• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿರಡಿ ಬಾಬಾ ಭಕ್ತರ ಬಹುದಿನದ ಕನಸು ಇನ್ನೇನು ನನಸು

|

ಅಹಮದ್ ನಗರ, ಫೆ 17: ದೇಶಾದ್ಯಂತ ಇರುವ ಲಕ್ಷಾಂತರ ಶಿರಡಿ ಬಾಬಾ ಭಕ್ತರ ಬಹುದಿನದ ಕನಸು ಇನ್ನೇನು 2-3 ತಿಂಗಳಲ್ಲಿ ಸಾಕಾರಗೊಳ್ಳಲಿದೆ.

ಶಿರಡಿಯಲ್ಲಿ ವಿಮಾನ ನಿಲ್ದಾಣ ಸೌಲಭ್ಯ ಇರಬೇಕು ಎನ್ನುವ ಕನಸು ಎಲ್ಲಾ ಅಂದು ಕೊಂಡಂತೆ ನಡೆದರೆ ಇದೇ ಮೇ ತಿಂಗಳ ಮೊದಲ ವಾರದಲ್ಲಿ ವಿಮಾನ ನಿಲ್ದಾಣ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. (ಶಿರಡಿ, ತಿರುಪತಿ- ಆದಾಯದಲ್ಲಿ ಯಾವುದು ಮುಂದು)

ಶಿರಡಿಯಿಂದ ಹದಿನಾಲ್ಕು ಕಿಲೋಮೀಟರ್ ದೂರದ ಕಾಕಾಡಿ ಎನ್ನುವಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣದ ಕಾಮಗಾರಿ 2010ರಲ್ಲಿ ಆರಂಭಗೊಂಡಿತ್ತು. ಕಳೆದ ವರ್ಷವೇ ವಿಮಾನ ನಿಲ್ದಾಣ ಸಾರ್ವಜನಿಕ ಸೇವೆಗೆ ಸಿದ್ದವಾಗ ಬೇಕಿತ್ತು.

ಮಹಾರಾಷ್ಟ್ರ ವಿಮಾನ ನಿಲ್ದಾಣ ಅಭಿವೃದ್ದಿ ಪ್ರಾಧಿಕಾರ ಖಾಸಗಿ ಕಂಪೆನಿಯೊಂದರ ಸಹಭಾಗಿತ್ವದೊಂದಿಗೆ ಈ ವಿಮಾನ ನಿಲ್ದಾಣ ನಿರ್ಮಿಸುತ್ತಿದ್ದು, ಶ್ರೀ ಸಾಯಿಬಾಬ ದೇವಸ್ಥಾನ ಮಂಡಳಿ ಇದಕ್ಕಾಗಿ 45 ಕೋಟಿ ರೂಪಾಯಿ ನೀಡಿದೆ.

ಸುಮಾರು ಮುನ್ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ನಿರ್ಮಾಣಗೊಳ್ಳುತ್ತಿರುವ ಈ ವಿಮಾನ ನಿಲ್ದಾಣದಿಂದ ಶಿರಡಿ ದೇವಾಲಯದ ವರೆಗಿನ ದೂರವನ್ನು ಕ್ರಮಿಸಲು ಎರಡು ಪಥದ ರಸ್ತೆ ನಿರ್ಮಾಣ ಕಾರ್ಯ ಕೂಡ ಭರದಿಂದ ಸಾಗುತ್ತಿದೆ.

60 ಮೀಟರ್ ಅಗಲ, 11 ಕಿಲೋಮೀಟರ್ ಸುತ್ತಳತೆ, 2000 ಮೀಟರ್ ಉದ್ದದ ರನ್ ವೇ ಕಾಮಗಾರಿ ಚಾಲ್ತಿಯಲ್ಲಿದೆ ಮತ್ತು ಟರ್ಮಿನಲ್, ಪಾರ್ಕಿಂಗ್ ಕೆಲಸ ಕೂಡಾ ಸಾಗುತ್ತಿದೆ.

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಿಂದ ವಿಮಾನ ನಿಲ್ದಾಣಕ್ಕೆ ನೀರು ಸರಬಾರಜು ಆಗಲಿದ್ದು ಮತ್ತು ಈಗಾಗಲೇ ಹೆಲಿಕಾಪ್ಟರ್ ಮತ್ತು ವಿಮಾನಗಳು ಈ ವಿಮಾನ ನಿಲ್ದಾಣದಲ್ಲಿ ತರಬೇತಿ ನಡೆಸಿವೆ.

ಲಭ್ಯವಿರುವ ಪ್ರಾಥಮಿಕ ಮಾಹಿತಿಗಳ ಪ್ರಕಾರ ಪ್ರತೀ ದಿನ ಶಿರಡಿ ವಿಮಾನ ನಿಲ್ದಾಣಕ್ಕೆ ಹತ್ತು ವಿಮಾನ ಬಂದು ಹೋಗಲು ಅವಕಾಶ ಕಲ್ಪಿಸಲಾಗಿದೆ. (ಶಿರಡಿ ದೇಗುಲಕ್ಕೆ 305 ಕೋಟಿ ರು ದೇಣಿಗೆ)

ಮಾಹಿತಿ ಪ್ರಕಾರ, ಬೆಂಗಳೂರು - ಪುಣೆ - ಶಿರಡಿ (ದಿನಕ್ಕೆ 2) ದೆಹಲಿ - ಶಿರಡಿ (ದಿನಕ್ಕೆ 1), ಅಹಮದಾಬಾದ್ - ಶಿರಡಿ (ವಾರದಲ್ಲಿ ನಾಲ್ಕು ದಿನ), ಮುಂಬೈ - ಶಿರಡಿ (ದಿನಕ್ಕೆ 2), ಶಿರಡಿ - ಮುಂಬೈ - ತಿರುಪತಿ (ದಿನಕ್ಕೆ 1) ವಿಮಾನ ಸಂಚರಿಸಲಿವೆ.

ಶಿರಡಿ ಯಾತ್ರಾಸ್ಥಳವನ್ನು ವಿಮಾನದ ಮೂಲಕ ತಲುಪಲು 125 ಕಿಲೋಮೀಟರ್ ದೂರದ ಔರಂಗಾಬಾದ್ ವಿಮಾನ ನಿಲ್ದಾಣವನ್ನು ಅವಲಂಬಿಸ ಬೇಕಾಗಿತ್ತು.

English summary
Good News for Baba devotees. Shirdi Airport will be ready for take off during May 2014. 350 crores project airport work will be completed in March and ready for public operation from May 2014. Every day ten flights will be operating from this airport, includes two flights from Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more