ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

70 ವಿದ್ಯಾರ್ಥಿನಿಯರನ್ನು ಬೆತ್ತಲಾಗಿಸಿದ ವಾರ್ಡನ್: ಛಿ ಎಂಥ ನಾಚಿಕೆಗೇಡು!

ಋತುಮತಿಯಾಗಿರುವವರು ಯಾರು ಎಂಬುದನ್ನು ಪತ್ತೆ ಹಚ್ಚುವುದಕ್ಕಾಗಿ 70 ಕ್ಕೂ ಹೆಚ್ಚು ಹೆಣ್ಣು ಮಕ್ಕಳನ್ನು ಹಾಸ್ಟೆಲ್ ನ ವಾರ್ಡನ್ ವೊಬ್ಬರು ಬೆತ್ತಲಾಗಿಸಿದ ಘಟನೆ ಮುಜಾಫರ್ ನಗರದಲ್ಲಿ ನಡೆದಿದೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಲಕ್ನೊ, ಮಾರ್ಚ್ 31: ಛಿ ಎಂಥ ನಾಚಿಕೆಗೇಡು! ಎಂದು ಉದ್ಗಾರ ತೆಗೆಯಲೇಬೇಕಾದ ಘಟನೆಯೊಂದು ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ. ಇಲ್ಲಿನ ಮಹಿಳೆಯರ ರೆಸಿಡೆನ್ಶಿಯಲ್ ಸ್ಕೂಲ್ ವೊಂದರ ವಾರ್ಡನ್ ಹಾಸ್ಟೇಲ್ ನಲ್ಲಿರುವ ಹೆಣ್ಣು ಮಕ್ಕಳಲ್ಲಿ ಋತುಮತಿಯಾಗಿರುವವರು ಯಾರು ಎಂದು ತಿಳಿಯುವುದಕ್ಕಾಗಿ 70 ಕ್ಕೂ ಹೆಚ್ಚು ಹೆಣ್ಣು ಮಕ್ಕಳನ್ನು ಬೆತ್ತಲಾಗಿಸಿದ ವಿಚಿತ್ರ, ಅಸಹ್ಯಕರ ಘಟನೆ ಇದು!

ಕಸ್ತೂರ್ ಬಾ ಗಾಂಧಿ ಗರ್ಲ್ಸ್ ರೆಸಿಡೆನ್ಶಿಯಲ್ ಸ್ಕೂಲ್ ನ ಬಾತ್ ರೂಮ್ ವೊಂದರ ಗೋಡೆಯ ಮೇಲೆ ರಕ್ತದ ಕಲೆಗಳಿದ್ದವು. ಇದನ್ನು ಕಂಡ ವಾರ್ಡನ್ ಇದೇನು ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಯಾರೊಬ್ಬರೂ ಉತ್ತರಿಸಲಿಲ್ಲ. ಆ ರಕ್ತದ ಕಲೆ ಋತುಸ್ರಾವದ್ದಿರಬಹುದು ಎಂದು ಅಂದಾಜಿಸಿದ ವಾರ್ಡನ್ ಹಾಸ್ಟೇಲಿನಲ್ಲಿರುವ ಪ್ರತಿಯೊಬ್ಬ ಹುಡುಗಿಯರನ್ನೂ ಬೆತ್ತಲಾಗಿಸಿದ್ದಾರೆ. ಆಕೆಯ ಮಾತನ್ನು ಕೇಳದಿದ್ದರೆ ಹೊಡೆಯುವುದಾಗಿ ಹೆದರಿಸಿದ್ದಾರೆ.[ಮತ್ತೆ ಬೆಂಗಳೂರಲ್ಲಿ ಯುವತಿಗೆ ಲೈಂಗಿಕ ಕಿರುಕುಳ?!]

Shocking and a strange news from Muzaffernagar

ಈ ಘಟನೆಯಿಂದ ಮನನೊಂದ ಹೆಣ್ಣು ಮಕ್ಕಳು ಪಾಲಕರಿಗೆ ದೂರು ಹೇಳಿದ್ದಾರೆ. ಇಂಥ ಅಸಹ್ಯಕರ ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಪಾಲಕರು ರೆಸಿಡೆನ್ಶಿಯಲ್ ಶಾಲೆಯ ಆಡಳಿತ ಮಂಡಳಿಗೆ ದೂರು ಹೇಳಿದ್ದಾರೆ. ವಿದ್ಯಾರ್ಥಿಗಲೆಲ್ಲರ ಅಭಿಪ್ರಾಯವನ್ನು ಕಲೆಹಾಕಿದ ಮೇಲೆ ಈ ವಾರ್ಡನ್ ರನ್ನು ಕೆಲಸದಿಂದ ತೆಗೆದುಹಾಕಲಾಗಿದೆ.[ಹಲಸೂರು ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ]

ನನಗೆ ಈ ಹಾಸ್ಟೆಲ್ ನಲ್ಲಿರುವ ಎಲ್ಲ ಹೆಣ್ಣು ಮಕ್ಕಳ ಮೇಲೂ ತುಂಬಾ ಕಾಳಜಿಯಿದೆ. ಬಾತ್ ರೂಮಿನಲ್ಲಿ ರಕ್ತದ ಕಲೆ ನೋಡಿ ಭಯವಾಯ್ತು. ಈ ಹೆಣ್ಣು ಮಕ್ಕಳಲ್ಲಿ ಯಾರಿಗೋ ಏನೋ ಆಗಿದೆ, ಆದರೂ ಹೆದರಿ ಮುಚ್ಚಿಡುತ್ತಿದ್ದಾರೆ ಅನ್ನಿಸಿತು. ಅವರ ಮೇಲಿನ ಕಾಳಜಿಯಿಂದ ಹೀಗೆ ಮಾಡಿದೆ ಎನ್ನುತ್ತಾರೆ ಈ ವಾರ್ಡನ್. ಆದರೆ ಅವರಿಗೆ ನಿಜಕ್ಕೂ ಅಷ್ಟೆಲ್ಲ ಕಾಳಜಿ ಇದ್ದಿದ್ದರೆ ವೈಯಕ್ತಿಕವಾಗಿ ಒಬ್ಬೊಬ್ಬರನ್ನೇ ಕರೆದು ಅವರ ಸಮಸ್ಯೆಯನ್ನು ಕೇಳಬಹುದಿತ್ತು, ಅದನ್ನು ಬಿಟ್ಟು ಬಟ್ಟೆ ಬಿಚ್ಚಿಸಿ, ಅವಮಾನ ಮಾಡುವ ಅಗತ್ಯವೇನಿತ್ತು ಎಂಬುದು ಪಾಲಕರ ವಾದ.[ವರದಕ್ಷಿಣೆ ಕಿರುಕುಳ : ನೇಣಿಗೆ ಶರಣಾದ ಗೃಹಿಣಿ, ಕೊಲೆ ಶಂಕೆ]

ಹೆಣ್ಣು ಮಕ್ಕಳು ಓದದೆ, ಕಾಲಹರಣ ಮಾಡುತ್ತಿದ್ದರೆ ನಾನು ಅವರಿಗೆ ಕೋಪದಿಂದ ನಾಲ್ಕು ಮಾತು ಹೇಳುತ್ತಿದ್ದೆ, ಅವರಿಗೆಲ್ಲ ನನ್ನ ಮೇಲೆ ಅದಕ್ಕೇ ದ್ವೇಷ, ಅದೂ ಅಲ್ಲದೆ, ನನ್ನನ್ನು ವೃತ್ತಿ ಮಾತ್ಸರ್ಯದಿಂದ ನೋಡುವ ಕೆಲವು ಉದ್ಯೋಗಿಗಳ ಕುತಂತ್ರವೂ ಇದಾಗಿರಬಹುದು ಎನ್ನುತ್ತಾರೆ ಈ ವಾರ್ಡನ್.

English summary
To check menstrual blood a hostel warden in Muzaffernagar ordered to remove thier dress to more than 70 girls. The girls and their parents shocked by the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X