ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆರಂ ಮುಖ್ಯಸ್ಥ ಅದಾರ್ ಪೂನಾವಾಲಾಗೆ ಪ್ರಭಾವಿಗಳಿಂದ ಬೆದರಿಕೆ ಕರೆ

|
Google Oneindia Kannada News

ನವದೆಹಲಿ, ಮೇ 02: ಕೊರೊನಾ ಲಸಿಕೆ ತಕ್ಷಣವೇ ಪೂರೈಸುವಂತೆ ಪ್ರಭಾವಿಗಳು ಸೆಂ ಇನ್‌ಸ್ಟಿಟ್ಯೂಟ್ ಮುಖ್ಯಸ್ಥ ಅದಾರ್ ಪೂನಾವಾಲಾಗೆ ಬೆದರಿಕೆ ಕರೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಅವರು ಇದೀಗ ಲಂಡನ್‌ನಲ್ಲಿದ್ದು, ಇಂಗ್ಲೆಂಡ್‌ನ ಮಾಧ್ಯಮ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ವಿವರಿಸಿದ್ದಾರೆ.ಮುಖ್ಯಮಂತ್ರಿಗಳು, ಉದ್ಯಮಿಗಳು ಸೇರಿ ಭಾರತದ ಪ್ರಭಾವಿ ವ್ಯಕ್ತಿಗಳು ಬೆದರಿಕೆ ಕರೆಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಭಾರತಕ್ಕೆ ಮೊದಲ ಹಂತದಲ್ಲಿ ರಷ್ಯಾದಿಂದ 1.50 ಲಕ್ಷ ಸ್ಪುಟ್ನಿಕ್-ವಿ ಲಸಿಕೆ ಭಾರತಕ್ಕೆ ಮೊದಲ ಹಂತದಲ್ಲಿ ರಷ್ಯಾದಿಂದ 1.50 ಲಕ್ಷ ಸ್ಪುಟ್ನಿಕ್-ವಿ ಲಸಿಕೆ

ಲಸಿಕೆ ಒದಗಿಸದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಫೋನ್‌ನಲ್ಲಿ ಬೆದರಿಕೆ ಹಾಕಲಾಗುತ್ತಿದೆ, ಆವಾಚ್ಯ ಶಬ್ದಗಳನ್ನು ಬಳಸದಿದ್ದರೂ ಅದೇ ಅರ್ಥ ಬರುವ ರೀತಿಯಲ್ಲಿ ಪದಗಳನ್ನು ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Serums Adar Poonawalla Moves To London, Cites Threatening Phone Calls From Powerful People

ಹೀಗಾಗಿ ಎಲ್ಲಾ ಜವಾಬ್ದಾರಿ ನನ್ನ ಮೇಲೆ ಬಿದ್ದಿದೆ, ಆದರೆ ಎಲ್ಲವನ್ನೂ ನಾನೊಬ್ಬನೇ ಮಾಡಲು ಸಾಧ್ಯವಿಲ್ಲ, ಮುಂದಿನ ದಿನಗಳಲ್ಲಿ ಮಹತ್ವದ ಘೋಷಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ನಾನು ಪ್ರಭಾವಿಗಳ ಮಾತು ಕೇಳದಿದ್ದರೆ ಅವರು ಇನ್ನೇನು ಮಾಡುತ್ತಾರೋ ಎನ್ನುವ ಭಯ ಎದುರಾಗಿದೆ, ಒಂದೊಮ್ಮೆ ಬೇಡಿಕೆ ಈಡೇರದಿದ್ದರೆ ಕೆಲಸ ಮಾಡಲು ಬಿಡುವುದು ಅನುಮಾನ, ಹೀಗಾಗಿ ಇಂಗ್ಲೆಂಡ್‌ನಲ್ಲಿ ಸೆರಂ ಇನ್‌ಸ್ಟಿಟ್ಯೂಟ್ ತೆರೆಯುವ ಸುಳಿವು ನೀಡಿದ್ದಾರೆ.

ಸೆರಂ ಇನ್‌ಸ್ಟಿಟ್ಯೂಟ್ ಮುಖ್ಯಸ್ಥ ಅದಾರ್ ಪೂನಾವಾಲಾ ಅವರು ವೈ ಕೆಟಗರಿಯ ಭದ್ರತೆ ಪಡೆಯಲಿದ್ದಾರೆ ಎಂದು ಹೇಳಲಾಗಿತ್ತು. ಭದ್ರತಾ ಕೆಟಗರಿಯ ಒಂದಿಬ್ಬರು ಕಮಾಂಡೊಗಳು ಸೇರಿದಂತೆ ಪೊಲೀಸರನ್ನು ಒಳಗೊಂಡಿದ್ದು, ಮೇ ಒಂದರಿಂದ ಲಸಿಕಾ ಅಭಿಯಾನದ ಮೂರನೇ ಹಂತ ಶುರುವಾಗುವ ಮೊದಲೇ ಭದ್ರತೆ ಒದಗಿಸುವ ನಿರ್ಣಯ ತೆಗೆದುಕೊಳ್ಳಲಾಗಿತ್ತು.

ಮೇ 1ರಿಂದ 18 ರಿಂದ 44 ವರ್ಷದೊಳಗಿನವರಿಗೂ ಲಸಿಕೆ ನೀಡುವ ಅಭಿಯಾನ ದೇಶಾದ್ಯಂತ ಶುರುವಾಗಿದೆ.

English summary
Serum Insitute of India (SII) CEO Adar Poonawalla has moved to London because of threatening phone calls from country's "most powerful" people for instant supplies of COVID-19 vaccine Covishield.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X