ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಬಾರಿ ನೆತ್ತಿ ಸುಡಲು ಕಾದಿದೆ ರಣಬಿಸಿಲು, ತಪ್ಪಿಸಿಕೊಳ್ಳಲು ಆಗೋದೇ ಇಲ್ಲ...

|
Google Oneindia Kannada News

ಈಗಾಗಲೇ ದೇಶದಲ್ಲಿ ಬಿಸಿಲ ಧಗೆ ಆರಂಭವಾಗಿದೆ. ಬೇಸಿಗೆ ಆರಂಭದಲ್ಲೇ ಬಿಸಿ ಗಾಳಿಗೆ ಜನರು ತತ್ತರಿಸುತ್ತಿದ್ದಾರೆ. ಈ ನಡುವೆ ಅಧ್ಯಯನವೊಂದು, ಭಾರತ ಒಳಗೊಂಡಂತೆ ದಕ್ಷಿಣ ಏಷ್ಯಾ ದೇಶಗಳಲ್ಲಿ ಬಿಸಿಲು ಮೂರು ಪಟ್ಟು ಹೆಚ್ಚಾಗುವುದೆಂದು ಹೇಳಿದೆ. ಈ ಬಾರಿ ರಣಬಿಸಿಲು ಉಂಟಾಗಲಿದ್ದು, ಜನರನ್ನು ಹೈರಾಣುಗೊಳಿಸಲಿದೆ. ಜಾಗತಿಕ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್ ಇದ್ದು, ಭಾರೀ ಬಿಸಿಲು ನೆತ್ತಿ ಸುಡಲಿದೆ ಎಂದು ತಿಳಿಸಿದೆ.

ಅಮೆರಿಕದ ಓಕ್ ರಿಡ್ಜ್‌ ನ್ಯಾಷನಲ್ ಲ್ಯಾಬೊರೇಟರಿ ವಿಜ್ಞಾನಿಗಳು ಈ ಅಧ್ಯಯನ ನಡೆಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಕರಾವಳಿ ಪ್ರದೇಶಗಳಲ್ಲಿ ವಿಪರೀತ ಶಾಖ ಉಂಟಾಗಲಿದೆ. ಪ್ರಮುಖ ನಗರಗಳಾದ ಕೋಲ್ಕತ್ತಾ, ಮುಂಬೈ ಹಾಗೂ ಹೈದರಾಬಾದ್‌ಗಳಲ್ಲಿ ಸೆಖೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಸೂಚನೆ ನೀಡಿದೆ. ಮುಂದೆ ಓದಿ...

 ದೆಹಲಿ: ಮುಂದಿನ 2 ದಿನಗಳಲ್ಲಿ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಲಿದೆ ಉಷ್ಣಾಂಶ, ಮಳೆ ಸಾಧ್ಯತೆ ದೆಹಲಿ: ಮುಂದಿನ 2 ದಿನಗಳಲ್ಲಿ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಲಿದೆ ಉಷ್ಣಾಂಶ, ಮಳೆ ಸಾಧ್ಯತೆ

 ಮುಂದಿನ ದಿನಗಳು ಕಠಿಣವಾಗಿರಲಿವೆ

ಮುಂದಿನ ದಿನಗಳು ಕಠಿಣವಾಗಿರಲಿವೆ

ಜಿಯೋಫಿಸಿಕಲ್ ರಿಸರ್ಚ್ ಲೆಟರ್ಸ್ ನಿಯತಕಾಲಿಕೆಯಲ್ಲಿನ ಈ ಸಂಶೋಧನೆಯಲ್ಲಿ, ಈಚಿನ ವರ್ಷಗಳಿಗೆ ಹೋಲಿಸಿದರೆ, ತಾಪಮಾನ ಮೂರು ಪಟ್ಟು ಹೆಚ್ಚಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಏಷ್ಯಾ ದೇಶಗಳಲ್ಲಿ ಮುಂದಿನ ದಿನಗಳು ಕಠಿಣವಾಗಿರಲಿವೆ. ಆದರೆ ಜಾಗತಿಕ ತಾಪಮಾನ ನಿಯಂತ್ರಣದಿಂದ ಇದನ್ನು ಸ್ವಲ್ಪಮಟ್ಟಿಗಾದರೂ ತಪ್ಪಿಸಬಹುದು. ಇಂದೇ ಈ ವಿಷಯವನ್ನು ಆದ್ಯತೆಯಾಗಿ ತೆಗೆದುಕೊಳ್ಳದೇ ಬೇರೆ ಆಯ್ಕೆಯೇ ಇಲ್ಲ ಎಂದು ಓಕ್ ರಿಡ್ಜ್‌ ನ್ಯಾಷನಲ್ ಲ್ಯಾಬೊರೇಟರಿಯಲ್ಲಿನ ಸಹ ಲೇಖಕ ಮೊಯಟಾಸಿಂಗ್ ಆಶ್ಫಕ್ ತಿಳಿಸಿದ್ದಾರೆ.

 2040ಕ್ಕೆ 1.5 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ

2040ಕ್ಕೆ 1.5 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ

ಮಾನವನು ಶಾಖವನ್ನು ತಡೆದುಕೊಳ್ಳುವ ಮಿತಿ ಮೀರಲಿದೆ. ಕೈಗಾರಿಕಾ ಕ್ರಾಂತಿ ಪ್ರಾರಂಭವಾದಂದಿಲೂ ಭೂಮಿಯ ತಾಪಮಾನ 1ಡಿಗ್ರಿ ಸೆಲ್ಸಿಯಸ್ ಆಗಿದೆ. ಇದು 2040ರ ವೇಳೆಗೆ 1.5 ಡಿಗ್ರಿ ಸೆಲ್ಸಿಯಸ್ ತಲುಪಬಹುದು ಎನ್ನಲಾಗಿದೆ.

ಬೇಸಿಗೆಯಲ್ಲಿ ನೀರು ಆಹಾರವನ್ನಿಟ್ಟು ಪ್ರಾಣಿ-ಪಕ್ಷಿಗಳ ರಕ್ಷಿಸೋಣಬೇಸಿಗೆಯಲ್ಲಿ ನೀರು ಆಹಾರವನ್ನಿಟ್ಟು ಪ್ರಾಣಿ-ಪಕ್ಷಿಗಳ ರಕ್ಷಿಸೋಣ

 ಕೃಷಿ ಆಧಾರಿತ ದೇಶಗಳಿಗೆ ಕಷ್ಟ

ಕೃಷಿ ಆಧಾರಿತ ದೇಶಗಳಿಗೆ ಕಷ್ಟ

ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದಕ್ಷಿಣ ಏಷ್ಯಾ ದೇಶಗಳಲ್ಲಿ ಈಗಾಗಲೇ ಬಿಸಿಗಾಳಿ ಎದುರಾಗಿದೆ. ಈ ದೇಶಗಳಲ್ಲಿನ ಸುಮಾರು 60% ಜನರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಹಾಗೂ ಹೊರಗೆ ಇರುವುದು ಅನಿವಾರ್ಯವಾದ್ದರಿಂದ ಈ ಉರಿ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ವಿಜ್ಞಾನಿಗಗಳು ಹೇಳಿದ್ದಾರೆ.

 ಜನರ ಮುಂದಿದೆ ಸವಾಲು

ಜನರ ಮುಂದಿದೆ ಸವಾಲು

ಈ ಭಾಗಗಳ ಜನರಿಗೆ ಶಾಖ ಅಭ್ಯಾಸವಾಗಿದ್ದರೂ, ಮೂರು ಪಟ್ಟು ಹೆಚ್ಚಾಗುವ ಶಾಖವು ಜನರಿಗೆ ಬೇರೆಯದೇ ಸವಾಲನ್ನು ಒಡ್ಡುತ್ತದೆ. ಇಂಥ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಜನರು ಹೆಣಗಾಡಬೇಕಾಗುತ್ತದೆ. ಮಾರಕ ಬಿಸಿ ಗಾಳಿಗೆ ಹೊಂದಿಕೊಳ್ಳಲೇಬೇಕಾದ ಅನಿವಾರ್ಯತೆಯೂ ಎದುರಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.

English summary
A new study has predicted that potentially severe heat waves will likely become more common place in South Asian countries, including India,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X