ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಾಕೋಟ್ ಟೆರರಿಸ್ಟ್ ಕ್ಯಾಂಪ್ ಬಗ್ಗೆ ಬೆಚ್ಚಿ ಬೀಳಿಸುವ ಸಂಗತಿಗಳು

|
Google Oneindia Kannada News

ಬಾಲಾಕೋಟ್ ನಲ್ಲಿ ತರಬೇತಿ ಪಡೆದಂಥ ಜೈಶ್-ಇ-ಮೊಹ್ಮದ್ ಉಗ್ರಗಾಮಿಗಳು ಗಡಿ ನಿಯಂತ್ರಣ ರೇಖೆಯ ಬಳಿ ಕುಪ್ವಾರದ ಮೂಲಕ ಭಾರತದೊಳಕ್ಕೆ ನುಸುಳಲು ನಾಲ್ಕು ಮಾರ್ಗಗಳು ಇದ್ದವು ಎಂಬುದನ್ನು ತನಿಖಾ ಸಂಸ್ಥೆಗಳು ಪತ್ತೆ ಮಾಡಿವೆ. ಭಾರತೀಯ ವಾಯು ಸೇನೆಯಿಂದ ಧ್ವಂಸ ಮಾಡಿದ ಉಗ್ರರ ನೆಲೆ ಬಗ್ಗೆ ವರದಿ ನೀಡುವುದರಲ್ಲಿ ಇದನ್ನು ತಿಳಿಸಲಾಗಿದೆ.

ಉಗ್ರರಿಗೆ ಉತ್ತೇಜನ ನೀಡುವ ಸಲುವಾಗಿ ಬಾಬ್ರಿ ಮಸೀದಿ ಕೆಡವುವ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು. ಮತ್ತು ಇಂಡಿಯನ್ ಏರ್ ಲೈನ್ಸ್ ವಿಮಾನ ಹೈಜಾಕ್ ಬಗ್ಗೆ ಕೂಡ ತೋರಿಸಲಾಗುತ್ತಿತ್ತು. ಇನ್ನು ಸೆರೆ ಸಿಕ್ಕಂಥ ಜೈಶ್ ಉಗ್ರನ ವಿಚಾರಣೆ ಮಾಡಿ ಸಹ ಮಾಹಿತಿ ಕಲೆ ಹಾಕಲಾಗಿದೆ. ಭಾರತೀಯ ಸೇನೆ ಕಾಶ್ಮೀರಿಗಳ ವಿರುದ್ಧ ದೌರ್ಜನ್ಯ ಮಾಡುತ್ತಿದೆ ಎಂದು ಸಹ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು ಎಂದು ಉಲ್ಲೇಖಿಸಲಾಗಿದೆ.

ಫೈವ್ ಸ್ಟಾರ್ ರೆಸಾರ್ಟ್ ನಂತಿದ್ದ ಬಲಾಕೋಟ್ ನ ಜೈಶ್ ಕ್ಯಾಂಪ್ಫೈವ್ ಸ್ಟಾರ್ ರೆಸಾರ್ಟ್ ನಂತಿದ್ದ ಬಲಾಕೋಟ್ ನ ಜೈಶ್ ಕ್ಯಾಂಪ್

ಬಾಲಾಕೋಟ್ ಆರು ಎಕರೆ ಸ್ಥಳದಲ್ಲಿತ್ತು. ಆರು ಕಟ್ಟಡಗಳು ಮತ್ತು ಆರು ನೂರು ಮಂದಿಗೆ ತಂಗುವಂಥ ವ್ಯವಸ್ಥೆ ಇತ್ತು. ಮದರಸಾ ಆಯೇಷಾ ಸಾದಿಕ್ ಎಂಬ ಹೆಸರಲ್ಲಿ ಈ ನೆಲೆ ನಡೆಯುತ್ತಿತ್ತು. ಇಲ್ಲಿ ತರಬೇತಿ ಪಡೆದ ಉಗ್ರರು ಪಾಕ್ ಆಕ್ರಮಿತ ಕಾಶ್ಮೀರದ ಕೇಲ್ ಗೆ ಹೋಗುತ್ತಿದ್ದರು. ಅಲ್ಲಿಂದ ಕುಪ್ವಾರ ಮೂಲಕ ಭಾರತದೊಳಕ್ಕೆ ನುಸುಳುತ್ತಿದ್ದರು.

Terrorists

ದುದ್ನಿಯಾಳ್, ಕೈಂಥ್ ವಾಲಿ ಅರಣ್ಯ, ಮಾಗ್ನಂ ಅರಣ್ಯ, ಲೋಲಬ್ ಹಾಗೂ ಕ್ರಾಲ್ ಪೂರ್ ಮೂಲಕ ಒಳನುಸುಳಲಾಗುತ್ತಿತ್ತು. ಬಾಲಾಕೋಟ್ ನಲ್ಲಿ ನಾನಾ ತರಬೇತಿ ನೀಡಲಾಗುತ್ತಿತ್ತು. ಮೂರು ತಿಂಗಳ ಉನ್ನತ ತರಬೇತಿಗೆ ದೌರಾ-ಇ-ಖಾಸ್, ಶಸ್ತ್ರಾಸ್ತ್ರ ಕೋರ್ಸ್ ದೌಮ್-ಅಲ್-ರಾದ್ ಹಾಗೂ ಪುನರ್ ತರಬೇತಿ ಶಿಬಿರಗಳು ನಡೆಯುತ್ತಿದ್ದವು ಎಂದು ತಿಳಿಸಲಾಗಿದೆ.

ಎಕೆ- 47, ಮಷೀನ್ ಗನ್, ರಾಕೆಟ್ ಲಾಂಚರ್, ಗ್ರನೇಡ್ ಬಳಕೆ ಹೇಳಿಕೊಡಲಾಗುತ್ತಿತ್ತು. ಇದರ ಹೊರತಾಗಿ ಶಸ್ತ್ರಾಸ್ತ್ರಗಳನ್ನು ಬಳಸುವ ಪ್ರಾಥಮಿಕ ತರಬೇತಿ, ಅರಣ್ಯಪ್ರದೇಶಗಳಲ್ಲಿ ತಾಲೀಮು, ಜಿಪಿಎಸ್ ಬಳಕೆ ಮಾಡುವುದನ್ನು ಕಲಿಸಿಕೊಡಲಾಗುತ್ತಿತ್ತು. ನಸುಕಿನ 3 ಗಂಟೆಗೆ ಏಳುತ್ತಿದ್ದ ಉಗ್ರರು, ನಮಾಜ್ ಮಾಡಿ ಹಾಗೂ ಕುರ್ ಆನ್ ಓದುತ್ತಿದ್ದರು. ಆ ನಂತರ ಕಠಿಣವಾದ ದೈಹಿಕ ವ್ಯಾಯಾಮ ಮಾಡುತ್ತಿದ್ದರು.

ಬಾಲಕೋಟ್ ಎಲ್ಲಿದೆ? ಲಾಡೆನ್ ಅಡಗುತಾಣದಲ್ಲೇ ಜೆಇಎಂ ಉಗ್ರರು?ಬಾಲಕೋಟ್ ಎಲ್ಲಿದೆ? ಲಾಡೆನ್ ಅಡಗುತಾಣದಲ್ಲೇ ಜೆಇಎಂ ಉಗ್ರರು?

ಸೇನಾ ಯೋಧರಂತೆ ವೇಷ ಮರೆಸಿಕೊಳ್ಳುವುದು, ವೈರ್ ಲೆಸ್ ಸೆಟ್ ಹಾಗೂ ಮೆಟ್ರಿಕ್ ಶೀಟ್ ಬಳಸುವುದನ್ನು ಕಲಿಸಲಾಗುತ್ತಿತ್ತು. ವಿರಾಮದ ವೇಳೆಯಲ್ಲಿ ಈ ಉಗ್ರರು ಫುಟ್ ಬಾಲ್ ಆಡುತ್ತಿದ್ದರು. ಇಸ್ಲಾಮಾಬಾದ್ ನ ಇನ್ನೂರು ಕಿ.ಮೀ. ದೂರಕ್ಕೆ ಖೈಬರ್ ಪಂಖ್ತುಖ್ವಾ ಬಾಲಾಕೋಟ್ ನ ಅರಣ್ಯ ಪ್ರದೇಶದ ಬೆಟ್ಟದ ಮೇಲೆ ಈ ಸ್ಥಳ ಇತ್ತು. ಜನವಸತಿ ಪ್ರದೇಶದಿಂದ ಬಹಳ ದೂರವೇ ಇತ್ತು.

ಕುನ್ಹಾರ್ ನದಿಯ ದಡದಲ್ಲೇ ಈ ಕ್ಯಾಂಪ್ ಇತ್ತು. ಭಯೋತ್ಪಾದಕರಿಗೆ ತರಬೇತಿ ನೀಡುವುದು ಈ ನೆಲೆಯಲ್ಲಿ ಆಗುತ್ತಿದ್ದ ಕೆಲಸ. ಇಲ್ಲಿದ್ದ ತರಬೇತುದಾರರು ನಿವೃತ್ತ ಪಾಕಿಸ್ತಾನಿ ಅಧಿಕಾರಿಗಳಾಗಿದ್ದರು.

English summary
Here is the shocking details about Jaish-e-Mohammad Balakot camp. This is just 200 Kilometer away from Pakistan's Islamabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X