• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಗತ್‌ಸಿಂಗ್ ಭಯೋತ್ಪಾದಕ ಎಂದ ದೆಹಲಿ ವಿವಿ!

|

ನವದೆಹಲಿ, ಏಪ್ರಿಲ್, 28: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ದೇಶದ್ರೋಹಿ ಘೋಷಣೆ ಗಲಾಟೆ ಒಂದು ಹಂತಕ್ಕೆ ಬಂದು ನಿಂತಿರುವಾಗಲೇ ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಎಡವಟ್ಟಾಗಿದೆ.

ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಅವರನ್ನು ದೆಹಲಿ ವಿಶ್ವವಿದ್ಯಾಲಯದ ಪಠ್ಯವೊಂದರಲ್ಲಿ ‘ಕ್ರಾಂತಿಕಾರಿ ಭಯೋತ್ಪಾದಕ' ಎಂದು ಕರೆದಿರುವುದು ಹೊಸ ವಿವಾದ ಹುಟ್ಟುಹಾಕಿದೆ.[ಬೆಂಗಳೂರಿನಲ್ಲಿ ಭಗತ್ ಕನಸಿನ ಭಾರತ ಬಿಚ್ಚಿಟ್ಟ ಮೊಮ್ಮಗ]

ಇತಿಹಾಸಕಾರರಾದ ಬಿಪಿನ್‌ ಚಂದ್ರ ಮತ್ತು ಮೃದುಲಾ ಮುಖರ್ಜಿ ಅವರು ಬರೆದಿರುವ ‘ಭಾರತದ ಸ್ವಾತಂತ್ರ್ಯ ಹೋರಾಟ' ಎಂಬ ಪುಸ್ತಕದ 20ನೇ ಅಧ್ಯಾಯದಲ್ಲಿ ಭಗತ್‌ ಸಿಂಗ್‌ ಅಲ್ಲದೆ, ಚಂದ್ರಶೇಖರ್‌ ಆಜಾದ್‌, ಸೂರ್ಯ ಸೇನ್‌ ಮತ್ತು ಇತರರನ್ನು ‘ಕ್ರಾಂತಿಕಾರಿ ಭಯೋತ್ಪಾದಕರು' ಎಂದು ಹೇಳಲಾಗಿದೆ.

ಈ ತಪ್ಪನ್ನು ಸರಿಪಡಿಸುವಂತೆ ಕೋರಿ ಭಗತ್‌ ಸಿಂಗ್‌ ಕುಟುಂಬದ ಸದಸ್ಯರು ದೆಹಲಿ ವಿ.ವಿ ಅಧಿಕಾರಿಗಳು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವನ್ನು ಆಗ್ರಹಿಸಿದ್ದಾರೆ.[ಭಗತ್ ಸಿಂಗ್ ಜನ್ಮಸ್ಥಳ ಕಾಪಾಡುತ್ತೇವೆ ಎಂದ ಪಾಕ್]

‘ಚಿತ್ತಗಾಂಗ್‌ ಚಳವಳಿ' ಮತ್ತು ಸ್ಯಾಂಡರ್ಸ್‌ ಹತ್ಯೆಯನ್ನು ಈ ಪಠ್ಯಪುಸ್ತಕದಲ್ಲಿ ‘ಭಯೋತ್ಪಾದಕ ಕೃತ್ಯ' ಎಂದು ಕರೆಯಲಾಗಿದೆ. ಭಗತ್‌ ಸಿಂಗ್ ಕುಟುಂಬದ ಸದಸ್ಯರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರಿಗೆ ಪತ್ರ ಬರೆದು ಕೂಡಲೇ ತಿದ್ದುಪಡಿ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.[ಜೈಲಿನಿಂದ ಬಿಡುಗಡೆಯಾದ ಕನ್ಹಯ್ಯಾ ಮೋದಿ ಬಗ್ಗೆ ಹೇಳಿದ್ದೇನು?]

ನವದೆಹಲಿಯ ಜವಾಹರಲಾಲ್ ನೆಹರು ವಿವಿಯಲ್ಲಿ ಭಯೋತ್ಪಾದಕ ಅಫ್ಜಲ್ ಗುರು ಪರ, ಭಾರತದ ವಿರುದ್ಧ ಘೋಷಣೆ ಕೂಗಿದ್ದು ದೊಡ್ಡ ಸುದ್ದಿಯಾಗಿತ್ತು. ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯಾ ಕುಮಾರ್ ನನ್ನು ಬಂಧನ ಮಾಡಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Read in English: Bhagat Singh a 'terrorist'?
English summary
Indian freedom fighter Shaheed Bhagat Singh, who sacrificed his life for the sake of country's independence, has been referred as terrorist in Delhi University's (DU) text book. The shocking factual mistake carried in the book 'India's Struggle for Independence' has become a bone of contention.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more