ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದೆಷ್ಟು ಮುಖಭಂಗ ಪಾಕ್ ಅನುಭವಿಸುತ್ತೋ, ವಿಶ್ವಸಂಸ್ಥೆಯಲ್ಲಿ ಮತ್ತೊಂದು

|
Google Oneindia Kannada News

ನವದೆಹಲಿ, ಆ 23: ಭಾರತವನ್ನು ಕೆಣಕಲು ಹೋಗಿ, ಒಂದರ ಮೇಲೊಂದು ಅವಮಾನವನ್ನು ಎದುರಿಸುತ್ತಿರುವ ಪಾಕಿಸ್ತಾನಕ್ಕೆ, ವಿಶ್ವಸಂಸ್ಥೆಯಲ್ಲಿ ಮತ್ತೊಂದು ಹಿನ್ನಡೆಯಾಗಿದೆ.

ಭಾರತೀಯ ಮಿಲಿಟರಿ ಪಡೆಗಳನ್ನು ಹುರಿದುಂಬಿಸುವ ಟ್ವೀಟ್‌ ಗಾಗಿ ಪಾಕಿಸ್ತಾನದಿಂದ, ತೀವ್ರ ಟೀಕೆಗೆ ಗುರಿಯಾಗಿರುವ, ಯುನಿಸೆಫ್ ಸೌಹಾರ್ದಯುತ ರಾಯಭಾರಿ ಪ್ರಿಯಾಂಕಾ ಚೋಪ್ರಾ, "ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಮಾತನಾಡುವ ಹಕ್ಕನ್ನು ಹೊಂದಿದ್ದಾರೆ" ಎಂದು ಯುನಿಸೆಫ್ ಅಧಿಕಾರಿಗಳು ಹೇಳಿದ್ದಾರೆ.

Recommended Video

ಬಾಂಬ್ ಬೆದರಿಕೆ ಹಾಕಿದ ಪಾಕ್ ಮಾಜಿ ಕ್ರಿಕೆಟಿಗ |Javed Miandad | Oneindia Kannada

ಇದ್ದಕ್ಕಿದ್ದಂತೆ ಪಾಕಿಸ್ತಾನದ ಕೋಪ ಪ್ರಿಯಾಂಕಾ ಚೋಪ್ರಾ ಮೇಲೆ ತಿರುಗಿದ್ದೇಕೆ?ಇದ್ದಕ್ಕಿದ್ದಂತೆ ಪಾಕಿಸ್ತಾನದ ಕೋಪ ಪ್ರಿಯಾಂಕಾ ಚೋಪ್ರಾ ಮೇಲೆ ತಿರುಗಿದ್ದೇಕೆ?

"ಯುನಿಸೆಫ್ ರಾಯಭಾರಿಗಳು ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಮಾತನಾಡ ಬೇಕಾದರೆ, ಅವರು, ಮಾತನಾಡುವ ಹಕ್ಕನ್ನು ಹೊಂದಿರುತ್ತಾರೆ"ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿದರು.

Setback To Pakistan Again On Priyanka Chopra Row, She Retains Right To Speak

"ರಾಯಭಾರಿಗಳು ವೈಯಕ್ತಿಕ ದೃಷ್ಟಿಕೋನದಿಂದ ಮಾತನಾಡಿದಾಗ ಅದು ಯುನಿಸೆಫ್‌ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ" ಎಂದು ಯುನಿಸೆಫ್ ಅಧಿಕಾರಿಗಳು ಹೇಳುವ ಮೂಲಕ, ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ.

"ನಾನು ದೇಶಪ್ರೇಮಿ" ಎಂದು ಪ್ರಿಯಾಂಕಾ ಚೋಪ್ರಾ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನಿ ಮಹಿಳೆಗೆ ನೀಡಿದ ಉತ್ತರಕ್ಕೆ ಪ್ರತಿಯಾಗಿ, ಅವರನ್ನು ಯುನಿಸೆಫ್ ರಾಯಭಾರಿ ಸ್ಥಾನದಿಂದ ಕೆಳಗಿಳಿಸುವಂತೆ ಪಾಕಿಸ್ತಾನ, ವಿಶ್ವಸಂಸ್ಥೆಗೆ ಪತ್ರ ಬರೆದಿತ್ತು.

ಯುನಿಸೆಫ್ ನ (United Nations International Children's Emergency Fund) ಗುಡ್ ವಿಲ್ ರಾಯಭಾರಿಯಾಗಿರುವ ಪ್ರಿಯಾಂಕಾ ಚೋಪ್ರಾ ಅವರನ್ನು ಆ ಸ್ಥಾನದಿಂದ ಕಿತ್ತುಹಾಕಬೇಕೆಂದು ಪಾಕಿಸ್ತಾನದ ನಟಿ ಅರ್ಮೀನಾ ಖಾನ್ ಮತ್ತು ಆಕೆಯ ಪ್ರಿಯಕರ ಫೆಸಾಲ್ ಖಾನ್ ಯುನಿಸೆಫ್ ಗೆ ಪತ್ರ ಬರೆದಿದ್ದರು.

English summary
United Nation responds to Priyanka Chopra's Pakistan row: She retains right to speak in personal capacity. A clear setback to Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X