ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹನುಮಂತಪ್ಪನ ಸ್ಮರಣೆಯಲ್ಲಿ ಸಿಯಾಚಿನ್ ಮಿಲಿಟರಿ ಮುಕ್ತವಾಗಲಿ

By ಮಲೆನಾಡಿಗ
|
Google Oneindia Kannada News

ವಿಶ್ವದ ಅತಿ ಎತ್ತರದ ಹಾಗೂ ಅತ್ಯಂತ ದುಬಾರಿ ವೆಚ್ಚದ ಯುದ್ಧ ಭೂಮಿ ಮಿಲಿಟರಿ ಮುಕ್ತವಾಗುವ ಕಾಲ ಎಂದಿಗೆ ಬರುವುದೋ?, ಹಿಮರಾಶಿಯಲ್ಲಿ ಇನ್ನೆಷ್ಟು ದೇಶಭಕ್ತ ಯೋಧರು ಬಳಲಬೇಕೋ? ಕರ್ನಾಟಕದ ಹನುಮಂತಪ್ಪ ಸೇರಿದಂತೆ 9 ಜನ ಯೋಧರು ಹುತಾತ್ಮರಾಗಿದ್ದೇ ಕೊನೆಯಾಗಬಾರದೇಕೆ? ಎಂಬ ಆಶಾಭಾವನೆ ಮೂಡುವುದು ಸಹಜ. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ಭಾರತ ಹಾಗೂ ಪಾಕಿಸ್ತಾನದ ದಾಯಾದಿ ಮತ್ಸರಕ್ಕೆ ಕೊನೆ ಎಂದು?['ಅಮರ' ಯೋಧ ಹನುಮಂತಪ್ಪನ ಅಂತಿಮ ಯಾತ್ರೆಯ ಚಿತ್ರಗಳು]

ಸಮುದ್ರಮಟ್ಟದಿಂದ ಸುಮಾರು 20 ಸಾವಿರ ಅಡಿಗಳಷ್ಟು ಎತ್ತರದ ಈ ಪ್ರದೇಶದಲ್ಲಿ ಸಾಮಾನ್ಯ ಮನುಷ್ಯರು ಕ್ಷಣ ಕಾಲ ಇರಲು ಕಷ್ಟವಾಗುತ್ತದೆ. [ಹನುಮಂತಪ್ಪ ನಿಧನಕ್ಕೆ ಭಾರತೀಯರಿಂದ ಕಂಬನಿಧಾರೆ]

ಅಂಥದ್ದರಲ್ಲಿ ಹಿಮಪಾತದಿಂದ ಉಂಟಾದ ಸುಮಾರು 30-35 ಅಡಿ ಮಂಜಿನ ಆಳದ ಹಿಮದ ಆಗರದಲ್ಲಿ ಯೋಧ ಹನುಮಂತಪ್ಪ 6 ದಿನ ಬದುಕುಳಿದಿದ್ದು ಹೇಗೆ? ಎಂಬುದು ಈಗ ಆಚ್ಚರಿಯ ವಿಷಯ ಹಾಗೂ ವೈದ್ಯಕೀಯ ವಿಸ್ಮಯವೂ ಹೌದು. [ಗ್ಯಾಲರಿ: ಪ್ರಧಾನಿ ಮೋದಿ ಅವರ ಸಿಯಾಚಿನ್ ಭೇಟಿ]

ಜಾಗತಿಕ ತಾಪಮಾನ ಏರಿಕೆ ಮಾಡುವುದರ ಮೂಲಕ ಹಿಮಪಾತಕ್ಕೆ ಕಾರಣವಾಗಿರುವ ನಾವೆಲ್ಲರೂ ಕೂಡಾ ಈ ಹುತಾತ್ಮರ ಸಾವಿಗೆ ಪರೋಕ್ಷ ಕಾರಣವೂ ಹೌದು.[ಹುತಾತ್ಮರಾದ ವೀರ ಯೋಧ ಲಾನ್ಸ್ ನಾಯಕ್ ಹನುಮಂತಪ್ಪ]

ಭಾರತ ಹಾಗೂ ಪಾಕಿಸ್ತಾನ ಗಡಿ ರೇಖೆ (LIne of Control) ಬಗ್ಗೆ 1972ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಹಾಗೂ ಪಾಕಿಸ್ತಾನ ಪ್ರಧಾನಿ ಝುಲ್ಫಿಕರ್ ಅಲಿ ಭುಟ್ಟೋ ನಡುವೆ ಒಪ್ಪಂದ ಆಗಿತ್ತು. ಆದರೆ, 1984ರಲ್ಲಿ ಭಾರತದ ಗಡಿ ದಾಟದಂತೆ ಪಾಕ್ ಸೈನಿಕರನ್ನು ಹಿಮ್ಮೆಟ್ಟಿಸಲಾಯಿತು. ಅಲ್ಲಿಂದ ಇಲ್ಲಿ ತನಕ ಕರೋಕೋರಮ್ ವ್ಯಾಪ್ತಿಯಲ್ಲಿರುವ ಸಿಯಾಚಿನ್ ನಿರ್ಗಲು ಪ್ರದೇಶ ವಿವಾದದಲ್ಲೇ ಮುಂದುವರೆದಿದೆ... [ಮಾಹಿತಿ ಕೃಪೆ: ದಿ ಹಿಂದೂ, ಡಾನ್.ಕಾಂ]

ವೈದ್ಯಕೀಯ ಸಂಶೋಧನೆಯ ವಿಷಯವಾದ ಹನುಮಂತಪ್ಪ

ವೈದ್ಯಕೀಯ ಸಂಶೋಧನೆಯ ವಿಷಯವಾದ ಹನುಮಂತಪ್ಪ

ಲಾನ್ಸ್ ನಾಯಕ್ ಹನುಮಂತಪ್ಪ ಅವರು ಪ್ರತಿಕೂಲ ಪರಿಸ್ಥಿತಿಯಲ್ಲಿ ಹೇಗೆ ಬದುಕಿ ಉಳಿದರು,ವೈಪರೀತ್ಯ ಪರಿಸ್ಥಿತಿಯಲ್ಲಿ ಕೊಪ್ಪದ ಅವರ ದೇಹ ಹೇಗೆ ಕಾರ್ಯನಿರ್ವಹಿಸಿತು ಎಂಬುದರ ಬಗ್ಗೆ ಸೇನೆ ಸಹಕಾರದಿಂದ ಅತಿ ಎತ್ತರದ ಪ್ರದೇಶದ ಔಷಧ ತಜ್ಞರು ಸಂಶೋಧನೆ ನಡೆಸಲಿದ್ದಾರೆ ಎಂದು ಸೇನಾ ವೈದ್ಯಕೀಯ ಸೇವೆಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಬಿ.ಕೆ.ಛೋಪ್ರಾ ಹೇಳಿದ್ದಾರೆ. ಬಹುಶಃ ಅಮೆರಿಕ ಸೇರಿದಂತೆ ಹಿಮಪಾತದ ಸಮಸ್ಯೆ ಎದುರಿಸುತ್ತಿರುವ ಇನ್ನಷ್ಟು ರಾಷ್ಟ್ರಗಳಿಗೆ ಈ ಸಂಶೋಧನೆ ಉಪಯುಕ್ತ.

ಸಮಗ್ರ ವೈಜ್ಞಾನಿಕ ಅಧ್ಯಯನ ಅಗತ್ಯ

ಸಮಗ್ರ ವೈಜ್ಞಾನಿಕ ಅಧ್ಯಯನ ಅಗತ್ಯ

ತಜ್ಞರ ನಂಬಿಕೆಯಂತೆ ಸಣ್ಣ ಗಾಳಿ ಚೀಲ, ದೈಹಿಕ ದೃಢತೆ, ಯೋಗ ಶಕ್ತಿ ಹಾಗೂ ಬದುಕಿ ಉಳಿಯುವ ಪ್ರಬಲ ಇಚ್ಛಾಶಕ್ತಿಯಷ್ಟೇ ಆತನನ್ನು ಹೆಚ್ಚು ದಿನಗಳ ಮಟ್ತಿಗೆ ಉಳಿಸಿರಲು ಸಾಧ್ಯ. ಇತರರಿಗಿಂತ ಹನುಮಂತಪ್ಪ ಹೇಗೆ ಇದನ್ನು ಸಾಧಿಸಿದರು ಎಂಬುದು ಚರ್ಚಿತ ವಿಷಯವಾಗಿದೆ ಈ ಬಗ್ಗೆ ಸಮಗ್ರ ವೈಜ್ಞಾನಿಕ ಅಧ್ಯಯನ ನಡೆಸುತ್ತಿದ್ದೇವೆ. ಈ ಸಂಶೋಧನೆ ವಿಶ್ವದ ಎಲ್ಲ ಎತ್ತರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಸೈನಿಕರ ಪಾಲಿಗೆ ವರದಾನವಾಗಬಹುದು ಎಂದು ಛೋಪ್ರಾ ಹೇಳಿದ್ದಾರೆ.

ಹಿಮಪಾತದ ದುರಂತಗಳಿಗೆ ಕೊನೆ ಇಲ್ಲ

ಹಿಮಪಾತದ ದುರಂತಗಳಿಗೆ ಕೊನೆ ಇಲ್ಲ

19ನೇ ಮದ್ರಾಸ್ ರೆಜಿಮೆಂಟ್ ನ 10 ಯೋಧರನ್ನು ಹಿಮಪಾತ ಬಲಿ ಪಡೆದಿದೆ. ಕಳೆದ ತಿಂಗಳು ಲಡಾಕ್ ನಲ್ಲಿ ಗಸ್ತು ತಿರುಗುತ್ತಿದ್ದ 3 ಯೋಧರು ಇದೇ ರೀತಿ ಪ್ರಾಣತೆತ್ತಿದ್ದರು. ಪ್ರಾಣ ಬಲಿ ಪಡೆಯುವಲ್ಲಿ ಭಾರತ ಹಾಗೂ ಪಾಕಿಸ್ತಾನ ಯೋಧರಿಬ್ಬರಿಗೂ ಹಿಮಪಾತ ಮಾರಕ.

2012ರಲ್ಲಿ ಗಯಾರಿ ಸೆಕ್ಟರ್ ನಲ್ಲಿ ಪಾಕಿಸ್ತಾನದ 6ನೇ ನಾರ್ಥರನ್ ಲೈಟ್ ಇನ್ಫ್ರಾಂಟ್ರಿಗೆ ಸೇರಿದ 129 ಮಂದಿ ಯೋಧರು, 11 ಜನ ಸಾರ್ವಜನಿಕರು ಮೃತಪಟ್ಟಿದ್ದರು. 1984ರಿಂದ ಇಲ್ಲಿ ತನಕ ಅಂದಾಜು 2 ಸಾವಿರಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ.

1989ರಲ್ಲೇ ಮಿಲಿಟರಿ ಮುಕ್ತವಾಗಬೇಕಿತ್ತು

1989ರಲ್ಲೇ ಮಿಲಿಟರಿ ಮುಕ್ತವಾಗಬೇಕಿತ್ತು

ಶಿಮ್ಲಾ ಒಪ್ಪಂದದಂತೆ 1989ರಲ್ಲೇ ಮಿಲಿಟರಿ ಮುಕ್ತವಾಗಬೇಕಿತ್ತು. ಆದರೆ, ಸರಿಯಾದ ರಾಜಕೀಯ ಪ್ರೇರಕ ಶಕ್ತಿ ಸಿಗದ ಕಾರಣ ಈ ಪ್ರದೇಶ ಇನ್ನೂ ಮಿಲಿಟರಿ ಪಡೆಗಳ ಗಸ್ತಿನಲ್ಲಿದೆ. ಎನ್ ಜೆ 9842 ಪ್ರದೇಶದ ಉತ್ತರ ಭಾಗವನ್ನು ಮುಕ್ತಗೊಳಿಸಲು ಭಾರತ ಬಲವಾಗಿ ಪ್ರತಿಪಾದಿಸಿತ್ತು. 1999ರ ಕಾರ್ಗಿಲ್ ಯುದ್ಧದ ನಂತರ ಪಾಕಿಸ್ತಾನ ಹಾಗೂ ಭಾರತ ಯಾವ ಎತ್ತರ ಪ್ರದೇಶದಲ್ಲಿ ಬೇಕಾದರೂ ಕಾದಾಡಬಹುದು ಎಂಬುದು ಜಗಜ್ಜಾಹೀರಾಯಿತು.

ಮೋದಿ ಭೇಟಿ ನಂತರ ಆಶಾಭಾವನೆ ಹೆಚ್ಚಾಗಿದೆ

ಮೋದಿ ಭೇಟಿ ನಂತರ ಆಶಾಭಾವನೆ ಹೆಚ್ಚಾಗಿದೆ

ಮನಮೋಹನ್ ಸಿಂಗ್ ಅವರು ಈ ಎತ್ತರಕ್ಕೆ ಪ್ರದೇಶಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎನಿಸಿದ್ದಾರೆ. ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ 2012ರಲ್ಲಿ ಭೇಟಿ ನೀಡಿದ್ದರು.ಎಪಿಜೆ ಅಬ್ದುಲ್ ಕಲಾಂ ಅವರು ಇದಕ್ಕೂ ಮುನ್ನ ಭಾರತದ ಪ್ರಥಮ ಪ್ರಜೆಯಾಗಿ ಯುದ್ಧಭೂಮಿಗೆ ಕಾಲಿಟ್ಟಿದ್ದರು. ಮೋದಿ ಅವರು ಕಳೆದ ವರ್ಷ ಇಲ್ಲಿಗೆ ಬಂದು ಹೋದ ಮೇಲೆ ಆಶಾಭಾವನೆ ಹೆಚ್ಚಾಗಿದೆ.

ಹಿಮಪಾತದ ಎಚ್ಚರಿಕೆ ನೀಡಿರುವ SASE

ಹಿಮಪಾತದ ಎಚ್ಚರಿಕೆ ನೀಡಿರುವ SASE

ಭಾರತದ ರಕ್ಷಣಾ ಸಚಿವಾಲಯದ Snow and Avalanche Studies Establishment (SASE) ಎಚ್ಚರಿಕೆ ಪ್ರಕಾರ ಹಿಮಪಾತವನ್ನು ಊಹಿಸುವುದು ಅಸಾಧ್ಯ. ಕಳೆದ ನೂರು ವರ್ಷಗಳಲ್ಲಿ 0.8ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆ ಕಂಡಿದೆ. ಹಿಮಾಲಯ ಪ್ರದೇಶದಲ್ಲಿ 1.25 ಡಿ.ಸೆ ನಷ್ಟು ತಾಪಮಾನ ವ್ಯತ್ಯಾಸ ಕಂಡು ಬಂದಿದೆ. ಹವಾಮಾನ ಮೈನಸ್ 40 ಡಿ. ಸೆಗೆ ಇಳಿಯುತ್ತದೆ ಎಂದು SASE ನ ಮುಖ್ಯಸ್ಥ ಅಶ್ವಘೋಶ ಗಂಜು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವದ ಅತ್ಯಂತ ದುಬಾರಿ ಯುದ್ಧಭೂಮಿ

ವಿಶ್ವದ ಅತ್ಯಂತ ದುಬಾರಿ ಯುದ್ಧಭೂಮಿ

ವಿಶ್ವದ ಅತ್ಯಂತ ದುಬಾರಿ ಯುದ್ಧ ಭೂಮಿಸಿಯಾಚೆನ್ ಪ್ರದೇಶವನ್ನು ಕಾಯುವುದಕ್ಕೆ ಭಾರತ ಸರ್ಕಾರ ಪ್ರತಿ ವರ್ಷ ಅಂದಾಜು 1,000 ರಿಂದ 1,200 ಕೋಟಿ ರು ($148-177 million) ಖರ್ಚು ತಗಲುತ್ತದೆ. ಜೊತೆಗೆ ಈ ಭಾಗದಲ್ಲಿ ಕಾರ್ಯನಿರ್ವಹಿಸುವ ಗಡಿ ಭದ್ರತಾ ಪಡೆ, ಭಾರತೀಯ ಸೇನೆಗೆ ಅನುದಾನ ಪ್ರತಿ ವರ್ಷ ಹೆಚ್ಚಾಗುತ್ತಲೇ ಇದೆ. ಇದಕ್ಕೆ ತಕ್ಕಂತೆ ಪಾಕಿಸ್ತಾನವೂ ಹಣ ತೊಡಗಿಸಿದೆ. ಜೊತೆಗೆ ಉಭಯ ದೇಶಗಳ ಸೈನಿಕರು ಪ್ರಾಣವನ್ನು ಪ್ರಕೃತಿಗೆ ಪಣಕ್ಕಿಟ್ಟು ದೇಶ ರಕ್ಷಿಸುತ್ತಿದ್ದಾರೆ.

ಟ್ರೆಕ್ಕಿಂಗ್ ತಾಣ, ಶಾಂತಿ ಪಾರ್ಕ್ ನೆಲೆಸಲಿ

ಟ್ರೆಕ್ಕಿಂಗ್ ತಾಣ, ಶಾಂತಿ ಪಾರ್ಕ್ ನೆಲೆಸಲಿ

2003ರಲ್ಲಿ ಇಲ್ಲಿ ಶಾಂತಿ ಉದ್ಯಾನ ಸ್ಥಾಪನೆ ಬಗ್ಗೆ ಉಭಯ ದೇಶಗಳು ಮನಸ್ಸು ಮಾಡಿದ್ದವು. ಇಟಾಲಿಯ ಪರಿಸರವಾಗಿ ಗಿಯುಲಿನೋ ಟಲೋನ್ ಅವರು ಪ್ರಸ್ತಾವನೆ ಮಾಡಿದ ಮೇಲೆ ಜಾಗತಿಕವಾಗಿ ಜಿನಿವಾದ ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣೆ(IUCN) ಸಮಾವೇಶದಲ್ಲಿ ಚಾರಣಿಗರನ್ನು ಆಹ್ವಾನಿಸಿ ಚರ್ಚಿಸಲಾಯಿತು. ವಿಶ್ವ ಪಾರಂಪರಿಕ ತಾಣ ಮಾಡಲು ವಿಶ್ವ ಸಂಸ್ಥೆ ಬಯಸಿತ್ತು. 2007ರಿಂದ ಟ್ರೆಕ್ಕಿಂಗ್ ಮೊದಲಾಯಿತು. ಆದರೆ, ಪಾಕಿಸ್ತಾನ ಕ್ಯಾತೆ ತೆಗೆಯಿತು. ಈಗಲೂ ಆರ್ಮಿ ಮೌಂಟನೈನಿರಿಂಗ್ ಇನ್ಸ್ ಸ್ಟಿಟ್ಯೂಟ್ ನೆರವಿಲ್ಲದೆ ಇಲ್ಲಿ ಟ್ರೆಕ್ಕಿಂಗ್ ನಡೆಸಲಾಗುತ್ತದೆ.

English summary
After battling for life for almost 10 days, Siachen 'braveheart' soldier Lance Naik Hanumanthappa (34) Koppad passed away on Thursday(Feb 11). Ever since the two militaries from India and Pakistan began a costly engagement on the glacier, there have been numerous efforts by both countries to find a way to demilitarise the glacier.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X