ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಲಾತ್ಕಾರ ಯತ್ನ: ಬೆಹರೇನ್ ರಾಯಭಾರಿ ವಶಕ್ಕೆ

By Srinath
|
Google Oneindia Kannada News

Sexual Harassment Bahrain envoy in Mumbai booked for molestation
ಮುಂಬೈ, ಡಿ.26: ಮಹಿಳೆಯೊಬ್ಬರ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ ಬೆಹರೇನ್ ರಾಜತಾಂತ್ರಿಕನನ್ನು ಸ್ಥಳೀಯ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ರಾಜತಾಂತ್ರಿಕರನ್ನು ಬಂಧಿಸುವಂತಿಲ್ಲ ಎಂಬ ಕಾರಣಕ್ಕೆ ಆತನನ್ನು ಪೊಲೀಸರು ಇನ್ನೂ ಬಂಧಿಸಿಲ್ಲ.

ಪೊಲೀಸರಿಗೆ ನೀಡಿರುವ ದೂರಿನನ್ವಯ ಮುಂಬೈನಲ್ಲಿರುವ ಬೆಹರೇನಿನ ಮೊಹಮದ್ ಅಬ್ದುಲ್ ಅಜೀಜ್ ಅಲ್ ಖಾಜಾ ಎಂಬ ರಾಯಭಾರಿ 49 ವರ್ಷದ ಮಹಿಳೆ ಮೈಮುಟ್ಟಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎನ್ನಲಾಗಿದೆ.

ಸರಕಾರದಿಂದ ಉನ್ನತಾಧಿಕಾರಿಗಳ ಆದೇಶಕ್ಕೆ ಕಾಯುತ್ತಿರುವ ಮುಂಬೈ ಪೊಲೀಸರು, ಸರಕಾರದ ಮುಂದಿನ ಸೂಚನೆಯಂತೆ ಕ್ರಮಕೈಗೊಳ್ಳಲು ನಿರ್ಧರಿಸಿದ್ದಾರೆ. (ದೇವಯಾನಿ ವಿವಸ್ತ್ರಗೊಳಿಸಿ ತಪಾಸಣೆ, ಭಾರತ ಗರಂ)

Malabar Hill police station ಅವರು counsel general ಬೆಹರೇನಿನ ಮೊಹಮದ್ ಅಬ್ದುಲ್ ಅಜೀಜ್ ಅಲ್ ಖಾಜಾ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಬಾಧಿತ ಮಹಿಳೆಯು ದಕ್ಷಿಣ ಮುಂಬೈನಲ್ಲಿರುವ ಹೌಸಿಂಗ್ ಸೊಸೈಟಿಯ ಮ್ಯಾನೇಜರ್ ಆಗಿದ್ದಾರೆ. ಕಳೆದ 5 ವರ್ಷಗಳಿಂದ ರಾಯಭಾರಿ ಅಬ್ದುಲ್ ಅಜೀಜ್ ಅವರು ಇಲ್ಲಿನ ಮನೆಯಲ್ಲಿ ವಾಸವಾಗಿದ್ದಾರೆ. ಡಿಸೆಂಬರ್ 9ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

IPC sections 354 (molestation), 509 (word, gesture or act intended to insult the modesty of a woman) ಮತ್ತು 504 (intentional insult with intent to provoke breach of peace) ಅನ್ವಯ ಅಬ್ದುಲ್ ಅಜೀಜ್ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ಡಿ. 9ರಂದು ಹೌಸಿಂಗ್ ಸೊಸೈಟಿಯ ಎಲಿವೇಟರ್ ಕೆಟ್ಟುನಿಂತುಹೋದಾಗ ಅಬ್ದುಲ್ ಅಜೀಜ್ ಉದ್ವಿಗ್ನಗೊಂಡಿದ್ದಾರೆ. ಆ ಕ್ಷಣ ಸ್ಥಳದಲ್ಲಿದ್ದ ಮಹಿಳಾ ಮ್ಯಾನೇಜರ್ ಅವರ ವಿರುದ್ಧ ಮುಗಿಬಿದ್ದು, ಆಕೆಯನ್ನು ಮನಬಂದಂತೆ ತರಾಟೆಗೆ ತೆಗೆದುಕೊಂಡಿದ್ದಾರೆ. ಆಕೆಯನ್ನು ಹಿಡಿದೆಳೆದಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

English summary
Sexual Harassment Bahrain envoy in Mumbai booked for molestation. The case has been registered with Malabar Hill police station against counsel general of Baharain Mohammed Abdulaziz Al Khaja for allegedly molesting and verbally abusing on December 9 the manager of the south Mumbai society.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X