ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವತಂತ್ರ ಭಾರತದ ಮೊದಲ ಮತದಾರ ಶ್ಯಾಮ್ ಸರಣ್ ನೇಗಿ ಇವರೇ...

By ಅನಿಲ್ ಆಚಾರ್
|
Google Oneindia Kannada News

ಆವರ ಹೆಸರು ಶ್ಯಾಮ್ ಸರಣ್ ನೇಗಿ. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ 1951ನೇ ಇಸವಿಯಲ್ಲಿ ಸ್ವತಂತ್ರ ಭಾರತದ ಮೊದಲ ಮತದಾರ ಆಗಿ ಇತಿಹಾಸ ಬರೆದರು. ಇದೀಗ 60 ವರ್ಷಕ್ಕೂ ಹೆಚ್ಚಾಗಿದೆ. ಇಂದಿಗೂ ಅವರು ವಿಐಪಿ. ಮತ ಚಲಾವಣೆಗೆ ಶ್ಯಾಮ್ ಸರಣ್ ನೇಗಿ ಅವರು ಬಂದರೆ ಮಾಧ್ಯಮಗಳು ಕಿಕ್ಕಿರಿಯುತ್ತವೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪ್ರತಿ ಲೋಕಸಭೆ, ವಿಧಾನಸಭೆ ಮತ್ತು ಪಂಚಾಯಿತಿ ಚುನಾವಣೆಯಲ್ಲಿ ನೇಗಿ ತಮ್ಮ ಮತ ಚಲಾಯಿಸಿದ್ದಾರೆ. ಅವರಿಗೆ ಈಗ 102 ವರ್ಷ ವಯಸ್ಸು. 2019ರ ಲೋಕಸಭಾ ಚುನಾವಣೆಯಲ್ಲೂ ತಮ್ಮ ಮತ ಚಲಾಯಿಸುವುದಕ್ಕೆ ಅವರು ಉತ್ಸುಕರಾಗಿದ್ದಾರೆ. ಕಳೆದ 45 ವರ್ಷಗಳಿಂದ ಅವರು ಈಗಿರುವ ಸ್ಥಳದಲ್ಲೇ ಇದ್ದರೂ ಮಹತ್ವ ಗೊತ್ತಿರಲಿಲ್ಲ.

ಆದರೆ, 2007ರಲ್ಲಿ ಐಎಎಸ್ ಅಧಿಕಾರಿ ಮನೀಶ್ ನಂದಾ (ಈಗ ಹಿಮಾಚಲ ಪ್ರದೇಶದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ) ಈ ಸಂಗತಿಯನ್ನು ಪತ್ತೆ ಹಚ್ಚಿದರು. ಅದು ಚುನಾವಣೆ ಫೋಟೋ ಗುರುತಿನ ಚೀಟಿ ಮಾಡಿಸುವ ವೇಳೆ ಈ ಅಂಶ ಪತ್ತೆ ಮಾಡಿದರು.

 ಯಾವ ಚುನಾವಣೆಗೂ ಮತದಾನ ತಪ್ಪಿಸಿಲ್ಲ

ಯಾವ ಚುನಾವಣೆಗೂ ಮತದಾನ ತಪ್ಪಿಸಿಲ್ಲ

ಕಿನ್ನೌರ್ ಜಿಲ್ಲೆಯ ಕಲ್ಪ ಎಂಬ ಹಳ್ಳಿಯಲ್ಲಿ ನೇಗಿ ಅವರ ಬಗ್ಗೆ ಬಹಳ ಗೌರವ ಇದೆ. ಅವರನ್ನು ಐಎಎಸ್ ಅಧಿಕಾರಿಯೊಬ್ಬರನ್ನು ಭೇಟಿ ಮಾಡಿದಾಗ, ನನ್ನ ಇಡೀ ಜೀವನದಲ್ಲಿ ಮತದಾನವನ್ನು ಯಾವತ್ತಿಗೂ ತಪ್ಪಿಸಿಲ್ಲ ಎಂದು ಅವರು ಹೇಳಿದ್ದರು. ಚಳಿಗಾಲ, ಹಿಮಪಾತವನ್ನು ಗಮನದಲ್ಲಿ ಇಟ್ಟುಕೊಂಡು ಚುನಾವಣೆ ಆಯೋಗ ಮುಂಚಿತವಾಗಿಯೇ ಚುನಾವಣೆ ನಡೆಸಿತ್ತು ಎಂದು ನೆನಪಿಸಿಕೊಂಡಿದ್ದರು.

 ಚುನಾವಣೆ ಕರ್ತವ್ಯ ನಿರ್ವಹಿಸಬೇಕಿದ್ದರಿಂದ ಮೊದಲ ಅವಕಾಶ

ಚುನಾವಣೆ ಕರ್ತವ್ಯ ನಿರ್ವಹಿಸಬೇಕಿದ್ದರಿಂದ ಮೊದಲ ಅವಕಾಶ

ಜುಲೈ 1, 1917ರಲ್ಲಿ ಜನಿಸಿದ ನೇಗಿ ಅವರು ಸರಕಾರಿ ಶಾಲೆಯಾಲ್ಲಿ ಶಿಕ್ಷಕರಾಗಿದ್ದರು. ಮೊದಲ ಚುನಾವಣೆಗಾಗಿ ಕೆಲಸ ಕೂಡ ಮಾಡಿದ್ದಾರೆ. ನನಗೆ ಮೊದಲು ಮತದಾನಕ್ಕೆ ಅವಕಾಶ ಕೊಡಿ. ನನಗೆ ಚುನಾವಣೆ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದಾರೆ ಎಂದು ಮತದಾನ ಕೇಂದ್ರದಲ್ಲಿ ಮನವಿ ಮಾಡಿದರು. ಅದಕ್ಕೆ ಅಲ್ಲಿನ ಅಧಿಕಾರಿ ಒಪ್ಪಿದರು. ಆ ಮೂಲಕ ನನ್ನ ತಂದೆ ದೇಶದ ಮೊದಲ ಮತದಾರ ಆದರು ಎಂಬುದನ್ನು ನೇಗಿ ಅವರ ಮಗ ನೆನಪಿಸಿಕೊಳ್ಳುತ್ತಾರೆ.

 ಚುನಾವಣೆ ಆಯುಕ್ತರು ಮನೆಗೆ ಬಂದು ಸನ್ಮಾನಿಸಿದ್ದರು

ಚುನಾವಣೆ ಆಯುಕ್ತರು ಮನೆಗೆ ಬಂದು ಸನ್ಮಾನಿಸಿದ್ದರು

ಬಹಳ ಸಂಶೋಧನೆ ನಂತರ ಚುನಾವಣೆ ಆಯೋಗದಿಂದ ನೇಗಿ ಅವರೇ ಮೊದಲ ಮತದಾರ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲಾಯಿತು. 2012ರಲ್ಲಿ ಆಗಿನ ಚುನಾವಣಾ ಆಯುಕ್ತರಾಗಿದ್ದ ನವೀನ್ ಚಾವ್ಲಾ ಸ್ವತಃ ನೇಗಿ ಅವರ ಮನೆಗೆ ತೆರಳಿ, ಸನ್ಮಾನ ಕೂಡ ಮಾಡಿದ್ದರು. 2014ರ ಚುನಾವಣೆ ವೇಳೆ ಗೂಗಲ್ ನಿಂದ 'ಮತದಾನಕ್ಕೆ ಬದ್ದ' ಅಭಿಯಾನದ ಭಾಗವಾಗಿ ನೇಗಿ ಅವರ ಬಗ್ಗೆ ವಿಡಿಯೋ ಮಾಡಲಾಗಿತ್ತು.

 ಶ್ಯಾಮ್ ಸರಣ್ ನೇಗಿ ವಿಡಿಯೋ ಹೆಚ್ಚು ಮಂದಿ ವೀಕ್ಷಿಸಿದ್ದರು

ಶ್ಯಾಮ್ ಸರಣ್ ನೇಗಿ ವಿಡಿಯೋ ಹೆಚ್ಚು ಮಂದಿ ವೀಕ್ಷಿಸಿದ್ದರು

ಆ ವಿಡಿಯೋವನ್ನು ಉಳಿದವುಗಳಿಗಿಂತ ಹೆಚ್ಚು ಮಂದಿ ವೀಕ್ಷಿಸಿದ್ದರು. ಆ ಥರದ್ದೇ ವಿಡಿಯೋಗಳಲ್ಲಿ ಸೆಲೆಬ್ರಿಟಿಗಳಾದ ಅಮಿತಾಬ್ ಬಚ್ಚನ್, ದಿಯಾ ಇರ್ಜಾ, ಅರ್ಜುನ್ ರಾಮ್ ಪಾಲ್, ಕ್ರಿಕೆಟರ್ ವೀರೇಂದರ್ ಸೆಹ್ವಾಗ್ ಕೂಡ ಪಾಲ್ಗೊಂಡಿದ್ದರು. ಅವರೆಲ್ಲರ ವಿಡಿಯೋಗಳಿಗಿಂತ ನೇಗಿ ಅವರ ವಿಡಿಯೋವನ್ನು ಹೆಚ್ಚು ಮಂದಿ ವೀಕ್ಷಿಸಿದ್ದರು.

English summary
Shyam Saran Negi, 102 year old from Himachal Pradesh, first voter of Independent India. Here is the interesting details about him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X