ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕ್ಸ್‌ಫರ್ಡ್ ಅಸ್ಟ್ರಾಜೆನೆಕಾ ಲಸಿಕೆ ಪ್ರತಿ ಡೋಸ್‌ಗೆ 225 ರೂ

|
Google Oneindia Kannada News

ಬೆಂಗಳೂರು, ಆಗಸ್ಟ್ 08: ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಜೊತೆ ಒಪ್ಪಂದ ಮಾಡಿಕೊಂಡಿದೆ.
ಭಾರತಕ್ಕೆ 100 ಮಿಲಿಯನ್ ಅಂದರೆ 10 ಕೋಟಿ ಲಸಿಕೆಯನ್ನು ಒದಗಿಸಲಿದೆ.

Recommended Video

Kerala Rains : ವರುಣನ ಅಬ್ಬರಕೆ ಬೆಚ್ಚಿಬಿದ್ದ ದೇವರ ನಾಡು | Oneindia Kannada

ಗವಿ ವಾಕ್ಸಿನ್ ಫೌಂಡೇಶನ್ ಜೊತೆ 100 ಮಿಲಿಯನ್ ಲಸಿಕೆ 2021ರೊಳಗೆ ನೀಡುವಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಒಂದು ಕಾಲದ ಕುದುರೆ ಫಾರ್ಮ್‌, ಈಗ ವಿಶ್ವಕ್ಕೆ ಕೊರೊನಾ ಲಸಿಕೆ ಕೇಂದ್ರ: ರೇಸ್‌ನಲ್ಲಿ ಗೆಲ್ತಾರ ಪೂನವಾಲಾಒಂದು ಕಾಲದ ಕುದುರೆ ಫಾರ್ಮ್‌, ಈಗ ವಿಶ್ವಕ್ಕೆ ಕೊರೊನಾ ಲಸಿಕೆ ಕೇಂದ್ರ: ರೇಸ್‌ನಲ್ಲಿ ಗೆಲ್ತಾರ ಪೂನವಾಲಾ

ಅಸ್ಟ್ರಾಜೆನೆಕಾ, ನೋವಾವ್ಯಾಕ್ಸ್ ಪ್ರತಿ ಲಸಿಕೆಗೆ 225 ರೂ ಇರಲಿದೆ. ಇದನ್ನು 92 ದೇಶಗಳಲ್ಲಿ ಲಭ್ಯವಾಗುವಂತೆ ಮಾಡಲಿದ್ದಾರೆ. ಗವಿಯ ಕೋವ್ಯಾಕ್ಸ್ ಅಡ್ವಾನ್ಸ್ ಮಾರ್ಕೆಟ್ ಕಮಿಟ್‌ಮೆಂಟ್ ತಿಳಿಸಿದೆ.

Serum Institute To Provide Covid Vaccine To 92 Vountries At Rs 250 A Dose

ಗವಿಯಲ್ಲಿ ಗೇಟ್ಸ್ ಫೌಂಡೇಶನ್ ಬಂಡವಾಳ ಹೂಡಲಿದೆ. ಅದು ಸೀರಮ್ ಇನ್‌ಸ್ಟಿಟ್ಯೂಟ್‌ಗೆ ಬೆಂಬಲವನ್ನು ನೀಡುತ್ತಿದೆ.

ಕೋವ್ಯಾಕ್ಸ್ 2021ರೊಳಗೆ ಅನುಮತಿ ಪಡೆದಿರುವ 2 ಬಿಲಿಯನ್ ಕೊವಿಡ್ ಲಸಿಕೆಯನ್ನು ನೀಡುವ ಭರವಸೆಯನ್ನು ನೀಡಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಕೊವಿಡ್-19 ಲಸಿಕೆ ಉತ್ಪಾದನಾ ಪಾಲುದಾರಿಕೆಯನ್ನು ಹೊಂದಿರುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ 225 ರೂ.ಗೆ ನೀಡುವುದಾಗಿ ಪ್ರಕಟಿಸಿದೆ.

ಭಾರತ ಸೇರಿದಂತೆ ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಿಗೆ 100 ಮಿಲಿಯನ್ ಡೋಸ್ ಕೊವಿಡ್ 19 ಲಸಿಕೆಗಳನ್ನು ತಯಾರಿಸಲು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ 150 ಮಿಲಿಯನ್ ಡಾಲರ್ ಹಣವನ್ನು ಒದಗಿಸುತ್ತದೆ ಎಂದು ಸೀರಮ್ ತಿಳಿಸಿದೆ.

ಅಸ್ಟ್ರಾಜೆನೆಕಾ ಪರವಾನಗಿ ಹೊಂದಿರುವ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಲಸಿಕೆ ಅಭ್ಯರ್ಥಿಯು ಭಾರತ ಮತ್ತು ಇತರ ಹಲವಾರು ದೇಶಗಳಲ್ಲಿ ಕ್ಲಿನಿಕಲ್ ಪ್ರಯೋಗಗಳ ಮುಂದುವರಿದ ಹಂತದಲ್ಲಿದೆ ಮತ್ತು 2021ರ ಮೊದಲಾರ್ಧದಲ್ಲಿ ಸಾರ್ವಜನಿಕ ಬಳಕೆಗೆ ಲಭ್ಯವಾಗುವ ಸಾಧ್ಯತೆಯಿದೆ.

ಅಸ್ಟ್ರಾಜೆನೆಕಾ ಮತ್ತು ನೊವಾವಾಕ್ಸ್ ಲಸಿಕೆಗಳಿಗೆ 3 ಡಾಲರ್ ಬೆಲೆ ನಿಗದಿಪಡಿಸಿ ಜಗತ್ತಿನ ಸುಮಾರು 92 ದೇಶಗಳಲ್ಲಿ ಗಾವಿಯ ಕೋವಾಕ್ಸ್ ಅಡ್ವಾನ್ಸ್ ಮಾರ್ಕೆಟ್ ಕಮಿಟ್ ಮೆಂಟ್ ಕೇಂದ್ರಗಳಲ್ಲಿ ಲಭ್ಯವಾಗುವಂತೆ ಮಾಡುವ ಗುರಿ ಹೊಂದಲಾಗಿದೆ ಎನ್ನಲಾಗಿದೆ.

English summary
Serum Institute of India (SII) has inked a pact with the Bill and Melinda Gates Foundation, as well as Gavi, The Vaccine Alliance, to make 100 million doses of a potential vaccine. This is for low- and medium-income countries, and with a price cap of Rs 225 a dose.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X