ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಹದಿ ವಿರುದ್ಧ 36,986 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜೂ. 01 : ಶಮಿ ವಿಟ್ನೆಸ್ ಟ್ವಿಟ್ಟರ್ ಖಾತೆ ಮೂಲಕ ಉಗ್ರರಿಗೆ ನೆರವು ನೀಡುತ್ತ, ಯುವಕರನ್ನು ತಪ್ಪು ದಾರಿಗೆ ಎಳೆಯುತ್ತಿದ್ದ ಮೆಹದಿ ವಿರುದ್ಧ 36,986 ಪುಟಗಳ ಚಾರ್ಜ್ ಶೀಟ್ ನ್ನು ಪೊಲೀಸರು ಬೆಂಗಳೂರಿನ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.

ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಎಸ್ಐಎಸ್) ಉಗ್ರ ಸಂಘಟನೆಯನ್ನು ಬೆಂಬಲಿಸಿ ಅಮೆರಿಕದ ನಾಗರಿಕರ ರುಂಡ ಕತ್ತರಿಸಿದ ವಿಡಿಯೋಗಳನ್ನು ಟ್ವಿಟ್ಟರಲ್ಲಿ ನಿರಂತರವಾಗಿ ಬಿತ್ತರಿಸಿದ @shamiwitness ಎಂಬ ಟ್ವಿಟ್ಟರ್ ಖಾತೆ ಬಳಸುತ್ತಿದ್ದ ಮೆಹದಿಯನ್ನು ಕಳೆದ ಡಿಸೆಂಬರ್ ನಲ್ಲಿ ಬಂಧನ ಮಾಡಿ ವಿಚಾರಣೆಗೆ ಒಳಪಡಿಸಲಾಗಿತ್ತು.[ಬೆಂಗಳೂರು ಪೊಲೀಸರ ಕೈಗೆ ಮೆಹದಿ ಸಿಕ್ಕಿಬಿದ್ದಿದ್ದು ಹೇಗೆ?]

isis

ಮೆಹದಿ ಉಗ್ರರೊಂದಿಗೆ ಹೊಂದಿದ್ದ ಸಂಪರ್ಕ, ಆತ ವೆಬ್ ತಾಣವನ್ನು ಬಳಕೆ ಮಾಡಿಕೊಳ್ಳಯತ್ತಿದ್ದ ರೀತಿ ಎಲ್ಲವನ್ನು ಚಾರ್ಜ್ ಶೀಟ್ ನಲ್ಲಿ ವಿವರಿಸಲಾಗಿದೆ. ಪಶ್ಚಿಮ ಬಂಗಾಳ ಮೂಲದ ಮೆಹದಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತ ಉಗ್ರರ ಪರ ಪ್ರಚಾರ ನಡೆಸುತ್ತಿದ್ದ. ಈ ಬಗ್ಗೆ ಆಂಗ್ಲ ವಾಹಿನಿಯೊಂದು ವರದಿ ಬಿತ್ತರ ಮಾಡಿದ ನಂತರ ಆತನನ್ನು ಬಂಧನ ಮಾಡಲಾಗಿತ್ತು.

124,000 ಟ್ವೀಟ್ ಗಳ ಪರಾಮರ್ಶೆ
@shammiwitness ಹ್ಯಾಂಡಲ್ ನಿಂದ ಟ್ವಿಟ್ ಆದ 124,000 ಟ್ವಿಟ್ ಗಳ ಪರಾಮರ್ಶೆ ಮಾಡಲಾಗಿದೆ. ಮಹಾರಾಷ್ಟ್ರದ ಯುವಕರ ಮೇಲೆ ಮೆಹದಿ ಟ್ವಿಟ್ಟರ್ ಖಾತೆಯನ್ನು ಬಳಸಿ ಪ್ರಭಾವ ಬೀರಲು ಯತ್ನಿಸಿದ್ದ ಎಂಬ ಸಂಗತಿಯನ್ನು ಬಹಿರಂಗ ಮಾಡಲಾಗಿದೆ.

ಯುವಕರನ್ನು ಐಎಸ್ ಐಎಸ್ ಸಂಘಟನೆಗೆ ಸೇರಿಸಲು ಮೆಹದಿ ಪ್ರಯತ್ನ ಪಟ್ಟಿದ್ದ. ಸಾಮಾಜಿಕ ತಾಣವನ್ನು ವ್ಯವಸ್ಥಿತವಾಗಿ ವಿಧ್ವಂಸಕ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದ ಎಂದು ವಿವರವಾದ ಮಾಹಿತಿ ನೀಡಲಾಗಿದೆ. ಅಲ್ಲದೇ ಇದರೊಂದಿಗೆ @ElSaltador ಎಂಬ ಹ್ಯಾಂಡಲ್ ಸಹ ಬಳಕೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.[ಬೆಂಗಳೂರಿನ 'ಟ್ವಿಟ್ಟರ್' ಉಗ್ರನ ರಹಸ್ಯ ಬಯಲು!]

ಕಾಶ್ಮೀರ ವಿಷಯ
UAPA ಕಾಯ್ದೆಯಡಿ ಮೆಹದಿ ಮೇಲೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ನಿಷೇಧಕ್ಕೆ ಒಳಗಾಗಿರುವ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದರೆ ಈ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ.

ಪಾಕ್ ಆಕ್ರಮಿತ ಕಾಶ್ಮೀರ, ಕಾಶ್ಮೀರದೊಂದಿಗೆ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಬಗ್ಗೆಯೂ ಮೆಹದಿ ಹಲವು ವಿಚಾರಗಳನ್ನು ಹರಿಯಬಿಟ್ಟಿದ್ದು ಭಾರತೀಯ ದಂಡ ಸಂಹಿತೆ 125 ರ ಅನ್ವಯ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಬೆಂಗಳೂರು ಪೊಲೀಸರಿಗೆ ಅತಿ ಕ್ಲಿಷ್ಟಕರ ಚಾರ್ಜ್ ಶೀಟ್
ಬೆಂಗಳೂರು ಪೊಲೀಸರಿಗೆ ಈ ಪ್ರಕರಣದ ತನಿಖೆ ಮತ್ತು ಮಾಹಿತಿ ಕಲೆಹಾಕುವುಕೆ ತಲೆನೋವಾಗಿ ಪರಿಣಮಿಸಿದ್ದು ಸುಳ್ಳಲ್ಲ್. ಆತನ ಲ್ಯಾಪ್ ಟಾಪ್ ನಲ್ಲಿದ್ದ ಆಡಿಯೋ ಮತ್ತು ವಿಡಿಯೋಗಳನ್ನು ಆಧರಿಸಿ ವರದಿ ಸಲ್ಲಿಕೆ ಮಾಡಲಾಗಿದೆ. ಆತ ಮಾಡಿರುವ ಡೌನ್ ಲೋಡ್ ಮತ್ತು ಮೊಬೈಲ್ ಮೆಸೇಜ್ ಗಳನ್ನು ಪರಿಶೀಲಿಸಲಾಗಿದೆ.

ಯುವಕರ ತಲೆಯನ್ನು ಕೆಡಿಸುವ ತಂತ್ರ ಮೆಹದಿಗೆ ಸಿದ್ಧಿಸಿತ್ತು. ತನ್ನ ಸಂದೇಶಗಳ ಮೂಲಕವೇ ಆತ ಯುವಕರನ್ನು ಉಗ್ರ ಸಂಘಟನೆಗಳತ್ತ ಸೆಳೆಯುತ್ತಿದ್ದ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ.

English summary
A chargesheet running into 36,986 pages has been filed against Mehdi Masroor Biswas alias @shammiwitness before a court in Bengaluru on Monday, June 1. The Bengaluru police had a few months back arrested Mehdi Masroor Biswas after it was found that he was running the twitter handle @shammiwitness which was promoting messages of the ISIS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X