ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇತರೆ ಲಸಿಕೆಗಳಿಗೆ ಹೋಲಿಸಿದರೆ ನಮ್ಮ ಲಸಿಕೆಗಳ ಅಡ್ಡಪರಿಣಾಮ ನಗಣ್ಯ: ಸರ್ಕಾರ

|
Google Oneindia Kannada News

ನವದೆಹಲಿ, ಜನವರಿ 19: ಸೆರಮ್ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಗಳ ಅಡ್ಡಪರಿಣಾಮಗಳು ಇತರೆ ಕೋವಿಡ್-19 ಲಸಿಕೆಗಳಿಗೆ ಹೋಲಿಸಿದರೆ ನಗಣ್ಯ ಎಂದು ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪಾಲ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಲಸಿಕೆ ಕುರಿತು ಆರೋಗ್ಯ ಕಾರ್ಯಕರ್ತರಲ್ಲಿ ಉಂಟಾಗಿರುವ ಭಯವನ್ನು ನಿವಾರಿಸಲು ಪ್ರಯತ್ನಿಸಿದರು.

ಕೋವಿಡ್ ಲಸಿಕೆ ಅಭಿಯಾನ ಯಶಸ್ವಿ; ಡಾ. ಕೆ. ಸುಧಾಕರ್ಕೋವಿಡ್ ಲಸಿಕೆ ಅಭಿಯಾನ ಯಶಸ್ವಿ; ಡಾ. ಕೆ. ಸುಧಾಕರ್

'ವಿಶ್ವ ಆರೋಗ್ಯ ಸಂಸ್ಥೆಯು ಇತರೆ ದೇಶಗಳಲ್ಲಿ ಆದ್ಯತಾ ಗುಂಪುಗಳಿಗೆ ಲಸಿಕೆ ನೀಡಲು ಒತ್ತಾಯಿಸುತ್ತಿದ್ದರೆ ನಮ್ಮ ವೈದ್ಯರು ಮತ್ತು ನರ್ಸ್‌ಗಳು ಲಸಿಕೆಯನ್ನು ನಿರಾಕರಿಸುತ್ತಿದ್ದಾರೆ. ಇದು ಬಹಳ ಗಂಭೀರ ಸನ್ನಿವೇಶ. ನನಗೆ ದುಃಖವಾಗಿದೆ. ಕೈಜೋಡಿಸಿ ಅವರಿಗೆ ಮನವಿ ಮಾಡುತ್ತಿದ್ದೇನೆ- ನಾವು ಕೋವಿಡ್ ಹೊರತಾದ ಸೇವೆಗಳನ್ನು ಕೂಡ ಶುರುಮಾಡಬೇಕಿದೆ. ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಅಗತ್ಯವಿದೆ. ಏಕೆಂದರೆ ಅವರನ್ನು ಅಪಾಯದಲ್ಲಿ ಇರಿಸಲು ಸಾಧ್ಯವಿಲ್ಲ' ಎಂದು ಪಾಲ್ ಹೇಳಿದರು.

 Side Effects To Indias Vaccine Less Than Negligible As Compared To Other Vaccines

ತಾವು ಕೂಡ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಂಡಿದ್ದು, ಇದುವರೆಗೂ ಯಾವುದೇ ಅಡ್ಡಪರಿಣಾಮ ಕಾಣಿಸಿಕೊಂಡಿಲ್ಲ ಎಂದು ತಮ್ಮನ್ನು ಉದಾಹರಣೆಯಾಗಿ ನೀಡಿದ್ದಾರೆ.

ನಮಗೆ ಮಾತ್ರ ಏಕೆ ಕೋವ್ಯಾಕ್ಸಿನ್ ಲಸಿಕೆ?: ಸರ್ಕಾರಕ್ಕೆ ನಿವಾಸಿ ವೈದ್ಯರ ಪ್ರಶ್ನೆನಮಗೆ ಮಾತ್ರ ಏಕೆ ಕೋವ್ಯಾಕ್ಸಿನ್ ಲಸಿಕೆ?: ಸರ್ಕಾರಕ್ಕೆ ನಿವಾಸಿ ವೈದ್ಯರ ಪ್ರಶ್ನೆ

'ಲಸಿಕೆ ಅಭಿಯಾನ ಆರಂಭವಾದ ಮೊದಲ ಮೂರು ದಿನದಲ್ಲಿ ಜಗತ್ತಿನಲ್ಲಿಯೇ ಅತಿ ಕಡಿಮೆ ಅಡ್ಡ ಪರಿಣಾಮದ ಪ್ರಕರಣಗಳು ಭಾರತದಲ್ಲಿ ವರದಿಯಾಗಿದೆ. ದೇಶದಲ್ಲಿ ಪ್ರತಿರಕ್ಷಣಾ ಕಾರ್ಯಕ್ರಮದ ಬಳಿಕ ಉಂಟಾಗಬಹುದಾದ ಅಡ್ಡಪರಿಣಾಮಗಳನ್ನು ನಿಭಾಯಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ' ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

English summary
Niti Aayog member Dr VK Paul said that the side effects to Covishield, Covaxin less than negligible as compared to other vaccines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X