ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ ಅಂತ್ಯಕ್ಕೆ 200-300 ಮಿಲಿಯನ್ ಕೋವಿಡ್ ಲಸಿಕೆ ಡೋಸ್ ಲಭ್ಯ: ಸೆರಮ್

|
Google Oneindia Kannada News

ನವದೆಹಲಿ, ಅಕ್ಟೋಬರ್ 17: ಡಿಸೆಂಬರ್ ಅಂತ್ಯದ ವೇಳೆಗೆ ಭಾರತದಲ್ಲಿ 200-300 ಮಿಲಿಯನ್ ಕೋವಿಡ್ 19 ಲಸಿಕೆ ಡೋಸ್‌ಗಳು ಲಭ್ಯವಾಗಲಿದ್ದು, 2021ರ ಮಾರ್ಚ್ ವೇಳೆಗೆ ಅಂತಿಮ ಪರೀಕ್ಷೆಗೆ ಒಳಗಾದ ಲಸಿಕೆ ಸಿಗಲಿದೆ ಎಂದು ಸೆರಮ್ ಇನ್‌ಸ್ಟಿಟ್ಯೂಟ್ (ಎಸ್‌ಐಐ) ಕಾರ್ಯಕಾರಿ ನಿರ್ದೇಶಕ ಡಾ. ಸುರೇಶ್ ಜಾಧವ್ ತಿಳಿಸಿದ್ದಾರೆ.

'ಡಿಸೆಂಬರ್ ಕೊನೆಯಲ್ಲಿ ಭಾರತದಲ್ಲಿ 200 ರಿಂದ 300 ಮಿಲಿಯನ್ ಲಸಿಕೆ ಡೋಸ್‌ಗಳು ಸಿದ್ಧವಾಗಲಿವೆ. ಹೀಗಾಗಿ ಡಿಸಿಜಿಐನಿಂದ ಒಮ್ಮೆ ಪರವಾನಗಿ ಸಿಗುತ್ತಿದ್ದಂತೆಯೇ ಉತ್ಪನ್ನವನ್ನು ಬಿಡುಗಡೆ ಮಾಡಲಾಗುವುದು' ಎಂದು ಜಾಧವ್ ಹೇಳಿದ್ದಾರೆ.

Serum Institute Of India: India To Have 200-300 Mn Covid Vaccine Doses By December End

ಕೊರೊನಾ ವೈರಸ್ ಸಂಕಷ್ಟವನ್ನು ಎದುರಿಸಲು ಐದು ವಿಭಿನ್ನ ಉತ್ಪನ್ನಗಳ ಮೇಲೆ ಸೆರಮ್ ಇನ್‌ಸ್ಟಿಟ್ಯೂಟ್ ಕೆಲಸ ಮಾಡುತ್ತಿದೆ. ಕೆಲವೊಂದು ವಿರಾಮಗಳಿದ್ದರೂ ಮತ್ತು ಪ್ರಯೋಗವು ಕೆಲವು ಸಮಯ ಸ್ಥಗಿತಗೊಂಡಿದ್ದರೂ ಹಾಗೂ ಮೂರನೇ ಹಂತದ ಪ್ರಯೋಗಗಳಲ್ಲಿ ಭಾಗಿಯಾದ ಜನರ ಬಗ್ಗೆ ಔಷಧ ನಿಯಂತ್ರಕರು ಸ್ಪಷ್ಟನೆ ಬಯಸಿದ್ದರಿಂದ ಮೂರು ವಾರಗಳವರೆಗೆ ಪರೀಕ್ಷೆ ವಿಸ್ತರಣೆಯಾಗಿದ್ದರೂ ಸೆರಮ್ ಸಂಸ್ಥೆಯು ಡಿಸೆಂಬರ್ ಅಂತ್ಯದ ವೇಳೆಗೆ ಡಿಸಿಜಿಐಗೆ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದ ಎಲ್ಲ ಡೇಟಾಗಳನ್ನು ಸಲ್ಲಿಸಲು ಸಮರ್ಥವಾಗಲಿದೆ ಎಂದಿದ್ದಾರೆ.

Recommended Video

ಒಂದೇ ಓವರ್ ನಲ್ಲಿ 2 wicket ತೆಗೆದ Yuzvendra Chahal | Oneindia Kannada

'ಡಿಸಿಜಿಐಗೆ ತೃಪ್ತಿಯಾದರೆ ಅವರು ನಮಗೆ ಒಂದು ತಿಂಗಳ ಸಮಯದಲ್ಲಿ ಇಯುಎಲ್ ಅಂದರೆ, ತುರ್ತು ಬಳಕೆ ಪರವಾನಗಿ ಅಥವಾ ಮಾರುಕಟ್ಟೆ ಅಧಿಕೃತತೆಯನ್ನು ನೀಡಬಹುದು. ಬಳಿಕ ಸೆರಮ್ ಸಂಸ್ಥೆಯು ಪೂರ್ವ ಅರ್ಹತೆಗಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ಹೋಗಬಹುದಾಗಿದೆ. ಪೂರ್ವ ಅರ್ಹತೆಯ ಬಳಿಕವಷ್ಟೇ ಈ ಉತ್ಪನ್ನವನ್ನು ಅಂತಾರಾಷ್ಟ್ರೀಯ ಸಂಸ್ಥೆಗಳು ಖರೀದಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

English summary
Serum Institute of India executive director Dr Suresh Jadhav said India will have 200-300 million Covid-19 vaccine doses by December end.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X