ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರವಿಂದ್ ಕೇಜ್ರಿವಾಲ್ ಮೇಲೆ ತೂರಿಬಂತು ಶೂ

|
Google Oneindia Kannada News

ನವದೆಹಲಿ, ಏಪ್ರಿಲ್, 10: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ಶೂ ತೂರಿಬಂದಿದೆ. ಪತ್ರಿಕಾಗೋಷ್ಠಿಯೊಂದರ ವೇಳೆ ಕೇಜ್ರಿವಾಲ್‌ ಮೇಲೆ ಆಮ್‌ ಆದ್ಮಿ ಸೇನಾ ಎಂಬ ಸಂಘಟನೆಯ ಕಾರ್ಯಕರ್ತನೊಬ್ಬ ಬೂಟು ಎಸೆದಿದ್ದಾನೆ.

ಶೂ ಎಸೆದ ವೇದಪ್ರಕಾಶ್‌ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪ್ರಕರಣದ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಆಮ್ ಆದ್ಮಿಪಕ್ಷ ಆರೋಪ ಮಾಡಿದೆ.[ಅರವಿಂದ್ ಕೇಜ್ರಿವಾಲ್ ಮುಖಕ್ಕೆ ಯುವತಿ ಮಸಿ ಎರಚಿದ್ದೇಕೆ?]

"ಸಮ-ಬೆಸ' ನಂಬರ್‌ ಪ್ಲೇಟ್‌ ಆಧರಿತ ವಾಹನ ವ್ಯವಸ್ಥೆ ಏಪ್ರಿಲ್‌ 15ರಿಂದ ದೆಹಲಿಯಲ್ಲಿ ಪುನಃ ಜಾರಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕೇಜ್ರಿವಾಲ್ ಮೇಲೆ ಶೂ ತೂರಿ ಬಂದಿದೆ. ಆದರೆ ಅದನ್ನು ಕೆಲವರು ತಡೆದಿದ್ದಾರೆ.

shoe

ಸುದ್ದಿಗೋಷ್ಠಿಯ ನಡುವೆಯೇ ದಿಢೀರ್ ಎಂದು ಎದ್ದು ನಿಂತ ವೇದಪ್ರಕಾಶ್‌, ಆಪಾದನೆಗಳನ್ನು ಮಾಡಲಾರಂಭಿಸಿದ. ಹೊಸ ವ್ಯವಸ್ಥೆ ಭ್ರಷ್ಟಾಚಾರಕ್ಕೆ ನಾಂದಿ ಹಾಡುತ್ತಿದೆ. ಇದರ ಬಗ್ಗೆ ನಾನೇ ಪತ್ರ ಬರೆದಿದ್ದೆ. ಆದರೆ ಯಾವ ಉತ್ತರವೂ ಸಿಕ್ಕಿಲ್ಲ ಎಂದು ಆರೋಪಿಸಲು ಆರಂಭಿದ್ದಾನೆ. ಇದಾದ ಮೇಲೆ ಕೇಜ್ರಿವಾಲ್ ಮೇಲೆ ಶೂ ಎಸೆದಿದ್ದಾನೆ. ಅಷ್ಟರಲ್ಲಿ ಆತನನ್ನು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ತಡೆದಿದ್ದು ಪೊಲೀಸರ ವಶಕ್ಕೆ ನೀಡಿದ್ದಾರೆ.[ಶಿವಸೇನೆಯಿಂದ ಸುಧೀಂದ್ರ ಕುಲಕರ್ಣಿ ಮುಖಕ್ಕೆ ಮಸಿ]

{gallery-feature_1}

English summary
A shoe was hurled at Delhi Chief Minister Arvind Kejriwal at a press conference here by a man who claimed to be from a breakaway group of AAP, triggering angry reaction from AAP which sought to link BJP to the incident. The shoe did not hit Kejriwal as an official quickly shielded him and caught the missile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X