• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಯುವರ್ ಆನರ್! ನೀವು ಮಾಡಿದ್ದು ಲೈಂಗಿಕ ದೌರ್ಜನ್ಯವೇ'

By Srinath
|

ಕೋಲ್ಕೊತ್ತಾ, ಡಿ. 4: ತೆಹೆಲ್ಕಾ ಕಾಮಕಾಂಡ ಪಸರಿಸಿದ ಬೆನ್ನಿಗೆ ಮತ್ತಷ್ಟು ಕಾಮಸುಳಿಗಳು ಸುಳಿದಾಡತೊಡಗಿವೆ. ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಅಶೋಕ್ ಕುಮಾರ್ ಗಂಗೂಲಿ ಅವರ ಮೇಲೆಯೇ ಈಗ ಗಂಭೀರ ಆರೋಪ ಕೇಳಿಬಂದಿದೆ.

ಗಂಗೂಲಿ ಗೊಂದಲ: ( ತೆಹಲ್ಕಾ ತರುಣ್ ಮಾಡಿದ್ದು ಅತ್ಯಾಚಾರವೇ: ಬಾಧಿತೆ )

ಆಘಾತಕಾರಿ ಸಂಗತಿಯೆಂದರೆ ಕಳೆದ ವರ್ಷ ದೆಹಲಿಯಲ್ಲಿ ಅರೆವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಬರ್ಬರ ಅತ್ಯಾಚಾರ/ ಹತ್ಯೆ ನಡೆದ ಸಂದರ್ಭದಲ್ಲೇ, ಅದೇ ದಿಲ್ಲಿಯಲ್ಲಿ ಪಂಚತಾರಾ ಹೋಟೆಲೊಂದರಲ್ಲಿ ನ್ಯಾ. ಅಶೋಕ್ ಕುಮಾರ್ ಗಂಗೂಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಜೂನಿಯರ್ ಮಹಿಳಾ ಅಡ್ವೊಕೇಟ್ ಆರೋಪ ಮಾಡಿದ್ದಾರೆ.

ಆದರೆ ಆರೋಪಿ, ಪ್ರಸ್ತುತ ಪಶ್ಚಿಮ ಬಂಗಾಳದ ಮಾನವ ಹಕ್ಕು ಸಮಿತಿ ಅಧ್ಯಕ್ಷರಾಗಿರುವ ನ್ಯಾ. ಅಶೋಕ್ ಕುಮಾರ್ ಗಂಗೂಲಿ ಅವರು ತಾನೇನು ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡಿರುವ ನ್ಯಾಯದೇವತೆ ಸಹ ಯಾವುದು ಸತ್ಯ ಯಾವುದು ಮಿಥ್ಯ ಎಂದರಿಯದೆ ಸಂದಿಗ್ಧ ಗೊಂದಲದಲ್ಲಿರುವಂತಿದೆ.

'ನ್ಯಾ. ಗಂಗೂಲಿ ಈ ರೀತಿ ಮಾಡುವರೆಂದು ತಾನು ಕನಸಿನಲ್ಲಿಯೂ ನಂಬುವುದಿಲ್ಲ' ಎಂದು ಸ್ವತಃ ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಅಲ್ತಮಶ್ ಕಬೀರ್ ಅವರೇ ಹೇಳಿರುವುದು ಪ್ರಕರಣವನ್ನು ಮತ್ತಷ್ಟು ಹಳ್ಳಕ್ಕೆ ತಳ್ಳಿದಂತಾಗಿದೆ. ಆದರೂ ಹಾಲಿ ಮುಖ್ಯ ನ್ಯಾಯಮೂರ್ತಿ ಪಿ ಸದಾಶಿವಂ ಅವರು ತ್ರಿಸದಸ್ಯ ನ್ಯಾಯಮೂರ್ತಿಗಳ ಸಮಿತಿಯೊಂದನ್ನು ಪ್ರಕರಣದ ವಿಚಾರಣೆಗೆ ನೇಮಿಸಿದ್ದಾರೆ.

ಅದೇನೇ ಇರಲಿ, ಘಟನೆ ನಡೆದ ಬಗ್ಗೆ ಸಂತ್ರಸ್ತ ಯುವತಿಯು ಸಮಿತಿಯ ಎದುರು ಹೀಗೆ ವಿವರ ನೀಡಿದ್ದಾರೆ- ಅವರ ಮಾತುಗಳಲ್ಲೇ ಕೇಳಿ. (ತೇಜಪಾಲ್ ಲೈಂಗಿಕ ಪರೀಕ್ಷೆ ಫೇಲಾದ್ರೆ ದುರಂತವೇ ಸರಿ)

ಅದು ನಡೆದಿದ್ದು ದಿಲ್ಲಿಯಲ್ಲಿ ನಿರ್ಭಯಾ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ. ಆ ಕರಾಳ ದಿನದಂದು ಜಸ್ಟೀಸ್ ಗಂಗೂಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು. ಬೇಡ ಬೇಡವೆನ್ನುತ್ತಿದ್ದರೂ ನನ್ನ ಮೇಲೆ ಮುಗಿಬಿದ್ದರು. ಇದಕ್ಕೆ ನನ್ನ ಬಳಿ ಸ್ಪಷ್ಟ ಸಾಕ್ಷ್ಯಗಳಿವೆ. ನಾನೇನೂ ಸುಳ್ಳೂ ಹೇಳುತ್ತಿಲ್ಲ. ( ತೆಹಲ್ಕಾ ಸಂಪಾದಕನ ಲೈಂಗಿಕ ಕಿರುಕುಳ ವೃತ್ತಾಂತ ಇಲ್ಲಿದೆ )

ಅದು ದೆಹಲಿಯ ಮಧ್ಯ ಭಾಗದಲ್ಲಿರುವ ಪಂಚತಾರಾ ಹೋಟೆಲ್. ಕೋಲ್ಕೊತ್ತಾದಲ್ಲಿ ಡಿ. 9ರಂದು 2 ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ಗಳ ಮಧ್ಯೆ ಆಟ ನಡೆಯುತ್ತಿದ್ದಾಗ ನಡೆದಿದ್ದ ಹಿಂಸಾಚಾರದ ಬಗ್ಗೆ ವಿಚಾರಣೆ ನಡೆಸಲು ನೇಮಕಗೊಂಡಿದ್ದ ಏಕಸದಸ್ಯ ಸಮಿತಿಯ ಮುಖ್ಯಸ್ಥರಾಗಿ ಜಸ್ಟೀಸ್ ಗಂಗೂಲಿ ಅವರು ವಿಚಾರಣೆಗೆ ಬಂದಿದ್ದರು. ಅವರಿಗೆ ಸಹಾಯಕಿಯಾಗಿ ನಾನು ನೇಮಕಗೊಂಡಿದ್ದೆ.

ವಿಚಾರಣೆಗೆ ಬಂದಿದ್ದ AIFF ಅಧಿಕಾರಿಗಳು ವಿಚಾರಣೆಯ ನಂತರ ಹೋಟೆಲಿಂದ ಹೊರ ನಡೆದಿದ್ದರು. ಇತ್ತ ಕೋಣೆಯಲ್ಲಿ ನಾನು ಮತ್ತು ಜಸ್ಟೀಸ್ ಗಂಗೂಲಿ - ಇಬ್ಬರೇ ಉಳಿದುಕೊಂಡೆವು. ಆಗ ಜಸ್ಟೀಸ್ ಗಂಗೂಲಿ ನನಗೆ ವೈನ್ ಕುಡಿಯುವಂತೆ ಒತ್ತಾಯಿಸಿದರು. ಆ ವೇಳೆಗೆ ಅವರೂ ನಾಲ್ಕಾರು ಪೆಗ್ ಏರಿಸಿದ್ದರು. ಹ್ಯಾಗೂ ಈಗ ಕ್ರಿಸ್ಮಸ್ ಸಂದರ್ಭ ಅಲ್ವಾ. ಅದಕ್ಕೆ ವೈನ್ ಕುಡಿಯುವುದು ಸಾಮಾನ್ಯ. ನೀನು ಕುಡಿ ಎಂದು ಮತ್ತೆ ಮತ್ತೆ ಸೂಚಿಸಿದರು.

ಜತೆಗೆ ಅವರು ನನ್ನ ಮೈಮೇಲೆ ಬೀಳಲು ಮುಂದಾದರು. ಅದೆಲ್ಲಾ ಬೇಡ ಎಂದು ನಾನು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದೆ. ಕೊನೆಗೆ ಹೋಟೆಲ್ ಕೊಠಡಿಯಿಂದ ಹೊರಬಿದ್ದೆ. ಆದರೆ ಅವಯ್ಯಾ ನನ್ನನ್ನು ಫಾಲೋ ಮಾಡಿದರು. ಹೋಟೆಲ್ ಲಾಬಿವರೆಗೂ ಬಂದು ತಪ್ಪಾಯ್ತು ಕ್ಷಮಿಸು ಎಂದು ಬೇಡಿಕೊಂಡರು ಎಂಬುದರೊಂದಿಗೆ ಈ ಕಾಮವೃತ್ತಾಂತ ಕೊನೆಗೊಳ್ಳುತ್ತದೆ. ಆದರೆ ಮುಂದೇನಾಗುತ್ತದೆ? ಯುವತಿ ಹೇಳುತ್ತಿರುವುದು ಸುಳ್ಳೋ/ ಜಸ್ಟೀಸ್ ಗಂಗೂಲಿ ಅವರು ತಪ್ಪು ಮಾಡಿದ್ದಾರೋ ಕಾಲವೇ ಹೇಳಬೇಕು.

ಘಟನೆ ನಡೆದ ಸುಮಾರು 1 ವರ್ಷದ ನಂತರ ಬಾಧಿತ ಯುವತಿ ನವೆಂಬರ್ 6ರಂದು ತನ್ನ blogನಲ್ಲಿ ತನಗೊದಗಿದ ದುರವಸ್ಥೆಯನ್ನು ತೋಡಿಕೊಂಡಿದ್ದಳು. ನನ್ನ ಅಜ್ಜನ ವಯಸ್ಸಿನ ರಿಟೈರ್ಡ್ ಜಡ್ಜ್ ಹೀಗೆಲ್ಲಾ ಮಾಡಿದ್ದ ಎಂದು ಹೇಳಿದ್ದರು. ಮುಂದೆ, blogನಲ್ಲಿ ಬರಹ Journal of Indian Law and Societyನಲ್ಲಿಯೂ ಕಾಣಿಸಿಕೊಂಡಿತು. ಅದಾದನಂತರ Legally India ವೆಬ್ ಸೈಟಿಗೆ ಸಂದರ್ಶನ ನೀಡಿದ ಸಂತ್ರಸ್ತ ಯುವ ವಕೀಲೆ ತನ್ನ ಆರೋಪದಿಂದ ದೂರ ಸರಿಯದೆ ಘಟನೆ ನಡೆದಿದ್ದು ಸತ್ಯ ಎಂದಿದ್ದರು.

ಆಗ ಎಚ್ಚೆತ್ತ ಸುಪ್ರೀಂಕೋರ್ಟ್ Chief Justice Sathasivam ಅವರು ತಡಮಾಡದೆ ತ್ರಿಸದಸ್ಯ ಸಮಿತಿ (Justices R M Lodha, H L Dattu and Ranjana Prakash Desai) ರಚಿಸಿ, ವಿಚಾರಣೆ ನಡೆಯಲಿ ಎಂದು ಆದೇಶಿಸಿತು. ಎಡರೂ ಕಡೆಯ ವಾದ- ವಿಚಾರಣೆ ಮುಕ್ತಾಯವಾಗಿದ್ದು, ಸಮಿತಿ ಸಹ ತನ್ನ ವರದಿಯನ್ನು ಸಲ್ಲಿಸಿದೆ.

English summary
The law graduate, whose sensational sexual harassment accusation against Justice AK Ganguly was inquired into by a three-judge fact-finding committee, had told the inquiry panel that the retired Supreme Court judge made advances towards her despite her clear disapproval, and asserted that she had evidence to back up her charge. Giving details of the day's events, the law graduate alleged before the three-judge committee, set up by Chief Justice P Sathasivam, that she was repeatedly requested by Justice Ganguly to come to a five-star hotel in central Delhi to help him as a research assistant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X