ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಸಾರ ಭಾರತಿ ಹೊಸ ಸಿಇಒ ಶಶಿ ಶೇಖರ್ ವೆಂಪಾಟಿ

|
Google Oneindia Kannada News

ನವದೆಹಲಿ, ಜೂನ್ 3: ಇನ್ಫೋಸಿಸ್ ನ ಮಾಜಿ ಉದ್ಯೋಗಿ ಶಶಿ ಶೇಖರ್ ವೆಂಪಾಟಿ ಪ್ರಸಾರ ಭಾರತಿ ಹೊಸ ಸಿಇಒ ಆಗಿ ಆಯ್ಕೆಯಾಗಿದ್ದಾರೆ. ವೆಂಪಾಟಿ ಅವರು ಪ್ರಸಾರ ಭಾರತಿಯ ಮಂಡಳಿಯಲ್ಲಿ ಅರೆಕಾಲಿಕ ಸದಸ್ಯರಾಗಿದ್ದರು. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ನೇತೃತ್ವದ ಮೂವರು ಸದಸ್ಯರ ಶಿಫಾರಸಿನ ಮೇರೆಗೆ ಸಿಇಒ ಆಗಿ ನೇಮಿಸಲಾಗಿದೆ.

ಐಐಟಿ ಬಾಂಬೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ವೆಂಪಾಟಿ ಅವರನ್ನು ಐದು ವರ್ಷದ ಅವಧಿಗೆ ನೇಮಕ ಮಾಡಲಾಗಿದೆ. ಏಳು ತಿಂಗಳ ಹಿಂದೆ ಈ ಹಿಂದಿನ ಸಿಇಒ ಜವಾಹರ್ ಸಿರ್ಕಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ನಂತರ ವೆಂಪಾಟಿ ಅವರನ್ನು ಆ ಸ್ಥಾನಕ್ಕೆ ನೇಮಕ ಮಾಡಲಾಗಿದೆ.[ಪ್ರಸಾರ ಭಾರತಿಗೆ ಸೂರ್ಯ ಪ್ರಕಾಶ್, ಸಂಭ್ರಮಿಸಿದ ಅರಕಲಗೂಡು]

Shashi Shekar Vempati is Prasar Bharti's new CEO

ಮಾಹಿ ಮತ್ತು ಪ್ರಸಾರ ಸಚಿವಾಲಯದ ಕೆಳಗೆ ಬರುವ ಪ್ರಸಾರ ಭಾರತಿ ಸ್ವಾಯತ್ತ ಸಂಸ್ಥೆ. ರಾಷ್ಟ್ರೀಯ ವಾಹಿನಿ ಆಗಿರುವ ಪ್ರಸಾರ ಭಾರತಿ ಅಡಿಯಲ್ಲಿ ಆಲ್ ಇಂಡಿಯಾ ರೇಡಿಯೋ ಹಾಗೂ ದೂರದರ್ಶನ ಕೂಡ ಬರುತ್ತದೆ. ಇದೀಗ ವೆಂಪಾಟಿ ಅವರನ್ನು ಸಿಇಒ ಆಗಿ ನೇಮಿಸುವ ಮೂಲಕ ಬದಲಾವಣೆಗೆ ಕೈ ಹಾಕಿದಂತಿದೆ. ಪ್ರಧಾನಿ ಮೋದಿ ಅವರಿಗೆ ದೂರದರ್ಶನಕ್ಕೆ ಹೊಸ ರೂಪ ಕೊಡಬೇಕು ಎಂಬ ಬಗ್ಗೆ ದೊಡ್ಡ ಕನಸುಗಳಿವೆ.

English summary
Former Infosys employee Shashi Shekar Vempati has been appointed as the new Chief Executive Officer (CEO) of public broadcaster Prasar Bharati.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X