ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವ ಪ್ರತಿಭೆಗಳಿಗೆ ದಿಗ್ಗಜರ ಮಾರ್ಗದರ್ಶನ: 100 ಅಂತಿಮ ಸ್ಪರ್ಧಿಗಳ ಪಟ್ಟಿ ಪ್ರಕಟಿಸಿದ ಯಂಗ್ ಆರ್ಟಿಸ್ಟ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 30: ಸಂಗೀತ ಮತ್ತು ನೃತ್ಯದ ವಿವಿಧ ಪ್ರಾಕಾರಗಳಲ್ಲಿ ರಾಷ್ಟ್ರೀಯ ಮಟ್ಟದ ಪ್ರತಿಭಾ ಸ್ಪರ್ಧೆ 'ಎಸ್‌ಐಎಫ್ಎಫ್ ಯಂಗ್ ಆರ್ಟಿಸ್ಸ್ 2020' ತನ್ನ ಅಂತಿಮ 100 ಸ್ಪರ್ಧಿಗಳ ಹೆಸರನ್ನು ಪ್ರಕಟಿಸಿದೆ. ತಮ್ಮ ಕಲಾ ಪ್ರತಿಭೆಗಳನ್ನು ಪ್ರದರ್ಶಿಸಲು ದೇಶದೆಲ್ಲೆಡೆಯಿಂದ 11 ರಿಂ 18 ವರ್ಷದ 12,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪ್ರವೇಶ ಪಡೆದಿದ್ದರು.

ಅಂತಾರಾಷ್ಟ್ರೀಯ ಸಂಗೀತ ದಿಗ್ಗಜರಾದ ಅಮ್ಜದ್ ಅಲಿ ಖಾನ್, ಟೆರೆನ್ಸ್ ಲೂಯಿಸ್, ಶೋವನಾ ನಾರಾಯಣ್, ಶಾಲ್ಮಲಿ ಖೋಲ್ಗಡೆ ಮತ್ತು ಅರುಣಾ ಶ್ರೀರಾಮ್, ಈ ವರ್ಷ ಆರಂಭದಲ್ಲಿ ಸ್ಪರ್ಧೆಗೆ ಚಾಲನೆ ನೀಡಿದ್ದರು.

SIFF Young Artiste Announces Top 100 Finalists For Its Scholorship Programme

ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾಗಿರುವ 100 ಸ್ಪರ್ಧಿಗಳು ಅತ್ಯಧಿಕ ಗುಣಮಟ್ಟದ ಮೆಂಟರ್‌ಶಿಪ್ ಕಾರ್ಯಕ್ರಮ ಮತ್ತು ಫೈನಲ್‌ನಲ್ಲಿ ನಗದು ಪುರಸ್ಕಾರ ಸೇರಿದಂತೆ ಒಟ್ಟು 25 ಲಕ್ಷ ರೂ ಮೌಲ್ಯದ ಪ್ರತಿಭಾ ಪುರಸ್ಕಾರವನ್ನು ಪಡೆದುಕೊಳ್ಳಲಿದ್ದಾರೆ. ಫೈನಲಿಸ್ಟ್‌ಗಳು ಪ್ರಸ್ತುತ ಯಂಗ್ ಆರ್ಟಿಸ್ಟ್ ಅಡ್ವಾನ್ಸ್‌ಡ್ ಮೆಂಟರ್‌ಶಿಪ್ ಪ್ರೋಗ್ರಾಮ್‌ಗೆ (ವೈಎಎಂಪಿ) ದಾಖಲಾಗುತ್ತಿದ್ದು, ಅವರ ಆಯ್ಕೆಯ ಕ್ಷೇತ್ರದಲ್ಲಿ ಅವರಿಗೆ ತರಬೇತಿ ನೀಡಲಾಗುತ್ತದೆ.

ಸಂಗೀತ ಮತ್ತು ನೃತ್ಯ ಕಲಾವಿದರಾದ ಡಾ. ಎಲ್ ಸುಬ್ರಮಣಿಯನ್, ಕವಿತಾ ಕೃಷ್ಣಮೂರ್ತಿ ಮತ್ತು ಮಾಧವಿ ಮುದ್ಗಲ್ ಅವರು ಸ್ಪರ್ಧಿಗಳಿಗೆ ತರಬೇತಿ ನೀಡಲು ಒಪ್ಪಿಗೆ ನೀಡಿದ್ದಾರೆ. ಜತೆಗೆ, ವಿವಿಧ ಕ್ಷೇತ್ರಗಳಲ್ಲಿ ಪರಿಣತರಾದ ರುಕ್ಮಿಣಿ ವಿಜಯ್ ಕುಮಾರ್ (ಭರತನಾಟ್ಯ), ಅನುಪಮಾ ಭಾಗವತ್ (ಸಿತಾರ್/ಸರೋದ್), ನಿಖಿತಾ ಗಾಂಧಿ (ಭಾರತೀಯ ಮತ್ತು ಪಾಶ್ಚಾತ್ಯ ಸಂಗೀತ), ಸಾಗರ್ ಬೋರಾ (ಹಿಪ್-ಹಾಪ್) ಮತ್ತು ಇತರರು ನಿರ್ದಿಷ್ಟ ವಿಭಾಗಗಳಲ್ಲಿ ಸಹಾಯ ಮಾಡಲಿದ್ದಾರೆ. ಅತ್ಯಧ್ಬುತ ಪ್ರತಿಭೆಯನ್ನು ಗುರುತಿಸುವ ಫೈನಲ್ ಸ್ಪರ್ಧೆಯನ್ನು ಕೋವಿಡ್ 19 ಸನ್ನಿವೇಶ ಮತ್ತು ಆ ಸಮಯದಲ್ಲಿ ಸರ್ಕಾರ ಹೊರಡಿಸುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಆಯೋಜಿಸಲಾಗುವುದು.

'ಈ ಮಹಾನ್ ಪ್ರತಿಭೆಗಳನ್ನು ಹೊರತೆಗೆಯುವ ಪ್ರಕ್ರಿಯೆಗೆ ಸಾಕ್ಷಿಯಾಗುತ್ತಿರುವುದು ನನಗೆ ಅಪಾರ ಖುಷಿಯಾಗುತ್ತಿದೆ. ಅಂತಿಮ ಸ್ಪರ್ಧಿಗಳ ಹೆಸರನ್ನು ಪ್ರಕಟಿಸಲು ನಮಗೆ ತುಂಬಾ ಹೆಮ್ಮೆಯಾಗುತ್ತಿದೆ. ಈ ಪ್ರಯತ್ನಕ್ಕೆ ನಮ್ಮೊಂದಿಗೆ ಕೈಜೋಡಿಸಿದ ಎಲ್ಲ ಮೆಂಟರ್‌ಗಳು ಮತ್ತು ತೀರ್ಪುಗಾರರಿಗೆ ನಾವು ಕೃತಜ್ಞರಾಗಿದ್ದೇವೆ' ಎಂದು ಯಂಗ್ ಆರ್ಟಿಸ್ಟ್‌ನ ಸಹ ಸಂಸ್ಥಾಪಕಿ ಕವಿತಾ ಅಯ್ಯರ್ ತಿಳಿಸಿದ್ದಾರೆ.

ಯಂಗ್ ಆರ್ಟಿಸ್ಟ್ ಮೊದಲ ಆವೃತ್ತಿಯು ದೇಶದ ವಿವಿಧ ಭಾಗಗಳಿಂದ ಪ್ರವೇಶಗಳು ಹರಿದುಬರುವುದರೊಂದಿಗೆ ಪ್ರಚಂಡ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಉಜ್ಜಯಿನಿಯಿಂದ ಇಂಫಾಲ, ರಾಜಧಾನಿ ದೆಹಲಿಯಿಂದ ಸಾಂಸ್ಕೃತಿಕ ಶ್ರೀಮಂತ ದಿಮಾಪುರದವರೆಗೆ, ಉತ್ತರ 24 ಪರಗಣಗಳಿಂದ ಉಡುಪಿ ಮತ್ತು ಕೋಯಿಕ್ಕೋಡ್‌ನವರೆಗೆ, ಹೀಗೆ ಎಲ್ಲ ಕಡೆಗಳಿಂದಲೂ ಸ್ಪರ್ಧಿಗಳು ಬಂದಿದ್ದರು. ದೇಶವು ಲಾಕ್‌ಡೌನ್‌ಗೆ ಒಳಗಾಗಿದ್ದರಿಂದ ಮತ್ತು ಕಲೆಯು ಹೆಚ್ಚಿನವರಿಗೆ ಐಷಾರಾಮಿ ಸಂಗತಿಯಾಗಿರುವುದರಿಂದ ಈ ಸ್ಪರ್ಧೆಯನ್ನು ಔನ್ನತ್ಯದದ ಹಂಬಲವನ್ನು ಮುಂದುವರಿಸಿದೆವು. ಯಾರೂ ಊಹಿಸಲಾಗದ ರೀತಿಯಲ್ಲಿ ಆಡಿಷನ್‌ಗಳನ್ನು ನಡೆಸಿದೆವು.

ಅಂತಿಮ ಹಂತದ ಸ್ಪರ್ಧಿಗಳು ತಮ್ಮ ಅದ್ಭುತ ಪರಾಕ್ರಮವನ್ನು ಮತ್ತು ತಮಗೆ ಸಂಬಂಧಿತ ಕ್ಷೇತ್ರದಲ್ಲಿನ ಹಿಡಿತವನ್ನು ಪ್ರದರ್ಶಿಸಿದರು. ಜತೆಗೆ ಕಲೆಯನ್ನು ಸಾಧಿಸುವುದರಲ್ಲಿನ ಅಪೂರ್ವ ತುಡಿತವನ್ನು ತೋರಿಸಿದರು. ಪ್ರತಿಯೊಬ್ಬರೂ ಅವರದೇ ರೀತಿಯಲ್ಲಿ ವಿಭಿನ್ನವಾಗಿದ್ದರು.

SIFF Young Artiste Announces Top 100 Finalists For Its Scholorship Programme

ಕಲಾವಿದ ಕುಟುಂಬದಿಂದ ಬಂದವರು ಮತ್ತು ತಮ್ಮ ನೃತ್ಯದ ಆಸಕ್ತಿಯನ್ನು ಯಾರೊಂದಿಗೂ ಹಂಚಿಕೊಳ್ಳಲು ಬಯಸದ ವಿದ್ಯಾರ್ಥಿಗಳನ್ನು ನಾವು ನೋಡಿದ್ದೇವೆ. ನಾವು ಭಾರತದ ಅತ್ಯುತ್ತಮ ಪ್ರತಿಭೆಯನ್ನು ಹುಡುಕುವ ಪ್ರಕ್ರಿಯೆಯಲ್ಲಿ ಸಾವಿರಾರು ಬಗೆಯ ಕಥೆಗಳಿಗೆ ಸಾಕ್ಷಿಯಾಗಿದ್ದೇವೆ. ಕಲೆಗೆ ಯಾವುದೇ ತಾರತಮ್ಯ, ಗಡಿ ಗೊತ್ತಿಲ್ಲ. ಯಾರು ಬೇಕಾದರೂ ಕಲಾವಿದರಾಗಬಹುದು.

'ಭಾರತದಲ್ಲಿನ ಯುವ ಪ್ರತಿಭೆಗಳಲ್ಲಿನ ಗುಪ್ತ ಸಾಮರ್ಥ್ಯವನ್ನು ಪರಿಗಣಿಸಲು ಮತ್ತು ಅವುಗಳನ್ನು ಹೊರತೆಗೆಯಲು ರಾಷ್ಟ್ರೀಯ ಮಟ್ಟದ ವೇದಿಕೆಯನ್ನು ಸ್ಥಾಪಿಸುವ ಉದ್ದೇಶದಿಂದ ಯಂಗ್ ಆರ್ಟಿಸ್ಟ್ ಸ್ಥಾಪನೆಯಾಗಿದೆ. ಇದು ಅವರ ಕೌಶಲವನ್ನು ಒರೆಗೆ ಹಚ್ಚಲು ಪೂರಕವಾದ ಸಮೃದ್ಧ ಕಲಿಕಾ ನೆಲೆಯನ್ನು ಕಲ್ಪಿಸುತ್ತದೆ. ಹಾಗೆಯೇ ಮೆಂಟರ್ ಶಿಪ್ ಕಾರ್ಯಕ್ರಮ ಮತ್ತು ವೈವಿಧ್ಯಮಯ ಕಲಾ ವೇದಿಕೆಗಳೊಂದಿಗೆ ಸಂವಾದಿಸುವ ಅವಕಾಶವು ಪ್ರತಿಭೆಗಳು ತಮ್ಮ ಜ್ಞಾನ ಹಾಗೂ ಕಲಾ ಕೌಶಲ ಪ್ರದರ್ಶನದ ಸಾಧ್ಯತೆಗಳನ್ನು ವಿಸ್ತರಿಸುತ್ತದೆ' ಎಂದು ಎಸ್‌ಐಎಫ್ಎಫ್‌ನ ಟ್ರಸ್ಟಿ ಸಂದೀಪ್ ಸಿಂಘಾಲ್ ಹೇಳಿದ್ದಾರೆ.

ವೈಎಎಂಪಿ ಮಾಸ್ಟರ್‌ಕ್ಲಾಸ್‌ಗಳು, ಕಾರ್ಯಾಗಾರಗಳು ಮತ್ತು ಅಂತಿಮ ಸುತ್ತಿನ ಪ್ರದರ್ಶನಕ್ಕೆ ಸಿದ್ಧತೆ ನಡೆಸುತ್ತಿರುವ ಯಂಗ್ ಆರ್ಟಿಸ್ಟ್ ಸ್ಪರ್ಧಿಗಳ ನಡುವೆ ಸಂಯೋಜನೆಯನ್ನು ಸೃಷ್ಟಿಸುತ್ತದೆ. ಈ ಕಾರ್ಯಕ್ರಮ ಆರಂಭವಾದ ಸಂದರ್ಭದಿಂದಲೂ ಯಂಗ್ ಆರ್ಟಿಸ್ಟ್ ಸಂಸ್ಥೆಯು ಆಯ್ಕೆ ಪ್ರಕ್ರಿಯೆ ನಡೆಸಲು ತೀರ್ಪುಗಾರರ ಪ್ರತಿಷ್ಠಿತ ಸಮಿತಿಯನ್ನು ಒಳಗೊಂಡಿದೆ. ಈ ಪರಿಣತರು ಪ್ರತಿ 20 ವಿಭಾಗಗಳಿಗೂ ವೈಎಎಂಪಿಗಾಗಿ ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ.

'ಯಂಗ್ ಆರ್ಟಿಸ್ಟ್ ಮೆಂಟರ್‌ಶಿಪ್ ಕಾರ್ಯಕ್ರಮದೊಂದಿಗೆ ಭಾಗಿಯಾಗಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಭಾರತವು ಅವಕಾಶಕ್ಕಾಗಿ ಕಾದಿರುವ ಎಲೆಮರೆಕಾಯಿಯಂತಹ ಪ್ರತಿಭೆಗಳಿಂದ ತುಂಬಿಕೊಂಡಿದೆ. ಈ ಬೆಳೆಯುತ್ತಿರುವ ಕಲಾವಿದರನ್ನು ಭೇಟಿ ಮಾಡುವುದು ಪ್ರೋತ್ಸಾಹದಾಯಕ ಸಂಗತಿ.

ಎಸ್‌ಐಎಫ್ಎಫ್-ಯಂಗ್ ಆರ್ಟಿಸ್ಟ್‌ ಅನ್ನು ನಾನು ಇದಕ್ಕಾಗಿ ಶ್ಲಾಘಿಸುತ್ತೇನೆ. ಅವರು ನಮ್ಮ ದೇಶದ ಯುವ ಪ್ರತಿಭೆಗಳನ್ನು ಪತ್ತೆಹಚ್ಚುವ ಮತ್ತು ಅವರನ್ನು ಪೋಷಿಸುವ ಅದ್ಭುತ ಕೆಲಸವನ್ನು ಮಾಡುತ್ತಿದ್ದಾರೆ' ಎಂದು ಯಂಗ್ ಆರ್ಟಿಸ್ಟ್‌ನ ಮೆಂಟರ್ ಡಾ. ಎಲ್. ಸುಬ್ರಮಣಿಯನ್ ತಿಳಿಸಿದ್ದಾರೆ.

ಯಂಗ್ ಆರ್ಟಿಸ್ಟ್ ಅಡ್ವಾನ್ಸಡ್ ಮೆಂಟರ್‌ಶಿಪ್ ಕಾರ್ಯಕ್ರಮವು ಭಾರತದೆಲ್ಲೆಡೆಗಿನ ವಿದ್ಯಾರ್ಥಿಗಳಿಗೆ ಚಿಮ್ಮುಹಲಗೆಯಾಗುವ ವೇದಿಕೆ ಕಲ್ಪಿಸುವ ಹಾಗೂ ಸಮಾನಮನಸ್ಕ ಕಲಾವಿದರ ಸಮುದಾಯವನ್ನು ಸ್ಥಾಪಿಸುವ ಮೂಲಕ ಕಲಾ ಶಿಕ್ಷಣದ ಗೇಮ್ ಚೇಂಜರ್ ಎನಿಸಿಕೊಳ್ಳಲು ಸಿದ್ಧತೆ ನಡೆಸಿದೆ. ಅಂತಿಮ 100 ಸ್ಪರ್ಧಿಗಳ ಸಂಪೂರ್ಣ ಪಟ್ಟಿಯನ್ನು ನೋಡಲು ನೀವು ಯಂಗ್ ಆರ್ಟ್ಸಿಸ್ಟ್ ವೆಬ್‌ಸೈಟ್ ಭೇಟಿ ಮಾಡಬಹುದು.

ಯಂಗ್ ಆರ್ಟಿಸ್ಟ್ 2020 ಭಾರತದೆಲ್ಲೆಡೆಗಿನ ಶಾಲಾ ಮಕ್ಕಳಿಗಾಗಿ ರಾಷ್ಟ್ರೀಯ ಮಟ್ಟದ ಪ್ರತಿಭಾ ಪ್ರದರ್ಶನದ ಸ್ಪರ್ಧೆಯಾಗಿದೆ. ವಿದ್ಯಾರ್ಥಿಗಳಿಗೆ ಉತ್ತೇಜನ ಮತ್ತು ಮಾನ್ಯತೆ ನೀಡುವುದು ಈ ವೇದಿಕೆಯ ಉದ್ದೇಶ. ಸಾಧ್ಯವಾದಷ್ಟು ಹೆಚ್ಚು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಮತ್ತು ಪ್ರಶಸ್ತಿ ನೀಡಲು ಯಂಗ್ ಆರ್ಟಿಸ್ಟ್ ಬಯಸುತ್ತದೆ. ಹೀಗಾಗಿ ಎಲ್ಲ 20 ವಿಭಾಗಗಳಲ್ಲಿ ಅಂತಿಮ ಹಂತಕ್ಕೆ ಆಯ್ಕೆಯಾದವರಿಗೆ 25 ಲಕ್ಷ ರೂ ಮೌಲ್ಯದ 100 ಸ್ಕಾಲರ್‌ಶಿಪ್‌ಗಳನ್ನು ನೀಡುತ್ತಿದೆ.

ಅದ್ಭುತ ವಿದ್ಯಾರ್ಥಿ ಪ್ರತಿಭೆಗಳನ್ನು ಹುಡುಕುವ ಮತ್ತು ಸಂಭ್ರಮಿಸುವುದು ಹಾಗೂ ಅವರ ಕಲಾ ಪ್ರಯಾಣದಲ್ಲಿ ಅವರನ್ನು ಬೆಂಬಲಿಸುವುದು ಇದರ ಗುರಿ. ರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಪ್ರದರ್ಶನ ನೀಡುವುದು, ಗುರುತಿಸಿಕೊಳ್ಳುವುದು ಮತ್ತು ಅಮ್ಜದ್ ಅಲಿ ಖಾನ್, ಟೆರೆನ್ಸ್ ಲೂಯಿಸ್, ಶೋವನಾ ನಾರಾಯಣ್, ಶಾಲ್ಮಲಿ ಖೋಲ್ಗಡೆ, ಅರುಣ ಸಾಯಿರಾಮ್ ಮತ್ತು ಇನ್ನೂ ಅಧಿಕ ಮಹಾನ್ ಹಾಗೂ ದಿಗ್ಗಜ ಕಲಾವಿದರಿಂದ ತರಬೇತಿ ಪಡೆದುಕೊಳ್ಳುವುದು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಒಮ್ಮೆ ಸಿಗುವ ಅವಕಾಶ. ಅವರ ಮಾರ್ಗದರ್ಶನ, ತರಬೇತಿ ಮತ್ತು ಜ್ಞಾನವು ಯಂಗ್ ಆರ್ಟಿಸ್ಟ್ ಅನುಭವ ಮೂಡಿಸುವುದರಲ್ಲಿ ಅತ್ಯಂತ ನಿರ್ಣಾಯಕವಾಗಿವೆ.

Facebook: Young Artiste 2020

Instagram: Young Artiste 2020

Twitter: Young Artiste 2020

ಎಸ್‌ಐಎಫ್ಎಫ್ ಬಗ್ಗೆ

ಸಿಂಘಾಲ್ ಅಯ್ಯರ್ ಫ್ಯಾಮಿಲಿ ಫೌಂಡೇಷನ್ (ಎಸ್‌ಐಎಫ್ಎಫ್) ಒಂದು ಬೆಂಗಳೂರು ಮೂಲದ ಪರೋಪಕಾರಿ ಸಂಸ್ಥೆಯಾಗಿದ್ದು, ಉತ್ತಮ ಶಿಕ್ಷಣ ಮತ್ತು ಭಾರತೀಯ ಸಂಗೀತ ಹಾಗೂ ಕಲಾ ಪರಂಪರೆಯೆಡೆಗಿನ ನಮ್ಮ ಪ್ರೀತಿಯನ್ನು ಉತ್ತೇಜಿಸುವ ಉದ್ದೇಶದಿಂದ ಸ್ಥಾಪನೆಯಾಗಿದೆ.

Web: http://siff.in/

English summary
SIFF Young Artiste 2020 has announced top 100 finalists for its scholorship programme where the talents to be mentored by maestros.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X