ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷದ 7ನೇ ಸೈಕ್ಲೋನ್ ಬುಲ್ ಬುಲ್: ಎಷ್ಟು ಅಪಾಯಕಾರಿ, ಎಲ್ಲೆಲ್ಲಿ ಮಳೆ?

|
Google Oneindia Kannada News

Recommended Video

Bull Bull is coming take care yourself.

ಬೆಂಗಳೂರು, ನವೆಂಬರ್ 6: ವರ್ಷದ 7ನೇ ಚಂಡಮಾರುತ 'ಬುಲ್ ಬುಲ್' ಇದು ಹೆಚ್ಚಿನ ಅಪಾಯ ತಂದೊಡ್ಡದೇ ಇದ್ದರೂ ಕೆಲವೆಡೆ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಭಾರತದ ಪೂರ್ವ ಭಾಗದಲ್ಲಿ ಈ ಚಂಡಮಾರುತ ಕಾಣಿಸಿಕೊಳ್ಳಲಿದೆ. ವಾತಾವರಣ ಬದಲಾವಣೆಯಾದಂತೆ ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಚಂಡಮಾರುತಗಳು ಪುಟಿದೇಳಲಿವೆ. ಇಂದಿನಿಂದಲೇ ಚಂಡಮಾರುತ ತನ್ನ ಪರಿಣಾಮವನ್ನು ಗುಜರಾತ್ ಸೇರಿದಂತೆ ಹಲವೆಡೆ ತೋರಿಸಲಿದೆ.

ಬಂಗಾಳಕೊಲ್ಲಿಯಲ್ಲಿ ಬುಲ್ ಬುಲ್ ಸೈಕ್ಲೋನ್, ಎಲ್ಲೆಲ್ಲಿ ಮಳೆಯಾಗುತ್ತೆ?ಬಂಗಾಳಕೊಲ್ಲಿಯಲ್ಲಿ ಬುಲ್ ಬುಲ್ ಸೈಕ್ಲೋನ್, ಎಲ್ಲೆಲ್ಲಿ ಮಳೆಯಾಗುತ್ತೆ?

ಬುಲ್ ಬುಲ್ ನಿಂದಾಗಿ ಕರ್ನಾಟಕದಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆಯಿದ್ದರೂ ಹಿಂದುಮಹಾಸಾಗರದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ನವೆಂಬರ್ 8ರ ಬಳಿಕ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಪ್ರಭಾವಿ ಸೈಕ್ಲೋನ್‌ಗಳು

ಪ್ರಭಾವಿ ಸೈಕ್ಲೋನ್‌ಗಳು

ಅರಬ್ಬಿ ಸಮುದ್ರದಲ್ಲಿ ಉದ್ಭವವಾದ ಕ್ಯಾರ್ ಹಾಗೂ ಮಹಾ ಚಂಡಮಾರುತದಿಂದ ಸಾಕಷ್ಟು ಅಪಾಯವಿದೆ. ಆದರೆ ಬುಲ್ ಬುಲ್ ಚಂಡ ಮಾರುತ ಅತಿ ಹೆಚ್ಚು ಅನಾಹುತವನ್ನು ಸೃಷ್ಟಿಸಲಾರದು ಎಂದು ಹೇಳಲಾಗಿದೆ. ಆದರೆ ಗಾಳಿಯ ಒತ್ತಡ ಎಷ್ಟಿರುತ್ತದೆ ಎನ್ನುವುದರ ಮೇಲೆ ನಿರ್ಧರಿತವಾಗಿರುತ್ತದೆ.

ಎರಡು ಚಂಡಮಾರುತಗಳು ಒಟ್ಟಾಗಿ ಬರುವುದಿಲ್ಲ

ಎರಡು ಚಂಡಮಾರುತಗಳು ಒಟ್ಟಾಗಿ ಬರುವುದಿಲ್ಲ

ಸಾಮಾನ್ಯವಾಗಿ ಒಂದು ಚಂಡಮಾರುತ ಹಾಗೂ ಮತ್ತೊಂದು ಚಂಡಮಾರುತಗಳು ಒಟ್ಟಾಗಿ ಬರುವುದಿಲ್ಲ ಆದರೆ ಈ ಬಾರಿ ಕ್ಯಾರ್ ಹಾಗೂ ಮಹಾ ಚಂಡಮಾರುತಗಳು ಒಟ್ಟಾಗಿ ಬಂದಿದ್ದು, ಕರ್ನಾಟದ ಕರಾವಳಿ ಹಾಗೂ ಕೇರಳ ಇನ್ನಿತರೆ ಭಾಗಗಳಲ್ಲಿ ಮಳೆಯಾಗಿದೆ.

ಈ ವರ್ಷ ಈಗಾಗಲೇ 6 ಸೈಕ್ಲೋನ್‌ಗಳು ಬಂದಿವೆ

ಈ ವರ್ಷ ಈಗಾಗಲೇ 6 ಸೈಕ್ಲೋನ್‌ಗಳು ಬಂದಿವೆ

ಈ ವರ್ಷ ಈಗಾಗಲೇ ಆರು ಚಂಡಮಾರುತಗಳು ಹಲವು ರಾಜ್ಯಗಳ ಮೇಲೆ ತಮ್ಮ ಪ್ರಭಾವವನ್ನು ಬೀರಿವೆ. ನಮಗೆ ತಿಳಿದಿರುವಂತೆ ಗಜ, ಕ್ಯಾರ್, ಮಹಾ ಈಗ ಬುಲ್ ಬುಲ್ ಚಂಡ ಮಾರುತ. ಆದರೆ ಯಾವುದೇ ಪ್ರಭಾವವನ್ನು ಬೀರದೆ ಇರುವ ಚಂಡಮಾರುತಗಳು ಕೂಡ ಸಂಭವಿಸಿದ್ದವು ಎನ್ನುವುದನ್ನು ಗಮನಿಸಬೇಕಾಗಿದೆ.

2018ರಲ್ಲಿ ಕೂಡ 6 ಚಂಡಮಾರುತಗಳು ನಿರ್ಮಾಣ

2018ರಲ್ಲಿ ಕೂಡ 6 ಚಂಡಮಾರುತಗಳು ನಿರ್ಮಾಣ

2018ರಲ್ಲಿ ಆರು ಚಂಡಮಾರುತಗಳು ರೂಪುಗೊಂಡಿದ್ದವು.ಈ ಬಾರಿ ನವೆಂಬರ್‌ನಲ್ಲೇ ಆ ಸಂಖ್ಯೆಯನ್ನು ನಾವು ತಲುಪಲಿದ್ದೇವೆ. ಇನ್ನು ಎರಡು ತಿಂಗಳು ಬಾಕಿ ಇರುವಾಗಲೇ ನಾವು ಆ ಸಂಖ್ಯೆಯನ್ನು ತಲುಪುತ್ತಿದ್ದೇವೆ. ಕ್ಯಾರ್ ಸೈಕ್ಲೋನ್ ಬರುವುದಕ್ಕೂ ಮುನ್ನ ಸೂಪರ್ ಸೈಕ್ಲೋನ್ ನಿರ್ಮಾಣವಾಗಿತ್ತು. 2007ರಲ್ಲಿ 'ಗೋನು' ಸೈಕ್ಲೋನ್ ತೀವ್ರ ದೇಶದ ಮೇಲೆ ತೀವ್ರ ಪರಿಣಾಮ ಬೀರಿತ್ತು.

ಬುಲ್ ಬುಲ್ ಚಂಡ ಮಾರುತ ಎಷ್ಟು ಅಪಾಯ

ಬುಲ್ ಬುಲ್ ಚಂಡ ಮಾರುತ ಎಷ್ಟು ಅಪಾಯ

ಬಂಗಾಳಕೊಲ್ಲಿಯಲ್ಲಿ ಬುಲ್ ಬುಲ್ ಚಂಡಮಾರುತ ಆರಂಭವಾಗಲಿದ್ದು, ದೇಶಕ್ಕೆ ಅಪ್ಪಳಿಸಲಿದ್ದು, ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ.

ಬಂಗಾಳಕೊಲ್ಲಿಯಲ್ಲಿ ಈ ಮೊದಲು ಪಡುಕ್ ಮತ್ತು ಫ್ಯಾನಿ ಚಂಡಮಾರುತಗಳು ಕಾಣಿಸಿಕೊಂಡಿದ್ದವು. ನವೆಂಬರ್ 8 ರಂದು ಬುಲ್ ಬುಲ್ ಚಂಡಮಾರುತದ ರುದ್ರನರ್ತನ ಆರಂಭವಾಗಲಿದ್ದು, ಮುಖ್ಯವಾಗಿ ಒಡಿಶಾಕ್ಕೆ ಈ ಚಂಡಮಾರುತ ಅಪ್ಪಳಿಸಲಿದೆ ಎನ್ನಲಾಗಿದೆ. ಜೊತೆಗೆ ಆಂಧ್ರಪ್ರದೇಶದ ಕರಾವಳಿ ಮತ್ತು ಪಶ್ಚಿಮ ಬಂಗಾಳದಲ್ಲೂ ಮಳೆಯಾಗುವ ಸಾಧ್ಯತೆ ಇದೆ. ಸೈಕ್ಲೋನ್ ಬಾಂಗ್ಲಾದೇಶವನ್ನೂ ವ್ಯಾಪಿಸಲಿದೆ.

English summary
The Seventh Cyclone is already brewing in the Bay of Bengal and will shortly take its form as a Cyclonic Storm and will be termed as Bulbul.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X