• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಬ್ರಿ ಮಸೀದಿ ಧ್ವಂಸ: ಟ್ರೆಂಡಿಂಗ್ ಆಯ್ತು 'ಶೌರ್ಯ ದಿವಸ'

|

ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಇಂದಿಗೆ ಸರಿಯಾಗಿ 25 ವರ್ಷ ಸಂದಿದೆ. ಡಿಸೆಂಬರ್ 6ರ ಈ ದಿನವನ್ನು ಶೌರ್ಯದಿನವನ್ನಾಗಿ ಆಚರಿಸಲು ಹಲವರು ನಿರ್ಧರಿಸಿದ್ದರೆ, ಮತ್ತೊಮದು ಮತೀಯರಿಗೆ ನೋವು ನೀಡಿ ಆ ದಿನವನ್ನು ಶೌರ್ಯ ದಿನವೆಂದು ಆಚರಿಸುವುದು ಎಂಥ ನೀಚ ಕೃತ್ಯ ಎಂದು ಮತ್ತಷ್ಟು ಜನ ಹೀಗಳೆದಿದ್ದಾರೆ.

25 ವರ್ಷಗಳ ಬಾಬ್ರಿ ಮಸೀದಿ ವಿವಾದ, ಟೈಮ್ ಲೈನ್

ಟ್ವಿಟ್ಟರ್ ನಲ್ಲಿ ಬೆಳಿಗ್ಗೆಯಿಂದ ಶೌರ್ಯ ದಿನ ಎಂಬುದು ಟ್ರೆಂಡಿಂಗ್ ಆಗಿದ್ದು, ಹಲವರು ಈ ದಿನವನ್ನು ಹಿಂದುಗಳ ಆತ್ಮಗೌರವದ ಪ್ರತೀಕ ಎಂದು ಬಣ್ಣಿಸಿದ್ದಾರೆ.

ಬಾಬ್ರಿ ಮಸೀದಿ ಧ್ವಂಸ ಪ್ರಕರಣ : 8 ಪ್ರಮುಖ ಬೆಳವಣಿಗೆ

ರಾಮ ಹುಟ್ಟಿದ ಸ್ಥಳದಲ್ಲಿ ನಿರ್ಮಿಸಿದ್ದ ಮಸೀದಿಯನ್ನು 1992 ರಲ್ಲಿ ಹಿಂದುಪರ ಸಂಘಟನೆಯ ಕಾರ್ಯಕರ್ತರು, ಕರಸೇವಕರು ಕೆಡವಿದ್ದರು. ಮೂಲತಃ ರಾಮ ಜನಿಸಿದ ಭೂಮಿಯಲ್ಲಿ, ಅಂದು ನಿರ್ಮಿಸಲಾಗಿದ್ದ ರಾಮನ ದೇವಸ್ಥಾನವನ್ನು ಕೆಡವಿ ಹದಿನಾರನೇ ಶತಮಾನದ ಮೋಘಲ್ ದೊರೆ ಬಾಬರ್ ನೇತೃತ್ವದಲ್ಲಿ ನಿರ್ಮಿಸಲಾಯಿತೆಂಬುದು ಮೂಲವಾದ. ಆ ಮಸೀದಿಯನ್ನು ಅಡ್ವಾಣಿ ಮತ್ತಿತರರು ಸಂಚು ಹೂಡಿ ಕೆಡವಿದರು ಎಂಬುದು ವಿವಾದದ ಹೂರಣ.

ಅವರೆಲ್ಲ ಕೊಲೆಗಡುಕರು ಎಂದ ಸಾಗರಿಕಾ

ಶೌರ್ಯ ದಿವಸ್ ವನ್ನು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಮಾಡುತ್ತಿರುವವರು ತಾವು ಅಪರಾಧಿ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ. ಅವರು ಮತದೊಂದಿಗೆ ಯಾವ ನಂಟನ್ನೂ ಹೊಂದಿಲ್ಲ. ಅವರೆಲ್ಲ ಕೇವಲ ಕೊಲೆಗಡುಕರು ಎಂದು ಸಾಗರಿಕಾ ಘೋಶ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ನಿಜಕ್ಕೂ ಬೇಸರವಾಗುತ್ತಿದೆ!

ಶೌರ್ಯ ದಿನವನ್ನು ಆಚರಿಸುತ್ತಿರುವವರ ಮಕ್ಕಳು ಮತ್ತು ಅವರ ಪತಿ ಅಥವಾ ಪತ್ನಿಯರನ್ನು ನೆನೆದರೆ ನಿಜಕ್ಕೂ ಬೇಸರವಾಗುತ್ತದೆ. ಶೌರ್ಯ ದಿನವನ್ನು ಆಚರಿಸುತ್ತಿರುವವರು ಅವರೆಲ್ಲರಲ್ಲೂ ದ್ವೇಷವನ್ನೇ ಬಿತ್ತುತ್ತಿದ್ದಾರೆ ಎಂದು ಪ್ರೇರಣಾ ಬಕ್ಷಿ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಆತ್ಮಗೌರವ ಉಳಿಸಲು...

1992 ರಲ್ಲಿ ಈ ದಿನ ವೀರ ಹಿಂದುಗಳು, ತಮ್ಮ ಆತ್ಮಗೌರವವನ್ನು ಬಲಿಕೊಡಲು ಇಷ್ಟವಿಲ್ಲದೆ ಆಕ್ರಮಣಶೀಲತೆಯ ಪ್ರತೀಕವಾಗಿದ್ದ ಮಸೀದಿಯನ್ನು ನಾಶಗೊಳಿಸಿದರು ಎಂದು ರಿಶಿ ಬ್ಯಾಗ್ರಿ ಎನ್ನುವವರು ಟ್ವೀಟ್ ಮಾಡಿದ್ದಾರೆ.

ನಾಚಿಕೆಯಾಗುತ್ತಿದೆ!

ನಮ್ಮದೇ ದೇಶದಲ್ಲಿ ಒಂದು ಹಿಂದು ದೇವಾಲಯವನ್ನು ನಿರ್ಮಿಸಲು ನನ್ನನ್ನೂ ಸೇರಿ 1.1 ಶತಕೋಟಿ ಹಿಂದುಗಳಿಗೆ ಇನ್ನೂ ಸಾಧ್ಯವಾಗಲಿಲ್ಲವಲ್ಲ ಎಂದು ನಾಚಿಕೆಯಾಗುತ್ತಿದೆ ಎಂದು ರಾಕೇಶ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಇದರಲ್ಲಿ ಯಾವ ಶೌರ್ಯವಿದೆಯೋ?

ಒಂದು ಹೇಡಿತನದ ಕೃತ್ಯವನ್ನು ಅದು ಹೇಗೆ ಶೌರ್ಯದಿನವೆಂದು ಕರೆಯುತ್ತಾರೋ ನನಗಂತೂ ಅರ್ಥವಾಗುತ್ತಿಲ್ಲ. ಇದರಲ್ಲಿ ಯಾವ ಶೌರ್ಯವಿದೆಯೋ ಎಂದು ರಾಜದೀಪ್ ಸರ್ದೇಸಾಯಿ ಟ್ವೀಟ್ ಮಾಡಿದ್ದಾರೆ.

ರೌಶನ್ ರಾಜ್

ಶೌರ್ಯ ದಿವಸ ಎಂಬುದು ಭಾರತದ ಇತಿಹಾಸದಲ್ಲೇ ಬಹಳ ಅಪರೂಪದ ದಿನ. ಈ ದಿನ ನೂರಾರು ಹಿಂದುಗಳು ಒಂದೇ ಸೂರಿನಡಿ ಒಂದಾಗಿ ನಮ್ಮ ಆತ್ಮ ಗೌರವವನ್ನು ಕೆಣಕುವ, ಅವಮಾನಿಸುವ, ದಬ್ಬಾಳಿಕೆ ಮಾಡುವ ಒಂದು ಆಕೃತಿಯನ್ನು ಕೆಡವಿದರು ಎಂದು ರೌಶನ್ ರಾಜ್ ಟ್ವೀಟ್ ಮಾಡಿದ್ದಾರೆ.

ರಾಮ ದೇವಾಲಯ ನಿರ್ಮಿಸಿದರೆ ತಪ್ಪೇನು?

ಕ್ರೈಸ್ತರಿಗೆ ಜರುಸಲೇಂನಲ್ಲಿ ಪವಿತ್ರ ಚರ್ಚ್ ಇರುವಂತೆ, ಮುಸ್ಲಿಮರಿಗೆ ಮೆಕ್ಕಾದಲ್ಲಿ ಮಸೀದಿ ಇರುವಂತೆ, 1.15 ಶತಕೋಟಿ ಹಿಂದುಗಳಿರುವ ಭಾರತದಲ್ಲಿ, ರಾಮನ ಜನ್ಮಸ್ಥಾನವಾದ ಅಯೋಧ್ಯಯಲ್ಲಿ ರಾಮ ಮಂದಿರ ನಿರ್ಮಿಸುವುದಕ್ಕೆ ಈ 'ಜಾತ್ಯಾತೀತ' ವಿರೋಧವೇಕೆ? ಎಂದು ಅಮೃತಾ ಭಿಂದರ್ ಎಂಬುವವರು ಟ್ವೀಟ್ ಮಾಡಿದ್ದಾರೆ

ಐಸಿಸ್ ಗಳಿಗೆ ಬೆಂಬಲ ನೀಡುವವರು!

ಬಾಬ್ರಿ ಮಸೀದಿಯ ಬೆಂಬಲಿಗರೆಲ್ಲ ಭವಿಷ್ಯದಲ್ಲಿ ಐಸಿಸ್ ಆಗುವವರೇ! ಬಾಬರ್ ಮತ್ತು ಔರಂಗಜೇಬ್ ಆ ಕಾಲದ ಐಸಿಸ್ ಆಗಿದ್ದವರು! ಅವರ ಹಿಂಸೆಯ ಪ್ರತಿರೂಪ ಅದು ಎಂದು ಸಂಕ್ರಾಂತ್ ಸನು ಎಂಬುವವರು ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Many Hindus are celebrating Dec 6th as Shaurya Diwas, as the day is known for demolition of Babri masjid. Members of Hindu for organisation demolished the mosque on Dec 6th, 1992.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more