ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶದಿಂದ ಬಂದವರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಮೇ 26 : ವಂದೇ ಭಾರತ್ ಮಿಷನ್ ಅಡಿ ಸಾವಿರಾರು ಭಾರತೀಯರು ವಿದೇಶದಿಂದ ದೇಶಕ್ಕೆ ವಾಪಸ್ ಆಗುತ್ತಿದ್ದಾರೆ. ಭಾರತಕ್ಕೆ ವಾಪಸ್ ಆದವರ ಕ್ವಾರಂಟೈನ್ ವಿಚಾರದಲ್ಲಿ ಕೇಂದ್ರ ಸರ್ಕಾರ ಹೊಸ ಆದೇಶ ಹೊರಡಿಸಿದೆ.

ಮಂಗಳವಾರ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಈ ಕುರಿತು ಪತ್ರ ಬರೆದಿದ್ದಾರೆ. ವಿದೇಶದಿಂದ ಬಂದವರು ತಮ್ಮ ಖರ್ಚಿನಲ್ಲಿಯೇ ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ನಲ್ಲಿರಲು ವ್ಯವಸ್ಥೆ ಮಾಡಲಾಗಿದೆ.

ವಂದೇ ಭಾರತ್ ಮಿಷನ್; ಬೆಂಗಳೂರಿಗೆ ಬಂದ 17 ಮತ್ತು 18ನೇ ವಿಮಾನವಂದೇ ಭಾರತ್ ಮಿಷನ್; ಬೆಂಗಳೂರಿಗೆ ಬಂದ 17 ಮತ್ತು 18ನೇ ವಿಮಾನ

'ವಿದೇಶದಿಂದ ಬಂದವರು ಹೋಟೆಲ್ ಕ್ವಾರಂಟೈನ್‌ಗೆ 14 ದಿನದ ಹಣವನ್ನು ಮುಂಗಡವಾಗಿ ಪಾವತಿ ಮಾಡಿದ್ದಾರೆ. ಈಗ ಅವರು 7 ದಿನಕ್ಕೆ ವಾಪಸ್ ಹೋಗುವುದರಿಂದ ಉಳಿದ ಏಳು ದಿನದ ಹಣವನ್ನು ವಾಪಸ್ ನೀಡುವಂತೆ ಹೋಟೆಲ್‌ಗಳಿಗೆ ಸೂಚಿಸಿ' ಎಂದು ಅಜಯ್ ಭಲ್ಲಾ ಪತ್ರದಲ್ಲಿ ಸೂಚನೆ ನೀಡಿದ್ದಾರೆ.

Seven Days Quarantine Amount To Be Refunded

ಹೋಟೆಲ್‌ಗಳು ಹಣವನ್ನು ತಕ್ಷಣ ವಾಪಸ್ ನೀಡುವಂತೆ ಕ್ರಮ ಕೈಗೊಳ್ಳಿ ಎಂದು ರಾಜ್ಯಗಳಿಗೆ ಪತ್ರದಲ್ಲಿ ಸೂಚನೆ ನೀಡಲಾಗಿದೆ. ವಂದೇ ಭಾರತ್ ಮಿಷನ್ ಆರಂಭವಾದಾಗ ವಿದೇಶದಿಂದ ಬಂದವರಿಗೆ 14 ದಿನದ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿತ್ತು.

ದೆಹಲಿಯಿಂದ ಏಕಾಂಗಿಯಾಗಿ ಬೆಂಗಳೂರಿಗೆ ಬಂದು ತಾಯಿಯ ಮಡಿಲು ಸೇರಿದ 5 ವರ್ಷದ ಪೋರ!ದೆಹಲಿಯಿಂದ ಏಕಾಂಗಿಯಾಗಿ ಬೆಂಗಳೂರಿಗೆ ಬಂದು ತಾಯಿಯ ಮಡಿಲು ಸೇರಿದ 5 ವರ್ಷದ ಪೋರ!

ಲಾಕ್ ಡೌನ್‌ ಪರಿಣಾಮ ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ವಂದೇ ಭಾರತ್ ಮಿಷನ್ ಮೂಲಕ ವಾಪಸ್ ಕರೆತರಲಾಗುತ್ತಿದೆ. ವಿವಿಧ ದೇಶಗಳಿಂದ ಭಾರತೀಯರು ವಿವಿಧ ನಗರಗಳಿಗೆ ವಾಪಸ್ ಆಗುತ್ತಿದ್ದಾರೆ. ಹೀಗೆ ವಾಪಸ್ ಆದವರು ತಮ್ಮ ಖರ್ಚಿನಲ್ಲಿಯೇ ಹೋಟೆಲ್‌ನಲ್ಲಿ ಸರ್ಕಾರಿ ಕ್ವಾರಂಟೈನ್‌ನಲ್ಲಿರಬೇಕಿತ್ತು.

English summary
In a letter to states union home secretary said that Indians who were quarantined in hotels after their return from abroad were made to pay advance for 14 days. Since they can now leave after 7 days amount of rest 7 days is to be refunded.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X