ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಮ್ಲಾದಲ್ಲಿ ಕಳೆದ 13 ವರ್ಷಗಳಲ್ಲೇ ಕಾಣದ ದಾಖಲೆಯ ಮಳೆ

By Nayana
|
Google Oneindia Kannada News

ಶಿಮ್ಲಾ, ಜು.3: ಕಳೆದ ಮೂರು ತಿಂಗಳಿನಿಂದ ಬಿಸಿಲ ಬೇಗೆಯಲ್ಲಿ ಬೆಂದಿದ್ದ, ನೀರಿಗೂ ಪರಿತಪಿಸುತ್ತಿದ್ದ ಹಿಮಾಚಲ ಪ್ರದೇಶದ ಶಿಮ್ಲಾ ಜನತೆಗೆ ವರುಣನ ಆಗಮನದಿಂದ ಆನಂದವಾಗಿದೆ. ಜತೆಗೆ ಈ ಬಾರಿ 13 ವರ್ಷಗಳಲ್ಲೇ ಆಗದ ದಾಖಲೆ ಮಳೆಯಾಗಿದೆ.

ಶಿಮ್ಲಾದಲ್ಲಿ ಕಳೆದ ಮೂರು ತಿಂಗಳಿನಿಂದ ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ ಉಂಟಾಗಿತ್ತು, ಒಂದು ವಾರಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿತ್ತು.ಕಿಲೋಮೀಟರ್‌ಗಳಷ್ಟು ದೂರ ನಡೆದು ನೀರನ್ನು ಹೊತ್ತು ಮನೆಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಮಳೆ ಬಂದು ಜತೆಗೆ ಅನಾಹುತವನ್ನೂ ತಂದಿದೆ.

ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ ಸಂಭವಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ ಸಂಭವ

ಕಳೆದ 24 ಗಂಟೆಯೊಳಗ್ಗೆ ಬರೋಬ್ಬರಿ 118 ಮಿ.ಮೀ ಮಳೆಯಾಗಿದೆ. 2005ರಲ್ಲಿ 118.4 ಮಿ.ಮೀನಷ್ಟು ಮಳೆಯಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ. ಅರೇಬಿಯನ್‌ ಸಮುದ್ರ ಹಾಗೂ ಬೇ ಆಫ್‌ ಬೆಂಗಾಲ್‌ನಲ್ಲಿ ದಟ್ಟ ಮೋಡ ಆವರಿಸಿಕೊಂಡಿರುವುದು ಇಲ್ಲಿಯ ಮಳೆಗೆ ಕಾರಣವಾಗಿದೆ.

Shimla records highest rainfall in 13 years

ನೈಋತ್ಯ ಮುಂಗಾರು ರಾಜ್ಯದಲ್ಲಿ ಚುರುಕಾಗಿದ್ದು, ಶಿಮ್ಲಾ, ಬಿಲಾಸ್‌ಪುರ್‌, ಸೋಲನ್‌, ಊನಾ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದೆ. ಬಿಲಾಸ್‌ಪುರ ಹಾಗೂ ಮಂಡಿ 65 ಹಾಗೂ 45ಮಿ.ಮೀನಷ್ಟು ಮಳೆಯಾಗಿದೆ. ಗುರುವಾರದವರೆಗೂ ಭಾರಿ ಮಳೆ ಮುಂದುವರೆಯಲಿದೆ.

English summary
Himachal Pradesh capital Shimla on Tuesday recorded the highest precipitation of 118 mm within 24 hours since 2005, a MeT official said here. The state capital had recorded 118 mm precipitation over the past 24 hours till 8.30 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X