ಮೋದಿ ನೈಜ ಹಿಂದೂವಲ್ಲ ಎಂದ ಕಪಿಲ್ ಸಿಬಲ್ ಗೆ ಬಿಜೆಪಿ ತಿರುಗೇಟು

Subscribe to Oneindia Kannada

ನವದೆಹಲಿ, ನವೆಂಬರ್ 30: ಪ್ರಧಾನಿ ನರೇಂದ್ರ ಮೋದಿ ನಿಜವಾದ ಹಿಂದೂವಲ್ಲ. ಅವರು 'ಹಿಂದೂ ಧರ್ಮ'ವನ್ನು ತೊರೆದಿದ್ದು 'ಹಿಂದುತ್ವ'ಕ್ಕೆ ಮುಜುಗರ ತಂದಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ.

ಸೋಮನಾಥ ದೇವಾಲಯ ಸಂದರ್ಶಕರ ಪುಸ್ತಕದಲ್ಲಿ ರಾಹುಲ್ ಏನು ಬರೆದ್ರು?

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತ್ ನ ಸೋಮನಾಥ್ ದೇವಸ್ಥಾನಕ್ಕೆ ಭೇಟಿ ನಿಡುವ ವೇಳೆ ಹಿಂದೂಯೇತರ ಸಂದರ್ಶಕರ ಪುಸ್ತಕದಲ್ಲಿ ಹೆಸರು ಬರೆದಿದ್ದಾರೆ ಎಂಬುದು ಬುಧವಾರ ವಿವಾದ ಸೃಷ್ಟಿಸಿತ್ತು. ಇದರ ಮುಂದುವರಿದ ಭಾಗವಾಗಿ ಸಿಬಲ್ ಈ ಹೇಳಿಕೆ ನೀಡಿದ್ದಾರೆ.

Sibal says Modi not a real Hindu; BJP hits back

"ಪ್ರಧಾನಿ ದಿನಕ್ಕೆ ಎಷ್ಟು ಬಾರಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಎಂಬುದನ್ನು ನಾನು ಕೇಳಲು ಇಚ್ಛಿಸುತ್ತೇನೆ. ಹಿಂದೂ ಧರ್ಮವನ್ನು ಗೌರವಿಸುವವರು ದೇವಸ್ಥಾನವನ್ನೂ ಗೌರವಿಸುತ್ತಾರೆ. ನೀವು ಹಿಂದೂ ಧರ್ಮವನ್ನು ಬಿಟ್ಟಿದ್ದಾರೆ," ಎಂಬುದಾಗಿ ಸಿಬಲ್ ಟೀಕಿಸಿದ್ದಾರೆ.

ನೀವು ಹಿಂದುತ್ವಕ್ಕೆ ಅವಮಾನಿಸಿದ್ದೀರಿ. ಹಾಗಾಗಿ ನೀವು ನಿಜವಾದ ಹಿಂದೂವಲ್ಲ ಎಂದು ಸಿಬಲ್ ಹೇಳಿದ್ದಾರೆ. "ಪ್ರತಿ ಭಾರತೀಯರನ್ನೂ ತಮ್ಮ ಸಹೋದರ, ಸಹೋದರಿ, ತಾಯಿ ರೀತಿಯಲ್ಲಿ ನೋಡುತ್ತಾರೋ ಅವರು ನಿಜವಾದ ಹಿಂದೂಗಳು," ಎಂದು ಸಿಬಲ್ ಹೇಳಿದ್ದಾರೆ.

ಸಿಬಲ್ ಹೇಳಿಕೆಗೆ ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು 'ರಾಮ ಭಕ್ತ' ಯಾರು 'ರೋಮ್ ಭಕ್ತ' ಯಾರು ಎಂದು ಜನರಿಗೆ ಗೊತ್ತಿದೆ ಎಂದು ನೇರವಾಗಿ ಇಟಲಿ ಮೂಲದ ಸೋನಿಯಾ ಗಾಂಧಿ ಕಾಲೆಳೆದಿದ್ದಾರೆ. ಕಾಂಗ್ರೆಸ್ ಹಿಂದೂಗಳನ್ನು ಉಗ್ರಗಾಮಿಗಳು ಎಂದೂ ಕರೆದಿತ್ತು ಎಂಬುದಾಗಿ ರಾವ್ ಟೀಕಿಸಿದ್ದಾರೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress leader and former Union minister Kapil Sibal today sparked a row, claiming that Prime Minister Narendra Modi is not a "real Hindu" as he has "quit" Hinduism and embraced Hindutva.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ