ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Shraddha Murder Case : ಶ್ರದ್ಧಾ ಕೇಸ್: ಅಫ್ತಾಬ್ ಕರೆದೊಯ್ಯುತ್ತಿದ್ದ ಪೊಲೀಸ್ ವ್ಯಾನ್ ಮೇಲೆ ದಾಳಿ

|
Google Oneindia Kannada News

ನವದೆಹಲಿ ನವೆಂಬರ್ 29: ದೆಹಲಿಯಲ್ಲಿ ಗೆಳತಿ ಶ್ರದ್ಧಾ ವಾಕರ್ ಅವರ ಭೀಕರ ಹತ್ಯೆಯ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಅವರನ್ನು ಹೊತ್ತೊಯ್ಯುತ್ತಿದ್ದ ಪೊಲೀಸ್ ವ್ಯಾನ್ ಮೇಲೆ ನಿನ್ನೆ ಸಂಜೆ ಕತ್ತಿ ಹಿಡಿದ ಗುಂಪೊಂದು ದಾಳಿ ಮಾಡಿದೆ. ಪೊಲೀಸರು ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು, ಪೂನಾವಾಲಾ ಸುರಕ್ಷಿತವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪೂನಾವಾಲಾ ಅವರ ಎರಡನೇ ಪಾಲಿಗ್ರಾಫ್ ಪರೀಕ್ಷೆಯ ನಂತರ ಪಶ್ಚಿಮ ದೆಹಲಿಯ ವಿಧಿವಿಜ್ಞಾನ ಪ್ರಯೋಗಾಲಯದಿಂದ ಪೊಲೀಸ್ ವ್ಯಾನ್ ಅವರನ್ನು ಮರಳಿ ಜೈಲಿಗೆ ಕರೆದೊಯ್ಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಎಫ್‌ಎಸ್‌ಎಲ್ ಕಟ್ಟಡದ ಹೊರಗೆ ಈ ದಾಳಿ ನಡೆದಿದೆ.

ಆ ವ್ಯಕ್ತಿಗಳು ತಮ್ಮ ಕಾರನ್ನು ಪೊಲೀಸ್ ವ್ಯಾನ್‌ನ ಮುಂದೆ ನಿಲ್ಲಿಸಿ ಅಫ್ತಾಬ್ ತಡೆದಿದ್ದರು ಎಂದು ಮೂಲಗಳು ತಿಳಿಸಿವೆ. ಆಗ ಕಾರಿನಿಂದ ಹೊರಬಂದ ಐವರು ಕತ್ತಿಗಳನ್ನು ಬೀಸುತ್ತಾ ವ್ಯಾನ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಪೊಲೀಸರು ತಮ್ಮ ಶಸ್ತ್ರಾಸ್ತ್ರಗಳನ್ನು ಹೊರತೆಗೆದು ಗಾಳಿಯಲ್ಲಿ ಗುಂಡು ಹಾರಿಸಿದರು ಎಂದು ಮೂಲಗಳು ತಿಳಿಸಿವೆ. ಯಾರಿಗೂ ಗಾಯಗಳಾಗಿಲ್ಲ ಮತ್ತು ದಾಳಿಕೋರರಲ್ಲಿ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

Shraddha case: Attack on police van carrying Aftab

ಅಫ್ತಾಬ್ ಇದ್ದ ಪೊಲೀಸ್ ವ್ಯಾನ್ ಮೇಲೆ ದಾಳಿ

ಬಂಧಿತರು ತಮ್ಮ ಹೆಸರು ನಿಗಮ್ ಗುಜ್ಜರ್ ಮತ್ತು ಕುಲದೀಪ್ ಠಾಕೂರ್ ಎಂದು ಗುರುತಿಸಲಾಗಿದೆ. ಅವರು ಗುರುಗ್ರಾಮ್ ನಿವಾಸಿಗಳು ಎಂದು ಮೂಲಗಳು ತಿಳಿಸಿವೆ. ಅವರು ಬಲಪಂಥೀಯ ಗುಂಪು ಹಿಂದೂ ಸೇನೆಯ ಸದಸ್ಯರು ಎಂದು ಹೇಳಿಕೊಂಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಹಿಂದೂ ಸೇನೆ, "ಅಫ್ತಾಬ್ ಹಿಂದೂ ಹುಡುಗಿಯನ್ನು ಹೇಗೆ ತುಂಡು ತುಂಡಾಗಿ ಕತ್ತರಿಸಿದ್ದಾನೆ ಎಂಬುದನ್ನು ಇಡೀ ದೇಶವೇ ಗಮನಿಸುತ್ತಿದೆ. ಭಾರತದ ಸಂವಿಧಾನಕ್ಕೆ ವಿರುದ್ಧವಾದ ಯಾವುದೇ ಕೆಲಸವನ್ನು ಸಂಘಟನೆ ಬೆಂಬಲಿಸುವುದಿಲ್ಲ. ನಾವು ಭಾರತದ ಕಾನೂನನ್ನು ನಂಬುತ್ತೇವೆ" ಎಂದಿದೆ.

ಘಟನೆ ಬಳಿಕ "ಆಫ್ತಾಬ್‌ಗೆ ರಕ್ಷಣೆ ಕೋರಿ" ನ್ಯಾಯಾಲಯದ ಮೊರೆ ಹೋಗುವುದಾಗಿ ಪೂನಾವಾಲಾ ಅವರ ವಕೀಲರು ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಜೈಲಿನಲ್ಲಿರುವ ಅಫ್ತಾಬ್‌ಗೆ ಕ್ಯಾಮೆರಾ ಕಣ್ಗಾವಲು

ಶ್ರದ್ಧಾ ವಾಕರ್ ಅವರನ್ನು ಕೊಂದಿರುವುದಾಗಿ ಪೂನಾವಾಲಾ ಹೇಳಿಕೊಂಡಿದ್ದಾರೆ. ನಂತರ, ಅವರು ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ರೆಫ್ರಿಜರೇಟರ್ನಲ್ಲಿ ದಿನಗಟ್ಟಲೆ ಸಂಗ್ರಹಿಸಿದ ನಂತರ ದೆಹಲಿಯ ವಿವಿಧ ಭಾಗಗಳಲ್ಲಿ ವಿಲೇವಾರಿ ಮಾಡಿದರು. 20 ಕ್ಕಿಂತ ಹೆಚ್ಚು ಕಡೆ ಶ್ರದ್ಧಾ ಭಾಗಗಳನ್ನು ಬೀಸಾಡಲಾಗಿದೆ. ಅದೆಲ್ಲವನ್ನೂ ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದೆ.

ಆಫ್ತಾಬ್ ಅವರು ನ್ಯಾಯಾಲಯದಲ್ಲಿ ಕೊಲೆಯನ್ನು ಒಪ್ಪಿಕೊಂಡಿದ್ದಾರೆ. ಪಾಲಿಗ್ರಾಫ್ ಪರೀಕ್ಷೆಯ ಫಲಿತಾಂಶ ಬಾಕಿ ಇದ್ದರೆ ಹಾಗೂ ನಾರ್ಕೋ ಪರೀಕ್ಷೆ ಇನ್ನೂ ನಡೆಯಬೇಕಿದೆ. ಪ್ರಕರಣದಲ್ಲಿ ಯಾವುದೇ ಪ್ರಾಥಮಿಕ ಸಾಕ್ಷಿಗಳಿಲ್ಲ. ಪ್ರಸ್ತುತ, ರಾಷ್ಟ್ರವನ್ನು ಬೆಚ್ಚಿಬೀಳಿಸಿದ ಭೀಕರ ಅಪರಾಧದ ಸಾಂದರ್ಭಿಕ ಪುರಾವೆಗಳು ಪೊಲೀಸರ ಬಳಿ ಇವೆ. ಪೂನಾವಾಲಾ ಅವರನ್ನು ತಿಹಾರ್‌ನ ಜೈಲು ಸಂಖ್ಯೆ 4 ರಲ್ಲಿ ರಾತ್ರಿಯಿಡೀ ಕ್ಯಾಮೆರಾ ಕಣ್ಗಾವಲಿನಲ್ಲಿ ಇರಿಸಲಾಗಿದೆ.

English summary
A police van carrying Aftab Amin Poonawala, accused in the gruesome murder of girlfriend Shraddha Walker in Delhi, was attacked by a sword-wielding mob yesterday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X