ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲಿಂಗಕಾಮ ಸಕ್ರಮ: ಕಾಂಗ್ರೆಸ್‌ನ ಶಶಿ ತರೂರ್ ಎತ್ತಿದ್ದರು ಮೊದಲ ಧ್ವನಿ

By Manjunatha
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 06: ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸುತ್ತಿದ್ದ 72 ವರ್ಷಗಳ ಹಿಂದೆ ರಚಿಸಿದ್ದ ಸೆಕ್ಷನ್ 377 ಸುಪ್ರೀಂಕೋರ್ಟ್‌ನ ಐತಿಹಾಸಿಕ ತೀರ್ಪಿನಿಂದಾಗಿ ಕಸದಬುಟ್ಟಿ ಸೇರಿದೆ.

ಈ ಹೋರಾಟದಕ್ಕೆ ಸುಮಾರು 20 ವರ್ಷಗಳ ಇತಿಹಾಸವಿದೆ. ಆಗ ಅಷ್ಟೇನೂ ಗಟ್ಟಿಯಾಗಿಲ್ಲದಿದ್ದ ಸೆಕ್ಷನ್ 377 ವಿರೋಧಿ ಹೋರಾಟಕ್ಕೆ ಮೊದಲ ಬಾರಿಗೆ ಗಟ್ಟಿ ಧನಿ ತಂದುಕೊಟ್ಟವರು ಕಾಂಗ್ರೆಸ್ ಮಾಜಿ ಸಚಿವ, ಹಾಲಿ ಸಂಸದ ಶಶಿ ತರೂರ್.

ಸಲಿಂಗಕಾಮ ಹೋರಾಟಗಾರರಿಗೆ ಕೊನೆಗೂ ಸಿಕ್ಕ ಜಯಸಲಿಂಗಕಾಮ ಹೋರಾಟಗಾರರಿಗೆ ಕೊನೆಗೂ ಸಿಕ್ಕ ಜಯ

ಹೌದು, ಶಶಿ ತರೂರ್ ಅವರು ಮೊದಲ ಬಾರಿಗೆ ಸಂಸತ್‌ನಲ್ಲಿ ಸಲಿಂಗಕಾಮವನ್ನು ಸಕ್ರಮಗೊಳಿಸುವ ಬಿಲ್‌ಬಗ್ಗೆ ಮಾತನಾಡಿದ್ದರು. ಆದರೆ ಆಗ ಬಿಜೆಪಿಯಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.

ಮಹಾಭಾರತದ ಶಿಖಂಡಿ ಪಾತ್ರದ ಉದಾಹರಣೆ

ಮಹಾಭಾರತದ ಶಿಖಂಡಿ ಪಾತ್ರದ ಉದಾಹರಣೆ

ಮಹಾಭಾರತದ ಶಿಖಂಡಿ, ಅರ್ಧನಾರೀಶ್ವರ ಕಲ್ಪನೆಯನ್ನು ಉದಾಹರಣೆಯಾಗಿ ಇರಿಸಿಕೊಂಡು ಶಶಿ ತರೂರ್ ಅವರು ಅದ್ಭುತವಾಗಿ ಮಾತನಾಡಿ, ಸಲಿಂಗಕಾಮಿಗಳಿಗೆ ಅವರ ಹಕ್ಕನ್ನು ನೀಡುವ ಬಗ್ಗೆ ಸದನದ ಗಮನ ಸೆಳೆದಿದ್ದರು. ಅಷ್ಟೆ ಅಲ್ಲದೆ ತೃತೀಯ ಲಿಂಗಿಗಳಿಗೆ ಸಿಗಬೇಕಾದ ಹಕ್ಕುಗಳ ಬಗ್ಗೆಯೂ ಸುದೀರ್ಘವಾಗಿ ಮಾತನಾಡಿದ್ದರು.

ತೃತೀಯ ಲಿಂಗಿಗಳ ಅಭಿವೃದ್ಧಿಗೆ ಕೇಂದ್ರ ಸಮಿತಿ

ತೃತೀಯ ಲಿಂಗಿಗಳ ಅಭಿವೃದ್ಧಿಗೆ ಕೇಂದ್ರ ಸಮಿತಿ

ತೃತೀಯ ಲಿಂಗಿಗಳ ಅಭಿವೃದ್ಧಿಗೆ ಕೇಂದ್ರ ಸಮಿತಿ, ಅವರಿಗೆ ವಿಶೇಷ ಶೌಚಾಲಯ, ಜೈಲುಗಳಲ್ಲಿ ವಿಶೇಷ ಸೆಲ್‌ಗಳು, ಅವರಿಗೆ ಒಟ್ಟಿಗೆ ಬಾಳಲು ಮಾಡಿಕೊಡಬೇಕಾದ ವ್ಯವಸ್ಥೆ ಇನ್ನೂ ಹಲವು ವಿಷಯಗಳ ಬಗ್ಗೆ ಅವರು ಮಾತನಾಡಿದ್ದರು. ಅವರ ಭಾಷಣ ಈಗಲೂ ಯೂಟ್ಯೂಬ್‌ನಲ್ಲಿ ಲಭ್ಯವಿದೆ.

ಸಲಿಂಗಕಾಮ ಅಪರಾಧವಲ್ಲ : ಸುಪ್ರೀಂ ನ್ಯಾಯಮೂರ್ತಿಗಳು ಹೇಳಿದ್ದೇನು?ಸಲಿಂಗಕಾಮ ಅಪರಾಧವಲ್ಲ : ಸುಪ್ರೀಂ ನ್ಯಾಯಮೂರ್ತಿಗಳು ಹೇಳಿದ್ದೇನು?

ಪ್ರತಿ ವ್ಯಕ್ತಿಗೂ ಸಮಾನ ಹಕ್ಕು

ಪ್ರತಿ ವ್ಯಕ್ತಿಗೂ ಸಮಾನ ಹಕ್ಕು

ಹುಟ್ಟಿದ ಪ್ರತಿ ವ್ಯಕ್ತಿಯೂ ಸಮಾನವಾದ ಹಕ್ಕುಗಳು ಹಾಗೂ ಗೌರವದೊಂದಿಗೆ ಹುಟ್ಟುತ್ತಾನೆ, ನಾನೂ ಮತ್ತು ನೀವು ಅನುಭವಿಸುತ್ತಿರುವ ಹಕ್ಕುಗಳು ಹಾಗೂ ಸ್ವಾತಂತ್ರ್ಯ ಅವರಿಗೂ ದೊರಕಬೇಕು ಎಂಬುದು ಶಶಿ ತರೂರ್ ಅವರ ವಾದವಾಗಿತ್ತು.

ಎಲ್ ಜಿಬಿಟಿ ಅಂದರೇನು, ಕಾಮನಬಿಲ್ಲಿನ ಬಾವುಟ ಏಕೆ? ಎಲ್ ಜಿಬಿಟಿ ಅಂದರೇನು, ಕಾಮನಬಿಲ್ಲಿನ ಬಾವುಟ ಏಕೆ?

ಎನ್‌ಡಿಎ ಬೆಂಬಲಿಸಲಿಲ್ಲ

ಎನ್‌ಡಿಎ ಬೆಂಬಲಿಸಲಿಲ್ಲ

ಆದರೆ ಬಹುಸಂಖ್ಯೆಯಲ್ಲಿದ್ದ ಎನ್‌ಡಿಎ ಶಶಿ ತರೂರ್ ಅವರ ಬಿಲ್‌ಗೆ ಮತಹಾಕಲಿಲ್ಲ ಹಾಗಾಗಿ ಅದು ಸದನದಲ್ಲಿ ಪಾಸ್ ಆಗಲೇ ಇಲ್ಲ. ಆಗಲೇ ಈ ವಿಷಯದ ಬಗ್ಗೆ ಪೂರ್ಣ ಚರ್ಚೆಯಾಗಿದ್ದರೆ ಇನ್ನಷ್ಟು ಬೇಗ ಅಮಾನವೀಯ, ಅಸಮಾನತೆಯನ್ನೇ ಸಾರುವ ಸೆಕ್ಷನ್ 377 ಕಸದ ಬುಟ್ಟಿಗೆ ಸೇರಿರುತ್ತಿತ್ತು.

ಸಹಮತದ ಸಲಿಂಗಕಾಮ ಅಪರಾಧವಲ್ಲ: ಸುಪ್ರೀಂ ತೀರ್ಪಿಗೆ ಗಣ್ಯರೇನಂತಾರೆ? ಸಹಮತದ ಸಲಿಂಗಕಾಮ ಅಪರಾಧವಲ್ಲ: ಸುಪ್ರೀಂ ತೀರ್ಪಿಗೆ ಗಣ್ಯರೇನಂತಾರೆ?

English summary
Congress MP Shashi Tharoor once talked about abandoning section 377 but NDA members did not support for it. Even BJP members did not allowed Shashi Tharoor to speak about it first.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X