ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿಯೂ 'ಕೋವಿಶೀಲ್ಡ್' ಲಸಿಕೆ ಪ್ರಯೋಗಕ್ಕೆ ತಡೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 10: ಆಕ್ಸ್‌ಫರ್ಡ್ ಯುನಿವರ್ಸಿಟಿ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಕೊರೊನಾ ವೈರಸ್ ಲಸಿಕೆಯ ಮೂರನೇ ಹಂತದ ಪ್ರಯೋಗವನ್ನು ನಿಲ್ಲಿಸುತ್ತಿರುವುದಾಗಿ ಲಸಿಕೆ ಉತ್ಪಾದಕ ಸಂಸ್ಥೆ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಗುರುವಾರ ತಿಳಿಸಿದೆ.

ಔಷಧ ದಿಗ್ಗಜ ಆಸ್ಟ್ರಾಜೆನೆಕಾ ಸಹಯೋಗದಲ್ಲಿ 'ಕೋವಿಶೀಲ್ಡ್' ಲಸಿಕೆ ಸಿದ್ಧವಾಗುತ್ತಿದೆ. ಭಾರತದಲ್ಲಿ ಇದರ ಮೂರನೇ ಹಂತದ ಪ್ರಯೋಗ ಮುಂದಿನ ವಾರ ಶುರುವಾಗಬೇಕಿತ್ತು. ಆದರೆ ಬ್ರಿಟನ್‌ನಲ್ಲಿ ಈ ಲಸಿಕೆಯ ಪ್ರಯೋಗಕ್ಕೆ ಒಳಗಾದವರ ಪೈಕಿ ಒಬ್ಬರಲ್ಲಿ ಅಡ್ಡ ಪರಿಣಾಮಗಳು ಕಂಡುಬಂದ ಹಿನ್ನೆಲೆಯಲ್ಲಿ ನಾಲ್ಕು ದೇಶಗಳಲ್ಲಿ ಈ ಲಸಿಕೆಯ ಪ್ರಯೋಗವನ್ನು ತಡೆಹಿಡಿಯಲಾಗಿದೆ.

ಕೊವಿಡ್ 19 ಲಸಿಕೆಗೆ ಹಿನ್ನಡೆ: ಆಸ್ಟ್ರಾಜೆನೆಕಾ ಕ್ಲಿನಿಕಲ್ ಟ್ರಯಲ್ ಸ್ಥಗಿತ ಕೊವಿಡ್ 19 ಲಸಿಕೆಗೆ ಹಿನ್ನಡೆ: ಆಸ್ಟ್ರಾಜೆನೆಕಾ ಕ್ಲಿನಿಕಲ್ ಟ್ರಯಲ್ ಸ್ಥಗಿತ

ಬೇರೆ ದೇಶಗಳಲ್ಲಿ ಲಸಿಕೆಯ ಪ್ರಯೋಗವನ್ನು ತಡೆಹಿಡಿಯಲಾಗಿದ್ದರೂ, ಭಾರತದಲ್ಲಿ ಮುಂದುವರಿಸುತ್ತಿರುವ ಬಗ್ಗೆ ಹಾಗೂ ಇದರ ಬಗ್ಗೆ ತನಗೆ ಸೂಕ್ತ ಮಾಹಿತಿ ನೀಡದೆ ಇರುವುದನ್ನು ಪ್ರಶ್ನಿಸಿ ಭಾರತದ ಔಷಧ ನಿಯಂತ್ರಕ ಪ್ರಾಧಿಕಾರ ಡಿಸಿಜಿಐ ಬುಧವಾರ ಶೋಕಾಸ್ ನೋಟಿಸ್ ನೀಡಿತ್ತು. ಬ್ರಿಟನ್‌ನಲ್ಲಿ ರೋಗಿಯೊಬ್ಬರಲ್ಲಿ ಕಂಡುಬಂದ ಲಕ್ಷಣಗಳ ವಿವರವುಳ್ಳ ವರದಿಯ ಸಿಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಮುಂದೆ ಓದಿ.

1,600 ಸ್ವಯಂಸೇವಕರ ಮೇಲೆ ಪ್ರಯೋಗ

1,600 ಸ್ವಯಂಸೇವಕರ ಮೇಲೆ ಪ್ರಯೋಗ

'ನಾವು ಪರಿಸ್ಥಿತಿಯನ್ನು ಪರಾಮರ್ಶಿಸುತ್ತಿದ್ದು, ಆಸ್ಟ್ರಾಜೆನೆಕಾ ತನ್ನ ಪ್ರಯೋಗಗಳನ್ನು ಪುನರಾರಂಭಿಸುವವರೆಗೂ ಭಾರತದಲ್ಲಿನ ಪ್ರಯೋಗವನ್ನು ತಡೆಹಿಡಿಯಲಾಗುವುದು' ಎಂದು ಸೆರಮ್ ಸಂಸ್ಥೆ ತಿಳಿಸಿದೆ. ಆದರೆ ತನ್ನ ಪ್ರಯೋಗಕ್ಕೆ ಸ್ವಯಂಸೇವಕರನ್ನು ಪಟ್ಟಿ ಮಾಡುವ ಹಾಗೂ ಇತರೆ ಕೆಲಸಗಳನ್ನು ಅದು ಮುಂದುವರಿಸಿದೆ. ಮುಂದಿನ ವಾರ ಮೂರನೇ ಹಂತದ ಪರೀಕ್ಷೆ ಆರಂಭವಾಗಬೇಕಿದ್ದು, ಭಾರತದ 17 ಸ್ಥಳಗಳಲ್ಲಿ 1,600 ಸ್ವಯಂಸೇವಕರ ಮೇಲೆ ಪ್ರಯೋಗ ನಡೆಯಬೇಕಿತ್ತು.

ಕೊರೊನಾ ವೈರಸ್ ಲಸಿಕೆ ವೈಫಲ್ಯ: ಸೆರಮ್ ಸಂಸ್ಥೆಗೆ ಡಿಸಿಜಿಐ ನೋಟಿಸ್ಕೊರೊನಾ ವೈರಸ್ ಲಸಿಕೆ ವೈಫಲ್ಯ: ಸೆರಮ್ ಸಂಸ್ಥೆಗೆ ಡಿಸಿಜಿಐ ನೋಟಿಸ್

ಸೂಚನೆಗಳಿಗೆ ಬದ್ಧ

ಸೂಚನೆಗಳಿಗೆ ಬದ್ಧ

'ಇದುವರೆಗೂ ನಮಗೆ ಪ್ರಯೋಗ ತಡೆಹಿಡಿಯುವಂತೆ ಸೂಚನೆ ನೀಡಿರಲಿಲ್ಲ. ಸುರಕ್ಷತೆಯ ಬಗ್ಗೆ ಡಿಸಿಜಿಐಗೆ ಆತಂಕವಿದ್ದರೆ ಅವರ ಸೂಚನೆಗಳನ್ನು ನಾವು ಅನುಸರಿಸುತ್ತೇವೆ ಮತ್ತು ನಿರ್ದಿಷ್ಟ ಶಿಷ್ಟಾಚಾರಗಳಿಗೆ ಬದ್ಧರಾಗಿತ್ತೇವೆ. ಡಿಸಿಜಿಐನ ನಿರ್ದೇಶನದಂತೆ ನಡೆಯುತ್ತೇವೆ' ಎಂದು ನೋಟಿಸ್ ಬಳಿಕ ಸಂಸ್ಥೆ ಹೇಳಿದೆ.

ಸ್ವಯಂಸೇವಕನಲ್ಲಿ ಅನಾರೋಗ್ಯ

ಸ್ವಯಂಸೇವಕನಲ್ಲಿ ಅನಾರೋಗ್ಯ

'ಕೋವಿಶೀಲ್ಡ್' ಲಸಿಕೆಯ ಪ್ರಯೋಗಕ್ಕೆ ಒಳಪಟ್ಟಿದ್ದ ಸ್ವಯಂಸೇವಕರೊಬ್ಬರಲ್ಲಿ ಇದ್ದಕ್ಕಿದ್ದಂತೆ ವಿವರಿಸಲಾಗದ ಅನಾರೋಗ್ಯ ಕಾಣಿಸಿಕೊಂಡಿದೆ. ಹೀಗಾಗಿ ಲಸಿಕೆ ಪ್ರಯೋಗದ ಚಟುವಟಿಕೆಯನ್ನು ತಡೆಹಿಡಿಯಲಾಗಿದೆ ಎಂದು ಬ್ರಿಟಿಷ್-ಸ್ವೀಡಿಶ್ ಔಷಧ ಸಂಸ್ಥೆ ಆಸ್ಟ್ರಾಜೆನೆಕಾ ತಿಳಿಸಿತ್ತು.

ಬೆನ್ನುಹುರಿ ಉರಿಯೂತ

ಬೆನ್ನುಹುರಿ ಉರಿಯೂತ

ಬ್ರಿಟನ್‌ನಲ್ಲಿ ನಡೆಯುತ್ತಿರುವ ಲಸಿಕೆಯ ಪ್ರಯೋಗಕ್ಕೆ ಒಳಗಾಗಿದ್ದ ಸ್ವಯಂಸೇವಕರೊಬ್ಬರಲ್ಲಿ ಬೆನ್ನುಹುರಿಯಲ್ಲಿ ಸೋಂಕಿನಿಂದ ಸಾಮಾನ್ಯವಾಗಿ ಉಂಟಾಗುವ ಉರಿಯೂತ ಟ್ರಾನ್ಸ್‌ವರ್ಸ್ ಮೈಲಿಟಿಸ್ ಕಾಣಿಸಿಕೊಂಡಿದೆ. ಇದರ ಬೆನ್ನಲ್ಲೇ ನಾಲ್ಕು ದೇಶಗಳಲ್ಲಿ ಲಸಿಕೆ ಪ್ರಯೋಗ ನಿಲ್ಲಿಸಲಾಗಿತ್ತು. ಭಾರತದಲ್ಲಿಯೂ ಆತಂಕ ಹೆಚ್ಚಿದ್ದರಿಂದ ಪ್ರಯೋಗಕ್ಕೆ ತಡೆ ನೀಡಲಾಗಿದೆ.

ಭಾರತದಲ್ಲಿ ಕೊರೊನಾ ವೈರಸ್ ಮರಣ ಪ್ರಮಾಣ ಏಕಾಏಕಿ ಹೆಚ್ಚಳಭಾರತದಲ್ಲಿ ಕೊರೊನಾ ವೈರಸ್ ಮರಣ ಪ್ರಮಾಣ ಏಕಾಏಕಿ ಹೆಚ್ಚಳ

English summary
Serum Institute To Pause Covid-19 vaccine Covishield trials In India after notice from DCGI, as AsftraZeneca stops trials in other countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X