ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೂ ಪಾಲೀಶ್ ಮಾಡುವವನ ಪ್ರತಿಭೆಗೆ ಒಲಿದು ಬಂದ ಸ್ಟಾರ್ ಗಿರಿ

|
Google Oneindia Kannada News

ಅಗಾದ ಪ್ರತಿಭೆ ಮತ್ತು ಕೊಂಚವೇ ಅದೃಷ್ಟ ಇವೆರಡು ಇದ್ದರೆ ಸಾಕು, ಸಾಮಾನ್ಯ ವ್ಯಕ್ತಿ ಸ್ಟಾರ್ ಆಗಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ಸನಿ ಹಿಂದೂಸ್ತಾನಿ.

ಸನಿ ಹಿಂದೂಸ್ತಾನಿ ಎಂಬ ಯುವಕ ಪಂಜಾಬ್‌ ನ ಭಟಿಂಡಾ ನಲ್ಲಿ ಶೂ ಪಾಲೀಶ್ ಮಾಡುತ್ತಿದ್ದ. ಆದರೆ ಆತನಲ್ಲಿನ ಪ್ರತಿಭಟನೆ ಆತನನ್ನು ಖ್ಯಾತಿಯ ಶಿಖರಕ್ಕೇರಿಸಿದೆ. ಆತ ಈಗ ಲಕ್ಷಾದೀಶ ಕೆಲವೇ ದಿನಗಳಲ್ಲಿ ಕೋಟ್ಯಾಧೀಶನೂ ಆಗಲಿದ್ದಾನೆ.

ಸನಿ ಹಿಂದೂಸ್ತಾನಿ ಇಂಡಿಯನ್ ಐಡಲ್ ಎಂಬ ಭಾರತದ ಪ್ರಖ್ಯಾತ ಹಾಡಿನ ಶೋ ಅನ್ನು ಗೆದ್ದಿದ್ದಾನೆ. ಬಡ ಬೂಟ್ ಪಾಲೀಶರ್ ದ್ವನಿಗೆ ಭಾರತ ಮನಸೋತಿದೆ. ಸಂಗೀತದ ಪಾಠ ಕಲಿಯದೇ ಕೇವಲ ಆಸಕ್ತಿಯಿಂದ ಹಾಡಲು ಪ್ರಾರಂಭಿಸಿದ್ದ ಸನಿ ಇಂದು ಬಹುದೊಡ್ಡ ಸಂಗೀತ ಸ್ಪರ್ಧೆಯನ್ನು ಗೆದ್ದಿದ್ದಾನೆ.

Shoe Polisher Sani Hindunstani Won Indian Idol

ಬೂಟ್ ಪಾಲೀಶ್ ಮಾಡುತ್ತಿದ್ದ ಸನಿ ಹಿಂದೂಸ್ತಾನಿ ಗೆ ಬಹುಮಾನವಾಗಿ 25 ಲಕ್ಷ ರೂಪಾಯಿಗಳನ್ನು ಚಾನೆಲ್ ನೀಡಿದೆ. ಹಲವು ಸಿನಿಮಾಗಳಿಗೆ ಹಾಡುವ ಅವಕಾಶಗಳು ಈಗಾಗಲೇ ಸನಿ ಬಾಗಿಲಿಗೆ ಬಂದಿವೆ. ರಸ್ತೆ ಬದಿಯಲ್ಲಿ ಬೂಟ್ ಪಾಲೀಶ್ ಮಾಡುತ್ತಿದ್ದ ಸನಿ ಈಗ ಬಾಲಿವುಡ್ ಹಿನ್ನೆಲೆ ಗಾಯಕನಾಗಿದ್ದಾನೆ.

ಅತ್ಯಂತ ಬಡ ಕುಟುಂಬದ ಸನಿ ತಾಯಿ ಬದುಕಲು ಬಲೂನ್ ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರ ಇಲ್ಲದಾಗ ಭಿಕ್ಷೆ ಬೇಡಿ ಅನ್ನ ಸಂಪಾದನೆ ಮಾಡುತ್ತಿದ್ದರು. ಇದೆಲ್ಲವನ್ನೂ ಆತ ಇಂಡಿಯನ್ ಐಡಲ್‌ ಆಡಿಶನ್ ಗೆ ಬಂದಾಗ ಹೇಳಿದ್ದ. ಆಗಲೇ ಈತ ತನ್ನ ಹಾಡು ಆತನ ಹೋರಾಟಮಯ ಬದುಕಿನಿಂದಾಗಿ ಜಡ್ಜ್‌ಗಳನ್ನು ಹಾಗೂ ಉದ್ಯಮಿ ಆನಂದ್ ಮಹೀಂದ್ರಾ ಅವರನ್ನೂ ಸೆಳೆದಿದ್ದ. ಆನಂದ್ ಮಹೀಂದ್ರಾ ಸನಿ ಬಗ್ಗೆ ಟ್ವೀಟ್ ಮಾಡಿದ್ದರು.

ಇದೀಗ ಸನಿ ಬಹುದೊಡ್ಡ ಹಾಡುಗಾರಿಕೆ ಸ್ಪರ್ಧೆಯನ್ನು ಗೆದ್ದು 25 ಲಕ್ಷ ನಗದು ಗೆದ್ದಿದ್ದಾನೆ. ಜೊತೆಗೆ ಹಲವು ಅವಕಾಶಗಳು ಆತನ ಬಾಗಿಲು ಮುಂದೆ ಬಂದಿವೆ.

English summary
Shoe polisher in Punjab Sani Hindustani won Indian idol contest. He won 25 lakh cash prize.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X