ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದೇ ತಿಂಗಳಲ್ಲಿ 920 ಮಕ್ಕಳ ಮೇಲೆ ಕೋವೊವ್ಯಾಕ್ಸ್ ಲಸಿಕೆ ಪ್ರಯೋಗ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ಮುಂಬೈ, ಆಗಸ್ಟ್‌ 04: ಕೋವೊವ್ಯಾಕ್ಸ್‌ ಕೊರೊನಾ ಲಸಿಕೆಯ ಪ್ರಯೋಗವನ್ನು ಮಕ್ಕಳ ಮೇಲೆ ಸೆರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಈ ತಿಂಗಳಲ್ಲಿ ಆರಂಭಿಸಲು ಮುಂದಾಗಿದೆ.

ಒಟ್ಟು 920 ಮಕ್ಕಳ ಮೇಲೆ ಲಸಿಕೆ ಪ್ರಯೋಗ ನಡೆಯುತ್ತಿದ್ದು, 2 ರಿಂದ 17 ವರ್ಷದ ಮಕ್ಕಳು ಈ ಪ್ರಯೋಗದಲ್ಲಿ ಭಾಗಿಯಾಗಲಿದ್ದಾರೆ. ಈ ವಯೋಮಾನದವರನ್ನೇ ಎರಡು ಗುಂಪುಗಳಾಗಿ ವಿಭಜಿಸಿ ಹತ್ತು ಕಡೆಗಳಲ್ಲಿ ಪ್ರಯೋಗ ನಡೆಸಲಾಗುತ್ತಿದೆ. ಪ್ರಯೋಗಕ್ಕಾಗಿ 2 ರಿಂದ 11 ವರ್ಷ ಹಾಗೂ 12 ರಿಂದ 17 ವರ್ಷದ ಮಕ್ಕಳ ಗುಂಪುಗಳನ್ನು ಮಾಡಲಾಗಿದೆ.

ಸಿಹಿಸುದ್ದಿ: ಮಕ್ಕಳಿಗೆ ಕೊರೊನಾವೈರಸ್ ತಗುಲಿದರೆ 6 ದಿನದಲ್ಲೇ ಗುಣಮುಖ!ಸಿಹಿಸುದ್ದಿ: ಮಕ್ಕಳಿಗೆ ಕೊರೊನಾವೈರಸ್ ತಗುಲಿದರೆ 6 ದಿನದಲ್ಲೇ ಗುಣಮುಖ!

ಭಾರತ್ ಬಯೋಟೆಕ್ (ಕೋವ್ಯಾಕ್ಸಿನ್) ಹಾಗೂ ಝೈಡಸ್ ಕ್ಯಾಡಿಲಾ (ಝೈಕೋವಿಡ್) ಈಗಾಗಲೇ ಮಕ್ಕಳ ಮೇಲೆ ಪ್ರಯೋಗವನ್ನು ಆರಂಭಿಸಿವೆ.

Serum Institute To Start Covovax Trials On 920 Children in August

"ಬಿಸ್‌ನೆಸ್ ಸ್ಟ್ಯಾಂಡರ್ಡ್" ವರದಿ ಮಾಡಿರುವಂತೆ, ಸೋಂಕಿನ ವಿರುದ್ಧ ಕೋವಾವ್ಯಾಕ್ಸ್ 90% ದಕ್ಷತೆ ಹೊಂದಿದೆ.

2-17 ವರ್ಷ ವಯಸ್ಸಿನವರ ಮೇಲೆ ಕೋವೊವ್ಯಾಕ್ಸ್‌ ಪ್ರಯೋಗ ನಡೆಸಲು ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಕೆಲವು ಷರತ್ತಿನ ಮೇಲೆ ಅನುಮತಿ ನೀಡಲು ಕೇಂದ್ರ ಔಷಧಾಲಯ ಪ್ರಾಧಿಕಾರದ ತಜ್ಞರ ತಂಡ ಜುಲೈ 27ರಂದು ಶಿಫಾರಸು ಮಾಡಿತ್ತು. ಈ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಕೇಂದ್ರ ಔಷಧಾಲಯ ಪ್ರಾಧಿಕಾರದ ವಿಷಯ ತಜ್ಞರು ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ ಸಂಬಂಧ ಸಲ್ಲಿಸಿದ್ದ ಅರ್ಜಿಯನ್ನು ಪುನರ್ ಪರಾಮರ್ಶೆ ನಡೆಸಿ 2 ಹಾಗೂ 3ನೇ ಹಂತದ ಪರೀಕ್ಷೆ ನಡೆಸಲು ಶಿಫಾರಸು ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಮಕ್ಕಳಲ್ಲಿ ಕ್ಲಿನಿಕಲ್ ಪ್ರಯೋಗವನ್ನು ಪರಿಗಣಿಸಲು ಕಂಪನಿಯು ವಯಸ್ಕರಲ್ಲಿ ನಡೆಯುತ್ತಿರುವ ಕ್ಲಿನಿಕಲ್ ಪ್ರಯೋಗದ ಕೋವೊವ್ಯಾಕ್ಸ್‌ ಸುರಕ್ಷತೆ ಹಾಗೂ ಲಸಿಕೆ ಪರಿಣಾಮದ ಸಂಪೂರ್ಣ ವರದಿಯನ್ನು ಸಲ್ಲಿಸಬೇಕು ಎಂದು ಸಂಸ್ಥೆಗೆ ತಿಳಿಸಲಾಗಿತ್ತು. ತಜ್ಞರ ಸಮಿತಿಯ ಈ ಶಿಫಾರಸುಗಳನ್ನು ಡಿಸಿಜಿಐ ಅನುಮೋದಿಸಿತ್ತು.

ಅಮೆರಿಕ ಮೂಲದ ಲಸಿಕೆ ತಯಾರಕ ನೋವಾವ್ಯಾಕ್ಸ್‌ ಇಂಕ್, ಕಡಿಮೆ, ಮಧ್ಯಮ ಆದಾಯದ ದೇಶಗಳಲ್ಲಿ ಹಾಗೂ ಭಾರತದಲ್ಲಿ NVX-CoV2373 ಅಭಿವೃದ್ಧಿ ಹಾಗೂ ವಾಣಿಜ್ಯೀಕರಣಕ್ಕಾಗಿ ಸೆರಂ ಇನ್‌ಸ್ಟಿಟ್ಯೂಟ್‌ ಜೊತೆ ಪರವಾನಗಿ ಒಪ್ಪಂದ ಮಾಡಿಕೊಂಡಿತ್ತು.ಅಮೆರಿಕದ ಲಸಿಕಾ ಅಭಿವೃದ್ಧಿ ಸಂಸ್ಥೆ ನೋವಾವ್ಯಾಕ್ಸ್ ಸಹಯೋಗದೊಂದಿಗೆ "ಕೋವೊವ್ಯಾಕ್ಸ್‌" ಅಭಿವೃದ್ಧಿಯಲ್ಲಿ ತೊಡಗಲು ಸೆರಂ ಒಪ್ಪಂದ ಮಾಡಿಕೊಂಡಿತ್ತು. ಕೋವೊವ್ಯಾಕ್ಸ್ ಕ್ಲಿನಿಕಲ್ ಪ್ರಯೋಗಗಳು ಭಾರತದಲ್ಲಿ ಮಾರ್ಚ್‌ನಲ್ಲಿ ಪ್ರಾರಂಭವಾಗಿದ್ದು, ಸೆಪ್ಟೆಂಬರ್ ವೇಳೆಗೆ ವಯಸ್ಕರಿಗೆ ಈ ಲಸಿಕೆಯನ್ನು ಬಿಡುಗಡೆ ಮಾಡಲು ಸೆರಂ ಸಂಸ್ಥೆ ಯೋಜನೆ ರೂಪಿಸಿದೆ.

ಅಮೆರಿಕದ ನೋವಾವ್ಯಾಕ್ಸ್‌ ಲಸಿಕೆ ಕೊರೊನಾ ಸೋಂಕಿನ ವಿರುದ್ಧ 95.6% ಪರಿಣಾಮಕಾರಿಯಾಗಿದ್ದು, ಬ್ರಿಟನ್ ಕೊರೊನಾ ರೂಪಾಂತರ ಸೋಂಕಿನ ವಿರುದ್ಧ 85.6% ಪರಿಣಾಮಕಾರಿ ಎಂದು ಸಂಸ್ಥೆ ಹೇಳಿಕೊಂಡಿತ್ತು.

ನೋವಾವ್ಯಾಕ್ಸ್ ಜೊತೆ ಕೋವಿಡ್ 19 ಲಸಿಕೆಯ ಅಭಿವೃದ್ಧಿ ಕಾರ್ಯ ಉತ್ತಮ ಫಲ ಕೊಡುವ ನಿರೀಕ್ಷೆಯಿದೆ. ಭಾರತದಲ್ಲಿ ಈ ಲಸಿಕೆ ಪ್ರಯೋಗಕ್ಕೆ ಈಗಾಗಲೇ ಅನುಮತಿ ಕೋರಲಾಗಿದೆ ಎಂದು ಸೆರಂ ಇನ್‌ಸ್ಟಿಟ್ಯೂಟ್ ಸಿಇಒ ಅದಾರ್ ಪೂನಾವಾಲಾ ಮಾಹಿತಿ ನೀಡಿದ್ದರು. ಮಕ್ಕಳಿಗೆ ಕೊರೊನಾ ಲಸಿಕೆಯನ್ನು ಅತಿ ಶೀಘ್ರದಲ್ಲೇ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಈಚೆಗೆ ತಿಳಿಸಿದ್ದರು.

ಈ ಮಧ್ಯೆ, ಮಕ್ಕಳಲ್ಲಿನ ಕೊರೊನಾ ಸೋಂಕಿನ ಕುರಿತು ಸಮಾಧಾನಕರ ಸಂಗತಿಯೊಂದನ್ನು ಅಧ್ಯಯನವೊಂದು ತಿಳಿಸಿದೆ. ಸೋಂಕು ತಗುಲಿದ ಮಕ್ಕಳು ಅಲ್ಪಾವಧಿಯಲ್ಲೇ ಗುಣಮುಖರಾಗುತ್ತಾರೆ ಎಂಬುದಾಗಿ ವರದಿ ಹೇಳಿದೆ. 'ಕೊವಿಡ್-19 ಸೋಂಕಿನ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಂಡ ಮಗು ಕೇವಲ ಆರು ದಿನಗಳಲ್ಲಿ ಗುಣಮುಖವಾಗುತ್ತದೆ. ಅದರಿಂದ ಆಚೆಗೆ ಕೊರೊನಾವೈರಸ್ ಸೋಂಕಿನ ಲಕ್ಷಣಗಳನ್ನು ಅನುಭವಿಸುತ್ತಿದ್ದ ಮಗು ಗರಿಷ್ಠ 4 ವಾರಗಳಲ್ಲಿ ಚೇತರಿಕೆ ಕಾಣುತ್ತದೆ,' ಎಂದು ಯುನೈಟೆಡ್ ಕಿಂಗ್ ಡಮ್ ನಲ್ಲಿ ನಡೆಸಿರುವ ಅಧ್ಯಯನದ ಕುರಿತು 'ದಿ ಲ್ಯಾನ್ಸೆಟ್ ಚೈಲ್ಡ್ ಆಂಡ್ ಅಡೋಲ್ಸೆಂಟ್ ಹೆಲ್ತ್ ಪ್ರಕಟಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

English summary
Serum institute to start covovax trials on 920 children in august
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X