡ್ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಈ ಸಾಮಗ್ರಿಗಳು ಬಹಳ ಮುಖ್ಯವಾಗಿವೆ ಎಂದು ಅವರು ಹೇಳಿದ್ದಾರೆ.

ಆಸ್ಟ್ರಾಜೆನಿಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ಸೆರಮ್ ಇನ್‌ಸ್ಟಿಟ್ಯೂಟ್ ಭಾರತದಲ್ಲಿ ಉತ್ಪಾದಿಸುತ್ತಿದೆ. ಈ ಲಸಿಕೆಗಳನ್ನು ಭಾರತದಲ್ಲಿ ವ್ಯಾಪಕವಾಗಿ ಬಳಸುತ್ತಿದ್ದು, ಒಪ್ಪಂದಕ್ಕೆ ಅನುಗುಣವಾಗಿ ವಿವಿಧ ದೇಶಗಳಿಗೆ ಸಹ ಪೂರೈಕೆ ಮಾಡಲಾಗುತ್ತಿದೆ.

ಕಚ್ಚಾ ಸಾಮಗ್ರಿ ಮೇಲೆ ಅಮೆರಿಕ, ಯುರೋಪ್ ನಿಷೇಧ: ಭಾರತದಲ್ಲಿ ಲಸಿಕೆ ಉತ್ಪಾದನೆಗೆ ತೊಂದರೆಕಚ್ಚಾ ಸಾಮಗ್ರಿ ಮೇಲೆ ಅಮೆರಿಕ, ಯುರೋಪ್ ನಿಷೇಧ: ಭಾರತದಲ್ಲಿ ಲಸಿಕೆ ಉತ್ಪಾದನೆಗೆ ತೊಂದರೆ

ಕೆಲವು ದಿನಗಳ ಹಿಂದಷ್ಟೇ ಆದಾರ್ ಪೂನಾವಲ್ಲಾ ಅವರು ಕೋವಿಡ್ ಲಸಿಕೆಗೆ ಅಗತ್ಯವಾದ ಕಚ್ಚಾ ಸಾಮಗ್ರಿಗಳ ಕೊರತೆಗೆ ಅಮೆರಿಕ ಹಾಗೂ ಯುರೋಪಿಯನ್ ದೇಶಗಳು ವಿಧಿಸಿರುವ ರಫ್ತು ನಿರ್ಬಂಧ ಕಾರಣ ಎಂದು ತಿಳಿಸಿದ್ದರು.

 SII CEO Adar Poonawalla Urges US To Lift Ban On Raw Material Exports

'ಗೌರವಾನ್ವಿತ ಅಧ್ಯಕ್ಷರೇ, ಈ ವೈರಸ್ ಸೋಲಿಸುವ ಹೋರಾಟದಲ್ಲಿ ನಾವು ನಿಜಕ್ಕೂ ಒಗ್ಗಟ್ಟಿನಿಂದ ಇರುವುದಾದರೆ, ಅಮೆರಿಕದ ಹೊರಗೆ ಕಚ್ಚಾ ಸಾಮಗ್ರಿಗಳ ರಫ್ತು ಮಾಡುವುದರ ಮೇಲೆ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸುವಂತೆ ಅಮೆರಿಕದ ಹೊರಗಿನ ಲಸಿಕೆ ಉದ್ಯಮದ ಪರವಾಗಿ ವಿನಮ್ರತೆಯಿಂದ ಕೋರಿಕೊಳ್ಳುತ್ತೇನೆ. ಇದರಿಂದ ಲಸಿಕೆ ಉತ್ಪಾದನೆ ಚುರುಕುಗೊಳ್ಳಲಿದೆ. ನಿಮ್ಮ ಆಡಳಿತದ ಬಳಿ ಎಲ್ಲ ವಿವರಗಳಿವೆ' ಎಂದು ಆದಾರ್ ಟ್ವೀಟ್ ಮಾಡಿದ್ದಾರೆ.

ಕೋವಿಶೀಲ್ಡ್ ಲಸಿಕೆಗಳ ಪೂರೈಕೆಯಲ್ಲಿ ವಿಳಂಬವಾಗುತ್ತಿರುವುದಕ್ಕೆ ಬ್ರಿಟನ್ ಮೂಲದ ಆಸ್ಟ್ರಾಜೆನಿಕಾ ಕಂಪೆನಿಯು ಸೆರಮ್ ಸಂಸ್ಥೆಗೆ ಲೀಗಲ್ ನೋಟಿಸ್ ಕಳುಹಿಸಿದ ಬೆನ್ನಲ್ಲೇ ಅವರು ಈ ಟ್ವೀಟ್ ಮಾಡಿದ್ದಾರೆ.

English summary
SII CEO Adar Poonawalla urged US President Joe Biden to lift the ban on raw material exports to ramp up vaccine production.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X