ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಲಸಿಕೆ ಹಾಕಿಸಿಕೊಂಡವರು ಈ ತಪ್ಪನ್ನು ಮಾಡಲೇಬೇಡಿ!

|
Google Oneindia Kannada News

ನವದೆಹಲಿ, ಮೇ 27: ದೇಶದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ಹೆಚ್ಚಾದ ನಂತರ ಲಸಿಕೆ ಕಾರ್ಯಕ್ರಮಗಳು ಕೂಡ ಚುರುಕು ಪಡೆದುಕೊಂಡಿತು. ಈ ಮಧ್ಯೆ ಕೊರೊನಾ ವೈರಸ್‌ನ ಲಸಿಕೆ ಹಾಕಿಸಿಕೊಂಡವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುವುದು ಸಾಮಾನ್ಯ. ಇದರಿಂದಾಗಿ ಮತ್ತಷ್ಟು ಜನರು ಲಸಿಕೆ ಹಾಕಿಸಿಕೊಳ್ಳಲು ಪ್ರೇರಣೆಯೂ ಆಗಬಹುದು. ಆದರೆ ಈ ಉತ್ಸಾಹದಲ್ಲಿ ಒಂದು ತಪ್ಪನ್ನು ನೀವು ಮಾಡಿದರೆ ಮುಂದೆ ಸಂಕಷ್ಟಗಳು ಉಂಟಾಗಬಹುದು.

ಹೌದು, ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡವರಲ್ಲಿ ಹಲವರು ತಮ್ಮ ಕೊರೊನಾ ವೈರಸ್‌ ಲಸಿಕೆಯ ಪ್ರಮಾಣ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕೋವಿನ್ ಅಪ್ಲಿಕೇಶನ್‌ನಲ್ಲಿ ಲಭ್ಯವಾಗುವ ಈ ಪ್ರಮಾಣಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರೆ ಅದು ಮುಂದಿನ ದಿನಗಳಲ್ಲಿ ನಿಮಗೆ ಸಮಸ್ಯೆಗಳನ್ನು ತಂದೊಡ್ಡಬಹುದು. ಇಂತಾ ಅವಕಾಶಗಳಿಗಾಗಿ ಕಾಯುತ್ತಿರುವ ವ್ಯಕ್ತಿಗಳಿಗೆ ನೀವಾಗಿಯೇ ಆಹಾರವಾಗಬಹುದು. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ವಾಕ್ಸಿನ್ ಪ್ರಮಾಣ ಪತ್ರವನ್ನು ಹಂಚಿಕೊಳ್ಳುವ ಉತ್ಸಾಹವನ್ನು ಹೊಂದಿದ್ದರೆ ಮತ್ತೊಮ್ಮೆ ಈ ಬಗ್ಗೆ ಯೋಚಿಸಿ. ಈ ಎಚ್ಚರಿಕೆಯನ್ನು ಕೇವಲ ನಾವು ನೀಡುತ್ತಿಲ್ಲ. ಕೇಂದ್ರ ಸರ್ಕಾರವೇ ಮಾಹಿತಿಯನ್ನು ಸೂಚನೆಯನ್ನು ನೀಡಿದೆ. ಏನದು ಮುಂದೆ ಓದಿ..

Should not share your Covid-19 vaccination certificate on social media

ಕೋವಿಡ್ ಲಸಿಕೆ ಪಡೆಯಲು ಮೈಸೂರಿನ ಹಾಡಿಯ ಜನರ ಹಿಂದೇಟು ಕೋವಿಡ್ ಲಸಿಕೆ ಪಡೆಯಲು ಮೈಸೂರಿನ ಹಾಡಿಯ ಜನರ ಹಿಂದೇಟು

ವಾಕ್ಸಿನ್ ಪ್ರಮಾಣಪತ್ರದಲ್ಲಿದೆ ಖಾಸಗಿ ಮಾಹಿತಿ

ವಾಕ್ಸಿನ್ ಪ್ರಮಾಣಪತ್ರದಲ್ಲಿದೆ ಖಾಸಗಿ ಮಾಹಿತಿ

ಕೋವಿಡ್ 19 ವಾಕ್ಸಿನೇಶನ್ ಪ್ರಮಾಣಪತ್ರದಲ್ಲಿ ಹೆಸರು ಹಾಗೂ ಇತರ ಖಾಸಗಿ ಮಾಹಿತಿಗಳು ಇರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರೆ ಅದು ದುಷ್ಕರ್ಮಿಗಳ ಕೈಗೆ ದೊರೆಯುವ ಸಾಧ್ಯತೆಯಿರುತ್ತದೆ. ಅದನ್ನು ಬಳಸಿಕೊಂಡು ಸೈಬರ್ ಅಪರಾಧ ಕೃತ್ಯಗಳನ್ನು ಎಸಗುವ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಮಾಣಪತ್ರವನ್ನು ಹಂಚಿಕೊಳ್ಳುವ ಮುನ್ನ ಮತ್ತೊಮ್ಮೆ ಯೋಚಿಸಿ.

ಬಹಿರಂಗಗೊಳಿಸಬೇಡಿ: ಸರ್ಕಾರ ಎಚ್ಚರಿಕೆ

ಬಹಿರಂಗಗೊಳಿಸಬೇಡಿ: ಸರ್ಕಾರ ಎಚ್ಚರಿಕೆ

ಈ ಬಗ್ಗೆ ಸರ್ಕಾರವೇ ಕೆಲ ಸಲಹೆಗಳನ್ನು ನೀಡಿದೆ. ವಾಕ್ಸಿನೇಶನ್ ಪ್ರಮಾಣಪತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಸೂಕ್ತವಲ್ಲ. ಯಾಕೆಂದರೆ ಅದರಲ್ಲಿರುವ ನಿರ್ಣಾಯಕ ಅಂಕಿಅಂಶ, ಮಾಹಿತಿಗಳು ಖಾಸಗಿಯಾಗಿರುತ್ತವೆ. ಎಲ್ಲರಿಗೂ ಇದನ್ನು ಬಹಿರಂಗಗೊಳಿಸಬಾರದು ಎಂದು ಸರ್ಕಾರ ಎಚ್ಚರಿಕೆಯನ್ನು ನೀಡಿದೆ.

ಯಾವ ಕಾರಣಕ್ಕೆ ಹಂಚಬಾರದು ಎಂದು ವಿವರ

ಯಾವ ಕಾರಣಕ್ಕೆ ಹಂಚಬಾರದು ಎಂದು ವಿವರ

ಕೇಂದ್ರ ಗೃಹಸಚಿವಾಲಯ ತನ್ನ ಸೈಬರ್ ಸೇಫ್ಟಿ ಮತ್ತು ಸೈಬರ್ ಸೆಕ್ಯೂರಿಟಿ ಅರಿವು ಮೂಡಿಸಲು ಹೊಂದಿರುವ ಟ್ವಿಟ್ಟರ್‌ನ 'ಸೈಬರ್ ದೋಸ್ತ್' ಅಧಿಕೃತ ಖಾತೆಯಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. "ವಾಕ್ಸಿನ್ ಪ್ರಮಾಣಪತ್ರವನ್ನು ಹಂಚಿಕೊಳ್ಳುವ ಬಗ್ಗೆ ಎಚ್ಚರಿಕೆಯನ್ನು ವಹಿಸಿಕೊಳ್ಳಿ" ಎಂದು ಹೇಳಿದ್ದು ಯಾವ ಕಾರಣಕ್ಕೆ ಹಂಚಿಕೊಳ್ಳಬಾರದು ಎಂದು ವಿವರಿಸಿದೆ.

ಎರಡನೇ ಡೋಸ್ ಪಡೆದ ನಂತರ ಅಂತಿಮ ಪ್ರಮಾಣಪತ್ರ

ಎರಡನೇ ಡೋಸ್ ಪಡೆದ ನಂತರ ಅಂತಿಮ ಪ್ರಮಾಣಪತ್ರ

ಮೊದಲ ವ್ಯಾಕ್ಸಿನೇಶನ್ ಪಡೆದ ನಂತರ ಸರ್ಕಾರ ತಾತ್ಕಾಲಿಕ ಪ್ರಮಾಣಪತ್ರವನ್ನು ನೀಡುತ್ತದೆ. ಇದರಲ್ಲಿ ಲಸಿಕೆ ಪಡೆದ ಫಲಾನುಭವಿಯ ಹೆಸರು, ಅವರ ಗುರುತಿನ ಚೀಟಿಯ ಕೊನೆಯ ನಾಲ್ಕು ಅಂಕೆಗಳು, ಪಡೆದ ಲಸಿಕೆಯ ಹೆಸರು, ಲಸಿಕೆ ಪಡೆದ ಸಮಯ ಮತ್ತು ಲಸಿಕೆ ಕೇಂದ್ರದ ಹೆಸರು ಹಾಗೂ ಲಸಿಕೆಯ ಮುಂದಿನ ದಿನಾಂಕಗಳ ಮಾಹಿತಿ ಇರುತ್ತದೆ. ಇದನ್ನು ತಾತ್ಕಾಲಿಕ ಪ್ರಮಾಣಪತ್ರವೆಂದು ಪರಿಗಣಿಸಲಾಗುತ್ತದೆ. ಎರಡನೇ ಡೋಸ್ ಕೂಡ ಪಡೆದ ನಂತರ ಅಂತಿಮ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

Recommended Video

ICC ತೆಗೆದುಕೊಂಡ ನಿರ್ಧಾರಕ್ಕೆ ರೋಹಿತ್ ಶರ್ಮಾ ಫುಲ್ ಹ್ಯಾಪಿ | Oneindia Kannada

English summary
Should not share your Covid-19 vaccination certificate on social media. here is why.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X