ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫತ್ವಾಗಳಿಗೆ ಕಾನೂನಿನ ಮಾನ್ಯತೆ ಇಲ್ಲ:ಸುಪ್ರೀಂ

By Ashwath
|
Google Oneindia Kannada News

ನವದೆಹಲಿ, ಜು.7: ಮುಸ್ಲಿಂ ಧಾರ್ಮಿಕ ಸಂಘಟನೆಗಳು ಫತ್ವಾ ಹೊರಡಿಸುವುದು ಕಾನೂನು ಬಾಹಿರ. ದಾರುಲ್ ಕಾಜಾ ಅಥವಾ ಮೌಲ್ವಿಗಳು ಹೊರಡಿಸುವ ಫತ್ವಾಗಳಿಗೆ ಯಾವುದೇ ರೀತಿಯ ಕಾನೂನಿನ ಮಾನ್ಯತೆ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಮಹತ್ವದ ತೀರ್ಪು‌ ನೀಡಿದೆ.

ವೈಯಕ್ತಿಕ ಹಿತಾಸಕ್ತಿಗಾಗಿ ಧರ್ಮದ ಮೇಲೆ ನಂಬಿಕೆ ಇರಿಸಿದ ಮುಗ್ದರನ್ನು ಬಲಿಪಶು ಮಾಡಬೇಡಿ. ನಿಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಕಾನೂನಿನಲ್ಲಿ ಮಾನ್ಯತೆ ಇಲ್ಲ ಎಂದು ನ್ಯಾ.ಸಿ.ಕೆ.ಪ್ರಸಾದ್‌ ಪೀಠ ಅಭಿಪ್ರಾಯ ಪಟ್ಟಿದೆ.[ಬಾಡಿಗೆ ಮಗು: ಶಾರುಖ್ ಖಾನ್ ವಿರುದ್ಧ ಫತ್ವಾ]

Supreme Court

ಮುಸ್ಲಿಂ ಧಾರ್ಮಿ‌ಕ ಮುಖಂಡರು ಹೊರಡಿಸುವ ‌ಫತ್ವಾ ಕಾನೂನು ಬಾಹಿರ.ಇದರಿಂದಾಗಿ ಮುಸ್ಲಿಮರ ಧಾರ್ಮಿ‌ಕ ಭಾವನೆ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಇವುಗಳನ್ನು ನಿಷೇಧಿಸಬೇಕು ಎಂದು ದೆಹಲಿ ಮೂಲದ ವಕೀಲ ವಿಶ್ವಲೋಚನ್ ಮದನ್ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.[ಮುಸ್ಲಿಮರಿಗೆ ಸ್ವಾಗತಕಾರಿಣಿ ಹುದ್ದೆ ಬೇಡ: ಫ‌ತ್ವಾ]

ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ದೇಶದ 60 ಜಿಲ್ಲೆಗಳಲ್ಲಿ ದಾರುಲ್ ಕ್ವಾಜಾ(Darul Qaza) ಮತ್ತು ದಾರುಲ್ ಇಫ್ತಾ (Darul-Iftaa) ಸಂಘಟನೆಗಳು ಕಾರ್ಯ‌‌ನಿರ್ವ‌ಹಿಸುತ್ತದೆ. ಅತ್ಯಾಚಾರ ಎಸಗಿದ ಮಾವನನ್ನೇ ಬಲವಂತವಾಗಿ ಪತಿ ಎಂದು ಸ್ವೀಕರಿಸಲು ಮುಸ್ಲಿಂ ಸಂಘಟನೆಗಳು ಯುವತಿಗೆ ಫತ್ವಾ ಹೊರಡಿಸಿವೆ ಎಂದು ವಿಶ್ವಲೋಚನ್ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು.

ಸುಪ್ರೀಂ ತೀರ್ಪಿ‌ಗೆ ಪ್ರತಿಕ್ರಿಯೆ ನೀಡಿದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ" ನ್ಯಾಯಾಂಗದ ವಿರುದ್ಧವಾಗಿ ನಾವು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಸಂವಿಧಾನ ಮುಸ್ಲಿಮರಿಗೆ ಅವರ ವೈಯಕ್ತಿಕ ಕಾನೂನಿನಂತೆ ಕೆಲಸ ಮಾಡುವ ಹಕ್ಕನ್ನು ನೀಡಿದೆ" ಎಂದು ಹೇಳಿದ್ದಾರೆ.

"ಸುಪ್ರೀಂ ‌ಕೋರ್ಟ್‌ನಲ್ಲಿ ಫತ್ವಾ ವಿಚಾರವಾಗಿ ಅರ್ಜಿ ಸಲ್ಲಿಸಿದ್ದೇ ತಪ್ಪು" ಎಂದು ಕುಲ್‌ ಹೈ ಸಂಘಟನೆಯ ಮೌಲಾನ ಮಹಮ್ಮದ್‌ ಸಜ್ದಿ ರಶ್ದಿ ಹೇಳಿದ್ದಾರೆ.

English summary
The Supreme Court on Monday ruled that fatwas have no legal sanction. The apex court said that either Darul Qaza or any mufti cannot issue fatwas and try to enforce against a person who has not approached for religious opinion
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X