ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ವರ್ ಸಮಸ್ಯೆ: ಪ್ಯಾನ್-ಆಧಾರ್ ಕಾರ್ಡ್ ಲಿಂಕ್ ದಿನಾಂಕ ವಿಸ್ತರಿಸಲು ಪಟ್ಟು

|
Google Oneindia Kannada News

ನವದೆಹಲಿ, ಮಾರ್ಚ್ 31: ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್(Permanent Account Number) ಲಿಂಕ್ ಮಾಡುವುದಕ್ಕೆ ಕೊನೆಯ ದಿನ ಆಗಿರುವ ಮಾರ್ಚ್ 31ರಂದೇ ಆದಾಯ ತೆರಿಗೆ ಇಲಾಖೆಯ ವೆಬ್​ಸೈಟ್​ ಕೈ ಕೊಡುತ್ತಿದೆ.

ಆದಾಯ ತೆರಿಗೆ ಇಲಾಖೆಯ ವೆಬ್​ಸೈಟ್​ಗೆ ತೆರಳಿ ಆಧಾರ್ ಮತ್ತು ಪ್ಯಾನ್ ಕಾರ್ಡ್ ಜೋಡಣೆಗೆ ಮುಂದಾದ ಸಂದರ್ಭದಲ್ಲಿ ತಾಂತ್ರಿಕ ದೋಷ ಕಂಡು ಬರುತ್ತಿದೆ. ಈ ಹಿನ್ನೆಲೆ ಪ್ಯಾನ್ ಮತ್ತು ಆಧಾರ್ ಕಾರ್ಡ್ ಜೋಡಣೆ ದಿನಾಂಕವನ್ನು ವಿಸ್ತರಿಸುವಂತೆ ಆಗ್ರಹಿಸಲಾಗುತ್ತಿದೆ.

ಮಾರ್ಚ್31ರಂದು ಪ್ಯಾನ್- ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ 1,000 ದಂಡ!ಮಾರ್ಚ್31ರಂದು ಪ್ಯಾನ್- ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ 1,000 ದಂಡ!

ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯ ವೆಬ್​ಸೈಟ್​ನಲ್ಲೇ ಈ ರೀತಿ ತಾಂತ್ರಿಕ ದೋಷ ಕಂಡು ಬರುತ್ತಿದೆ. ಇದರಿಂದಾಗಿ ಹಲವರು ಆಧಾರ್ ಮತ್ತು ಪ್ಯಾನ್ ಕಾರ್ಡ್ ಜೋಡಣೆ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಕೆಲವರಿಗೆ ವೆಬ್​ಸೈಟ್​ ತೆರೆದುಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಆನ್‌ಲೈನ್‌ನಲ್ಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಲಾಗದ ಹಿನ್ನೆಲೆ ಕೆಲವರು ಆದಾಯ ತೆರಿಗೆ ಇಲಾಖೆಯ ವೆಬ್​ಸೈಟ್​ ನಿರ್ವಹಣೆ ಬಗ್ಗೆ ಕಿಡಿ ಕಾರಿದ್ದಾರೆ.

ಆದಾಯ ತೆರಿಗೆ ಇಲಾಖೆಯ ವೆಬ್​ಸೈಟ್​ ಸ್ಥಿತಿ

ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಮಾರ್ಚ್ 31 ಕೊನೆಯ ದಿನವಾಗಿದೆ. ಬುಧವಾರ ಆನ್‌ಲೈನ್‌ನಲ್ಲಿ ಜೋಡಣೆಯ ಪ್ರಕ್ರಿಯೆ ಕೆಲಸ ಮಾಡುತ್ತಿಲ್ಲ. ಸರ್ಕಾರದ ಅಧಿಕೃತ ಜಾಲತಾಣದಲ್ಲೇ ಇಂಥ ಸಮಸ್ಯೆಯಿದೆ. ಈ ತೊಂದರೆಯನ್ನು ಸಾಧ್ಯವಾದಷ್ಟು ಬೇಗ ಬಗೆಹರಿಸಿ ಮತ್ತು ಈ ದಿನಾಂಕವನ್ನು ವಿಸ್ತರಿಸಿ ಎಂದು ಕಾರ್ತಿಕ್ ಸತ್ಯನಾರಾಯಣ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಸರ್ಕಾರದ ವೆಬ್​ಸೈಟ್​ ಸ್ಥಿತಿಯೇ ಹೀಗಾದರೆ ಹೇಗೆ?

ಸರ್ಕಾರಿ ತಾಣಗಳಲ್ಲಿ ಅಗ್ಗದ ಮತ್ತು ಕಡಿಮೆ ಸಾಮರ್ಥ್ಯದ ಸರ್ವರ್‌ಗಳನ್ನು ಹೇಗೆ ಬಳಸಲಾಗುತ್ತದೆ ಎಂದು ನಾನು ಆಶ್ಚರ್ಯ ಪಡುತ್ತೇನೆ. ಸರ್ವರ್‌ಗಳನ್ನು ನಿರ್ವಹಿಸಲು ಅವರಿಗೆ ಹಣವಿಲ್ಲ. ಆದರೆ ಕೆಲವೇ ಕುರ್ಚಿಗಳ ಕೊರತೆಯಿಂದಾಗಿ ಹೊಸ ಸಂಸತ್ತನ್ನು ನಿರ್ಮಿಸಲು ತುಂಬಾ ಹಣವಿದೆ. ಮತ್ತು ಡಿಜಿಟಲ್ ಇಂಡಿಯಾದ ಜಾಹೀರಾತಿಗಾಗಿ ಖರ್ಚು ಮಾಡಲು ಸಾಕಷ್ಟು ಹಣ ಎಂದು ಮೋಹಿತ್ ಕೇಸರಿ ಎಂಬುವವರು ಕಿಡಿ ಕಾರಿದ್ದಾರೆ.

ವಿದ್ಯಾರ್ಥಿ ಆಗಿರುವ ನಾನು ಏನು ಮಾಡಬೇಕು ಎಂಬ ಪ್ರಶ್ನೆ

ಭಾರತದ ತೆರಿಗೆ ಇಲಾಖೆಯವರೇ ಈ ವೆಬ್​ಸೈಟ್​ ಕೆಲಸ ಮಾಡುತ್ತಿಲ್ಲ. ಇಂದು ಅಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕಾಗಿದೆ ಎಂದು ನನಗೆ ತಿಳಿದಿದೆ. ಈ ಮೊದಲು ನನಗೆ ಅದರ ಬಗ್ಗೆ ತಿಳಿದಿರಲಿಲ್ಲ. ವಿದ್ಯಾರ್ಥಿಯಾಗಿರುವ ನಾನು ಪ್ರಸ್ತುತ ನಾನು ಆದಾಯ ತೆರಿಗೆ ಪಾವತಿಸುವವನಲ್ಲ. ಹಾಗಾಗಿ ನಾನು ಏನು ಮಾಡಬೇಕು? ಎಂದು ಸುಮಿತ್ ಎಂಬುವವರು ಪ್ರಶ್ನೆ ಮಾಡಿದ್ದಾರೆ.

ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿದೆ ಮಾಡುವುದೇನು?

ನನ್ನ ತಾಯಂದಿರ ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು ನಾನು ಪ್ರಯತ್ನಿಸುತ್ತೆನು. ಆದರೆ ಲಿಂಕ್ ತೆರೆಯುತ್ತಿಲ್ಲ. ಈ ಬಗ್ಗೆ ಉಲ್ಲೇಖಿಸುವುದಕ್ಕಾಗಿ ಸ್ಕ್ರೀನ್‌ಶಾಟ್ ಲಗತ್ತಿಸಲಾಗಿದೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕೆಂದು ನನಗೆ ತಿಳಿಸಿ ಎಂದು ರಾಹುಲ್ ಪಾಟೀಲ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಪ್ಯಾನ್ ಕಾರ್ಡ್ ಅಮಾನ್ಯೀಕರಣಗೊಳಿಸುವ ಭೀತಿ

ಪ್ಯಾನ್ ಕಾರ್ಡ್ ಅಮಾನ್ಯೀಕರಣಗೊಳಿಸುವ ಭೀತಿ

ಪ್ಯಾನ್ ಕಾರ್ಡ್ ಜೊತೆ ಆಧಾರ್ ಜೋಡಣೆ ಮಾಡದಿದ್ದಲ್ಲಿ ಪ್ಯಾನ್ ಸಂಖ್ಯೆ ಅಮಾನ್ಯಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ, ಆಧಾರ್ ಕಾರ್ಡ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ದಲ್ಲಿ ಹಣಕಾಸು ಕಾಯ್ದೆ 2021ರ ಅಡಿಯಲ್ಲಿ 1000 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ. ಇದರ ಜೊತೆಗೆ ಆಧಾರ್ ಕಾರ್ಡ್ ಜೊತೆ ಲಿಂಕ್ ಆಗದಿರುವ ಪ್ಯಾನ್ ಕಾರ್ಡ್ ಅನ್ನು ನಿಷ್ಕ್ರೀಯ ಎಂದು ಪರಿಗಣಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

English summary
Server Problem In IT Website; People Demanding For Extension Of Pan Card And Aadhaar Card Link Date.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X