ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಯಾಚಿನ್ ಪವಾಡ: ಹನುಮಂತಪ್ಪ ಬಗ್ಗೆ ಅವರ ಅವ್ವ ಹೇಳಿದ್ದೇನು?

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಫೆ. 09: 'ಸಿಯಾಚಿನ್ ಹಿಮರಾಶಿಯಲ್ಲಿ ನನ್ನ ಮಗ ಇದ್ದ ಸೈನಿಕ ತಂಡ ಕಣ್ಮರೆಯಾದಾಗಿನಿಂದಲೂ ಜೀವ ಹೊಡೆದುಕೊಳ್ಳುತ್ತಿತ್ತು. ಆದರೆ, ಎಲ್ಲೋ ಒಂದು ಕಡೆ ಆತ ಬದುಕಿರುತ್ತಾನೆ ಎಂಬ ಆಶಾಭಾವನೆ ಇತ್ತು. ಅವನನ್ನು ನೋಡಲು ದೆಹಲಿಗೆ ಹೊರಟ್ಟಿದ್ದೇವೆ' ಎಂದು ಲ್ಯಾನ್ಸ್ ನಾಯಕ್ ಹನುಮಂತಪ್ಪ ಅವರ ಅವ್ವ ಬಸಮ್ಮ ಒನ್ ಇಂಡಿಯಾ ಪ್ರತಿನಿಧಿಗೆ ತಿಳಿಸಿದ್ದಾರೆ.['ಅಮರ' ಯೋಧ ಹನುಮಂತಪ್ಪನ ಅಂತಿಮ ಯಾತ್ರೆಯ ಚಿತ್ರಗಳು]

ಉತ್ತರ ಕರ್ನಾಟಕದ ವೀರ ಯೋಧ ಹನುಮಂತಪ್ಪ ಅವರ ಆರೋಗ್ಯ ಚೇತರಿಕೆಗಾಗಿ ಅವರ ಕುಟುಂಬ ಸೇರಿದಂತೆ ದೇಶದೆಲ್ಲೆಡೆ ಶುಭ ಹಾರೈಕೆಗಳು ಬಂದಿವೆ. 62 ವರ್ಷ ವಯಸ್ಸಿನ ಬೆಟದೂರಿನ ಬಸಮ್ಮ ಅವರು ಸಾವಿನ ಮನೆ ಕದ ತಟ್ಟಿಬಂದಿರುವ ಮಗ ಹನುಮಂತಪ್ಪನನ್ನು ಕಾಣಲು ಬಸಮ್ಮ ಅವರ ಕುಟುಂಬಸ್ಥರು ನವದೆಹಲಿಗೆ ಪ್ರಯಾಣಿಸುತ್ತಿದ್ದಾರೆ. [ವಿವರ ಇಲ್ಲಿ ಓದಿ]

ಯೋಧ ಹನುಮಂತಪ್ಪ ಅವರ ಪತ್ನಿ ಮಹಾದೇವಿ ಅವರು ಆನಂದ ಬಾಷ್ಪ ಸುರಿಸುತ್ತಿದ್ದಾರೆ. ಮೊದಲಿಗೆ ಸಿಯಾಚಿನ್ ಘಟನೆ ಬಗ್ಗೆ ಕೇಳಿದಾಗ ಸಹಜವಾಗಿ ಗಾಬರಿಯಾಯಿತು. ನಂತರ ಹಿಮದಲ್ಲಿ ಸಿಲುಕಿದ ಯೋಧರೆಲ್ಲರೂ ಮೃತಪಟ್ಟಿದ್ದಾರೆ ಎಂಬ ಸುದ್ದಿ ಕೇಳಿ ಆಘಾತವಾಯಿತು. ಆದರೆ, ದೇವರ ದಯೆಯಿಂದ ಶುಭ ಸುದ್ದಿ ಸಿಕ್ಕಿದೆ ಎಂದಿದ್ದಾರೆ.[ಹನುಮಂತಪ್ಪ ಆರೋಗ್ಯ ವಿಚಾರಿಸಿದ ಮೋದಿ]

ಹನುಮಂತಪ್ಪ ಅವರ ಊರು ಬೆಟದೂರಿನಲ್ಲಿ ಸಂಭ್ರಮ ಮನೆ ಮಾಡಿದೆ. ಆದಷ್ಟು ಬೇಗ ನಮ್ಮೂರಿನ ಯೋಧ ಗುಣಮುಖರಾಗಲಿ ಎಂದು ಶುಭ ಹಾರೈಸಿದ್ದಾರೆ. ಹನುಮಂತಪ್ಪ ಅವರ ತಾಯಿ ಬಸಮ್ಮ ಅವರ ಪ್ರತಿಕ್ರಿಯೆ, ಊರಿನವರ ಶುಭ ಹಾರೈಕೆ ವಿವರ ಮುಂದಿದೆ...

ಸಿಯಾಚಿನ್ ನಿರ್ಗಲ್ಲಿನಲ್ಲಿ ಪವಾಡ : ಬಸಮ್ಮ

ಸಿಯಾಚಿನ್ ನಿರ್ಗಲ್ಲಿನಲ್ಲಿ ಪವಾಡ : ಬಸಮ್ಮ

'ಅವನು ನಾನು ಹೆತ್ತ ಮಗ, ಚಿಕ್ಕಂದಿನಿಂದಲೂ ಕಷ್ಟ ಸಹಿಸುವುದು ಅವನಿಗೆ ತಿಳಿದಿದೆ. ಅವರು ಬದುಕಿ ಬರುತ್ತಾನೆ ಎಂಬ ಆಸೆ ನಮ್ಮೆಲ್ಲರಲ್ಲೂ ಇತ್ತು. ನಮ್ಮ ಪ್ರಾರ್ಥನೆ ದೇವರಿಗೆ ಮುಟ್ಟಿದೆ. ಅವ ನನ್ನ ಕನಸಿನಲ್ಲಿ ಬಂದು ನಾನು ಬದುಕಿದ್ದೇನೆ ಎಂದು ಹೇಳುತ್ತಿದ್ದ. ಹೀಗಾಗಿ ನಮಗೆ ಕಳೆದ ಎರಡು ದಿನದಿಂದ ಇನ್ನಷ್ಟು ಆಶಾಭಾವನೆ ಮೂಡಿತ್ತು' ಎಂದು ಬಸಮ್ಮ ಪ್ರತಿಕ್ರಿಯಿಸಿದ್ದಾರೆ.

ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದ ಯೋಧ

ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದ ಯೋಧ

ಮದ್ರಾಸ್ ರೆಜಿಮೆಂಟ್ ಗೆ ಸೇರಿದ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ ಅವರು ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದಿದ್ದಾರೆ. ಕಳೆದ ಆರು ದಿನಗಳಿಂದ ಸಿಯಾಚಿನ್‌ನ ನಿರ್ಗಲ್ಲಿನಲ್ಲಿ 25 ಅಡಿ ಆಳದ ಹಿಮದಲ್ಲಿ ಸಿಲುಕಿದ್ದ ಹನುಮಂತಪ್ಪ ಅವರನ್ನು ಸೋಮವಾರ ರಕ್ಷಣಾ ಕಾರ್ಯಚಾರಣೆ ಪಡೆ ಗುರುತಿಸಿತು. ನಾಡಿ ಮಿಡಿತ ಪರೀಕ್ಷಿಸಿ ಯೋಧ ಬದುಕಿದ್ದಾನೆ ಎಂದು ತಿಳಿದ ತಕ್ಷಣ ಆಸ್ಪತ್ರೆಗೆ ರವಾನಿಸಲಾಯಿತು.

ಕರ್ನಾಟಕದ ಇನ್ನುಳಿದ ಯೋಧರು ಹುತಾತ್ಮ

ಕರ್ನಾಟಕದ ಇನ್ನುಳಿದ ಯೋಧರು ಹುತಾತ್ಮ

ಕರ್ನಾಟಕದ ಹಾಸನದ ತೇಜೂರಿನ ಟಿ.ಟಿ ನಾಗೇಶ್, ಮೈಸೂರಿನ ಎಚ್​.ಡಿ.ಕೋಟೆ ತಾಲೂಕಿನ ಪಿ.ಎನ್. ಮಹೇಶ್ ಮತ್ತು ಧಾರವಾಡದ ಹನುಮಂತಪ್ಪ ಕೊಪ್ಪದ ಅವರು ಈ ಹಿಮಪಾತದಲ್ಲಿ ಸಿಲುಕಿದ್ದರು. ಇವರ ಪೈಕಿ ನಾಗೇಶ್ ಮತ್ತು ಮಹೇಶ್ ಮೃತಪಟ್ಟಿದ್ದರು.

ಫೆ.3ರಂದು ಮದ್ರಾಸ್ ರೆಜಿಮೆಂಟ್‌ಗೆ ಸೇರಿದ 10 ಯೋಧರು 19 ಸಾವಿರ ಅಡಿಗಳ ಎತ್ತರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಭಾರೀ ಹಿಮಪಾತ ಸಂಭವಿಸಿತ್ತು. ಹಿಮದಲ್ಲಿ ಸಿಲುಕಿದ್ದವರ ರಕ್ಷಣೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಬೆಟದೂರಿನಲ್ಲಿ ಸಂಭ್ರಮಾಚರಣೆ

ಬೆಟದೂರಿನಲ್ಲಿ ಸಂಭ್ರಮಾಚರಣೆ

ನಮ್ಮ ಪ್ರಾರ್ಥನೆ ಫಲಿಸಿದೆ. ಊರಿನಲ್ಲಿ ಇಂದು ಹಬ್ಬದ ವಾತಾವರಣ ಇದೆ. ರೈತರ ಮಗನಾಗಿರುವ ದೇಶದ ಯೋಧನಾಗಿ ಹನುಮಂತಪ್ಪ ಜೀವಂತ ಇರುವ ಬಗ್ಗೆ ಖಾತ್ರಿಯಾಗಿದ್ದು ಕೇಳಿ ಇಡೀ ಊರು ಸಂಭ್ರಮಿಸುತ್ತಿದೆ. ಚಿತ್ರದಲ್ಲಿ ಬಲ ಬದಿಯಲ್ಲಿರುವವರು ಹನುಮಂತಪ್ಪ ಅವರ ಪತ್ನಿ ಮಹಾದೇವಿ.

ಹನುಮಂತಪ್ಪ ಕುಟುಂಬಸ್ಥರಲ್ಲಿ ಸಂತಸ

ಟಿವಿ ಮಾಧ್ಯಮಗಳ ಮೂಲಕ ಸುದ್ದಿ ತಿಳಿಯಿತು. ಒಳ್ಳೆ ಟ್ರೀಟ್ ಮೆಂಟ್ ಸಿಕ್ಕು ಬೇಗ ಗುಣಮುಖರಾಗಲಿ, ದೇಶದ ಸೇವೆ ಮಾಡಲಿ ಎಂಬುದು ನಮ್ಮೆಲ್ಲರ ಹಾರೈಕೆ ಎಂದು ಹನುಮಂತಪ್ಪ ಅವರ ಸಂಬಂಧಿ ರಮೇಶ್ ಕೊಪ್ಪದ್ ಅವರು ಒನ್ ಇಂಡಿಯಾಕ್ಕೆ ಕರೆ ಮಾಡಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಾರ್ಥನೆ

ಬೆಟದೂರಿನ ಯೋಧ ಹನುಮಂತಪ್ಪ ಅವರ ಆರೋಗ್ಯ ಸುಧಾರಣೆಗಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಾರ್ಥಿಸಿದ್ದಾರೆ.

English summary
He is my son and somewhere I knew that he would come back to me. This is what an overjoyed mother of Siachin glacier survivor Lance Naik Hanamanthappa said from Betadur in North Karnataka before leaving for New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X