ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನಂದಾ ಪುಷ್ಕರ್ ಸಾವಿನ ಸಾಕ್ಷ್ಯಾಧಾರ ನಾಶ: ಸುಬ್ರಮಣ್ಯಂ ಸ್ವಾಮಿ ಆರೋಪ

ಸುನಂದಾ ಪುಷ್ಕರ್ ಸಾವಿನ ಬಗ್ಗೆ ಬಿಜೆಪಿ ನಾಯಕ ಸುಬ್ರಮಣ್ಯಂ ಸ್ವಾಮಿ ಹೇಳಿಕೆ. ಮೂರು ವರ್ಷಗಳ ತನಿಖೆ ನಂತರ ಸಾವಿಗೆ ಕಾರಣರಾದವರನ್ನು ಹಿಡಿಯದ ದೆಹಲಿ ಪೊಲೀಸ್ ವಿರುದ್ಧ ವಾಗ್ದಾಳಿ.

|
Google Oneindia Kannada News

ನವದೆಹಲಿ, ಜುಲೈ 22: ಮೂರು ವರ್ಷಗಳ ಹಿಂದೆ ನಡೆದಿದ್ದ ಸುನಂದಾ ಪುಷ್ಕರ್ ಅವರ ನಿಗೂಢ ಸಾವಿನ ತನಿಖೆಯನ್ನು ಸರಿಯಾಗಿ ನಡೆಸಲಾಗಿಲ್ಲ ಎಂದು ಬಿಜೆಪಿ ನಾಯಕ ಸುಬ್ರಮಣ್ಯಂ ಸ್ವಾಮಿ ಆರೋಪಿಸಿದ್ದಾರೆ.

ಸುನಂದಾ ಪುಷ್ಕರ್ ಸಾವು: ದೆಹಲಿ ಪೊಲೀಸರಿಗೆ ಕೋರ್ಟ್ ತರಾಟೆಸುನಂದಾ ಪುಷ್ಕರ್ ಸಾವು: ದೆಹಲಿ ಪೊಲೀಸರಿಗೆ ಕೋರ್ಟ್ ತರಾಟೆ

ಪ್ರಕರಣದ ತನಿಖೆಯನ್ನು ಸೂಕ್ತವಾಗಿ ಮಾಡಿಲ್ಲ. ಸುನಂದಾ ಅವರ ಪತಿ ಶಶಿ ತರೂರ್ ಅವರು ತಮ್ಮ ಪತ್ನಿಯ ಸಾವಿನ ವಿಚಾರದಲ್ಲಿ ತನಿಖಾಧಿಕಾರಿಗಳ ಮುಂದೆ ಸಾಕಷ್ಟು ಸುಳ್ಳು ಹೇಳಿದ್ದಾರೆ. ಅಲ್ಲದೆ, ಪ್ರಕರಣದ ಹಲವಾರು ಸಾಕ್ಷ್ಯಾಧಾರಗಳನ್ನು ನಾಶಪಡಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸುನಂದಾಗೆ ರಷ್ಯನ್ ವಿಷ, ಮೈತುಂಬಾ ಗಾಯ!ಸುನಂದಾಗೆ ರಷ್ಯನ್ ವಿಷ, ಮೈತುಂಬಾ ಗಾಯ!

Shashi lied, evidences tampered in Sunanda death case: Subramanian Swamy

ದೆಹಲಿ ಪೊಲೀಸರ ವಿರುದ್ಧ ಹರಿಹಾಯ್ದ ಅವರು, ಕೊಲೆಗಡುಕ ಯಾರೆಂಬುದು ತಿಳಿದುಬಂದಿಲ್ಲ ಎಂದು ಹೇಳಲು ದೆಹಲಿ ಪೊಲೀಸರಿಗೆ ಮೂರು ವರ್ಷ ಬೇಕಾಯಿತೇ? ಎಂದು ಕಿಡಿಕಾರಿದರಲ್ಲದೆ, ಈ ಪ್ರಕರಣವನ್ನು ಬೇರೊಂದು ತನಿಖಾ ಸಂಸ್ಥೆಯ ಕಡೆಯಿಂದ ಮತ್ತೊಮ್ಮೆ ತನಿಖೆಗೆ ಒಳಪಡಿಸುವುದು ಸರಿ ಎಂದು ತಿಳಿಸಿದ್ದಾರೆ. ಮರು ತನಿಖೆಯನ್ನು ನಡೆಸಲು ಕೇಂದ್ರೀಯ ತನಿಖಾ ದಳ (ಸಿಬಿಐ) ಸೂಕ್ತ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ತರೂರ್ ಪತ್ನಿ ಸುನಂದಾ ಪುಷ್ಕರ್ ಸಾವು: ರಿಪಬ್ಲಿಕ್ ಟಿವಿ ಸಿಡಿಸಿದ ಬಾಂಬ್ ತರೂರ್ ಪತ್ನಿ ಸುನಂದಾ ಪುಷ್ಕರ್ ಸಾವು: ರಿಪಬ್ಲಿಕ್ ಟಿವಿ ಸಿಡಿಸಿದ ಬಾಂಬ್

ಏತನ್ಮಧ್ಯೆ, ಸುನಂದಾ ಅವರು ಸಾವನ್ನಪ್ಪಿದ ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್ ನ 345ನೇ ಕೊಠಡಿಯನ್ನು ತೆರೆಯುವಂತೆ ದೆಹಲಿ ನ್ಯಾಯಾಲಯ, ದೆಹಲಿ ಪೊಲೀಸರಿಗೆ ಜುಲೈ 21ರಂದು ಸೂಚಿಸಿದೆ. 2013ರಲ್ಲಿ ಸುನಂದಾ ಅವರು ಸಾವನ್ನಪ್ಪಿದಾಗಿನಿಂದ ಆ ಕೊಠಡಿಗೆ ಬೀಗ ಮುದ್ರೆ ಜಡಿಯಲಾಗಿತ್ತು. ಆದರೆ, ಮೂರು ವರ್ಷಗಳಾದರೂ, ತನಿಖೆಯೂ ಮುಗಿಯದೇ, ಕೊಠಡಿಯನ್ನೂ ತೆರಯಲು ಅವಕಾಶವಿಲ್ಲದಿರುವುದರಿಂದ ತಮಗೆ ನಷ್ಟವಾಗುತ್ತಿದೆ ಎಂದು ಲೀಲಾ ಪ್ಯಾಲೇಸ್ ಹೋಟೆಲ್ ಸಂಸ್ಥೆಯು ನ್ಯಾಯಾಲಯದ ಕದ ತಟ್ಟಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಆದೇಶ ನೀಡಿದೆ.

Shashi lied, evidences tampered in Sunanda death case: Subramanian Swamy

ಸುನಂದಾ ಸಾವು: ವೈದ್ಯರು ನೀಡಿದ ವರದಿಯಲ್ಲೇನಿದೆ? ಸುನಂದಾ ಸಾವು: ವೈದ್ಯರು ನೀಡಿದ ವರದಿಯಲ್ಲೇನಿದೆ?

ಏನಿದು ಸುನಂದಾ ಪುಷ್ಕರ್ ಸಾವು ಪ್ರಕರಣ?
2013ರ ಜನವರಿ 17ರಂದು ಸುನಂದಾ ಪುಷ್ಕರ್ ಅವರು, ತಾವು ವಾಸಿಸುತ್ತಿದ್ದ ದೆಹಲಿಯ ಚಾಣಕ್ಯಪುರಿಯಲ್ಲಿರುವ ಲೀಲಾ ಪ್ಯಾಲೇಸ್ ಹೋಟೆಲ್ ನ 345ನೇ ಕೊಠಡಿಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ಹಾಗೂ ತಮ್ಮ ಪತಿ ಶಶಿ ತರೂರ್ ಜತೆಗೆ ಬಂಗಲೆಯೊಂದರಲ್ಲಿ ಜೀವಿಸುತ್ತಿದ್ದ ಅವರು, ಬಂಗಲೆ ನವೀಕರಣ ಹಿನ್ನೆಲೆಯಲ್ಲಿ ತಾತ್ಕಾಲಿಕ ವಸತಿಗಾಗಿ ಲೀಲಾ ಪ್ಯಾಲೇಸ್ ಗೆ ಸ್ಥಳಾಂತರಗೊಂಡಿದ್ದರು.

ಅವಳನ್ನು ಬಿಟ್ಟು ಇವಳನ್ನು ಮದುವೆಯಾಗ ಬಯಸಿದ್ದ ಶಶಿಅವಳನ್ನು ಬಿಟ್ಟು ಇವಳನ್ನು ಮದುವೆಯಾಗ ಬಯಸಿದ್ದ ಶಶಿ

ಅವರ ಸಾವಿನ ಪ್ರಕರಣ ಬಹಿರಂಗೊಳ್ಳುತ್ತಿದ್ದಂತೆಯೇ ಎಲ್ಲರ ಅನುಮಾನಗಳು ಅವರ ಪತಿ ಶಶಿ ತರೂರ್ ಮೇಲೆಯೇ ಹರಿದಿತ್ತು. ಏಕೆಂದರೆ, ಶಶಿ ತರೂರ್ ಅವರು ಸುನಂದಾ ಅವರ 3ನೇ ಪತಿ. ಈ ಹಿಂದೆ ಅವರು, ಸಂಜಯ್ ರೈನಾ, ಸುಜಿತ್ ಮೆನನ್ ಎಂಬುವರನ್ನು ಮದುವೆಯಾಗಿದ್ದರು.

ಸುನಂದಾ ಅವರು ಸಾಯುವ ಕೆಲ ದಿನಗಳ ಮೊದಲು ಶಶಿ ತರೂರ್ ಅವರು ಪಾಕಿಸ್ತಾನದ ಪತ್ರಕರ್ತೆಯೊಬ್ಬರೊಂದಿಗೆ ಸ್ನೇಹ ಇದ್ದಿದ್ದರ ಬಗ್ಗೆ ಮಾಧ್ಯಮಗಳಲ್ಲಿ ಪ್ರಸ್ತಾಪವಾಗಿ, ಇದು ಶಶಿ ಹಾಗೂ ಸುನಂದಾ ಅವರ ನಡುವೆ ಮನಸ್ತಾಪಕ್ಕೆ ಕಾರಣವಾಗಿತ್ತೆಂದು ಹೇಳಲಾಗಿದೆ.

English summary
BJP leader Subramanian swamy has alleged that Delhi police has failed investigate the mistery of Sunanda Pushkar death. He also alleged that Sunanda's husband Shashi Tharoor lied in the case and the evidences were tampered. After 3 years of investigation the police came up with no result. This case should be investigated by CBI, he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X