ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಶಿ ತರೂರ್, ಜೈರಾಮ್ ರಮೇಶ್ ವಿರುದ್ಧ ಹುಲಿಯಂತೆ ಅಬ್ಬರಿಸಿದ ಮೊಯಿಲಿ

By ಅನಿಲ್ ಆಚಾರ್
|
Google Oneindia Kannada News

ಯುಪಿಎ ಸರಕಾರದ ಎರಡನೇ ಅವಧಿಯಲ್ಲಿ 'ನೀತಿ ಅಸ್ತವ್ಯಸ್ತ' ಆಗುವುದಕ್ಕೆ ಕಾಂಗ್ರೆಸ್ ನ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಕಾರಣ ಎಂದು ಕೇಂದ್ರದ ಮಾಜಿ ಸಚಿವ- ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಆರೋಪ ಮಾಡಿದ್ದಾರೆ. ಹಲವು ವಿಚಾರಗಳಲ್ಲಿ ಕಾಂಗ್ರೆಸ್ ನಿಂದ ಮೋದಿಯನ್ನು ಕೆಟ್ಟದಾಗಿ ಬಿಂಬಿಸುತ್ತಿದ್ದರೂ ಮೊಯಿಲಿ ಅವರು ಜೈರಾಂ ರಮೇಶ್ ಮೇಲೆ ಆರೋಪಗಳನ್ನು ಮಾಡಿದ್ದಾರೆ.

ಯುಪಿಎ ಸರಕಾರದ ಎರಡನೇ ಅವಧಿಯಲ್ಲಿ ಸರಕಾರದ ನೀತಿ ದಿಕ್ಕು ತಪ್ಪಲು ಜೈರಾಂ ರಮೇಶ್ ಜವಾಬ್ದಾರಿ. ಮತ್ತು ಹಲವು ಬಾರಿ ಸರಕಾರದ ಆಡಳಿತದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗಲು ಸಹ ಅವರೇ ಕಾರಣ ಎಂದು ಮೊಯಿಲಿ ಆರೋಪ ಮಾಡಿದ್ದಾರೆ.

ಸೋನಿಯಾ ಬೇಸ್ತು? ಮೋದಿಗೆ ಉಘೇ ಅಂದ ಮತ್ತೋರ್ವ ಕಾಂಗ್ರೆಸ್ ನಾಯಕಸೋನಿಯಾ ಬೇಸ್ತು? ಮೋದಿಗೆ ಉಘೇ ಅಂದ ಮತ್ತೋರ್ವ ಕಾಂಗ್ರೆಸ್ ನಾಯಕ

ಆಡಳಿತಾರೂಢ ಬಿಜೆಪಿ ಪರವಾಗಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕರಿಗೆ ಪ್ರತಿಕ್ರಿಯೆ ನೀಡುವಂತೆ, ಇದು ದುರದೃಷ್ಟಕರ. ಈ ನಾಯಕರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕು. ಅದರಲ್ಲೂ ಜೈರಾಮ್ ರಮೇಶ್ ಅವರ ಹೇಳಿಕೆ ಬಹಳ 'ಕೆಟ್ಟ ಅಭಿರುಚಿ'ಯದು. ಅವರು ಇಂಥ ಹೇಳಿಕೆ ನೀಡುವ ಮೂಲಕ ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ ಮೊಯಿಲಿ.

Shashi Tharoor, Jairam Rameh Lashes Out By Veerappa Moily

ಯಾವುದೇ ನಾಯಕರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಅಂದರೆ, ನನಗನ್ನಿಸುತ್ತದೆ ಅವರು ಕಾಂಗ್ರೆಸ್ ಪಕ್ಷಕ್ಕಾಗಲೀ ನಾಯಕತ್ವಕ್ಕಾಗಲೀ ಏನೂ ಸೇವೆ ನೀಡುತ್ತಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಶಶಿ ತರೂರ್ ಆಗಾಗ ತಮಗೆ ಬೇಕಾದಂತೆ ಹೇಳಿಕೆ ನೀಡಿ ಮಾಧ್ಯಮಗಳಲ್ಲಿ ಸ್ಥಾನ ಗಿಟ್ಟಿಸಲು ಪ್ರಯತ್ನಿಸುತ್ತಾರೆ. ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಅಂತ ನನಗೆ ಅನಿಸಲ್ಲ. ಅವರು ಗಂಭೀರವಾದ ರಾಜಕಾರಣಿ ಆಗಬೇಕು. ಅದು ನಮ್ಮ ಮನವಿ ಎಂದು ವೀರಪ್ಪ ಮೊಯಿಲಿ ಹೇಳಿದ್ದಾರೆ.

English summary
Congress leader Veerappa Moily blames Shahi Tharoor and Jairam Ramesh for their recent statements.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X