ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೀರಮ್‌ ಸಂಸ್ಥೆಯಲ್ಲಿ ನೋವಾವಾಕ್ಸ್‌ನ 'ಕೊವೊವಾಕ್ಸ್' ಲಸಿಕೆ ಉತ್ಪಾದನೆ ಆರಂಭ

|
Google Oneindia Kannada News

ನವದೆಹಲಿ, ಜೂ.26: ''ಪುಣೆಯಲ್ಲಿರುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಮೊದಲ ಬ್ಯಾಚ್ ಕೊವೊವಾಕ್ಸ್ ಲಸಿಕೆ ತಯಾರಿಕೆಯನ್ನು ಪ್ರಾರಂಭಿಸಲಾಗಿದೆ,'' ಎಂದು ಸಂಸ್ಥೆ ಶುಕ್ರವಾರ ಪ್ರಕಟಿಸಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ''ಹೊಸ ಮೈಲಿಗಲ್ಲು ತಲುಪಲಾಗಿದೆ. ಈ ವಾರ ನಾವು ಪುಣೆಯಲ್ಲಿರುವ ನಮ್ಮ ಸಂಸ್ಥೆಯಲ್ಲಿ ನಮ್ಮ ಮೊದಲ ಬ್ಯಾಚ್‌ನ ಕೊವೊವಾಕ್ಸ್ (ನೋವಾವಾಕ್ಸ್ ಅಭಿವೃದ್ಧಿಪಡಿಸಿದ ಕೋವಿಡ್‌ ಲಸಿಕೆ) ಯ ಉತ್ಪಾದನೆ ಆರಂಭಿಸಿದ್ದೇವೆ,'' ಎಂದು ತಿಳಿಸಿದೆ.

ಎಲ್ಲಾ ಕೊರೊನಾ ರೂಪಾಂತರಿಗಳ ವಿರುದ್ಧ ಹೋರಾಡಲಿದೆ ಈ ಎರಡು ಲಸಿಕೆ ಎಲ್ಲಾ ಕೊರೊನಾ ರೂಪಾಂತರಿಗಳ ವಿರುದ್ಧ ಹೋರಾಡಲಿದೆ ಈ ಎರಡು ಲಸಿಕೆ

''ಸೆಪ್ಟೆಂಬರ್ ವೇಳೆಗೆ ಭಾರತದಲ್ಲಿ ನೊವಾವಾಕ್ಸ್‌ನ ಕೋವಿಡ್ -19 ಲಸಿಕೆ ಕೊವೊವಾಕ್ಸ್ ಅನ್ನು ಬಿಡುಗಡೆ ಮಾಡಲು ಎಸ್‌ಐಐ ಆಶಿಸುತ್ತಿದೆ. ಅದರ ಪ್ರಯೋಗಗಳು ಪೂರ್ಣಗೊಳ್ಳುವ ಹಂತದಲ್ಲಿದೆ,'' ಎಂದು ಸೀರಮ್‌ ಸಂಸ್ಥೆ ಸಿಇಒ ಅದಾರ್ ಪೂನಾವಾಲಾ ಈ ಹಿಂದೆ ಹೇಳಿದ್ದರು.

Serum Institute Begins Production of Novavaxs Covid Vaccine Covovax at Pune

2020 ರ ಸೆಪ್ಟೆಂಬರ್‌ನಲ್ಲಿ ನೊವಾವಾಕ್ಸ್ ತನ್ನ ಕೋವಿಡ್‌ ಲಸಿಕೆ NVX-CoV2373 ಗಾಗಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದೊಂದಿಗೆ ಉತ್ಪಾದನಾ ಒಪ್ಪಂದವನ್ನು ಘೋಷಿಸಿತ್ತು.

''ಭಾರತದಲ್ಲಿ ನೊವಾವಾಕ್ಸ್‌ನ ಕೊರೊನಾವೈರಸ್ ಲಸಿಕೆಯ ಪ್ರಯೋಗವು ನವೆಂಬರ್ ವೇಳೆಗೆ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ. ಈ ಲಸಿಕೆ ಪ್ರಯೋಗದ ಜಾಗತಿಕ ಮಾಹಿತಿಯ ಆಧಾರದ ಮೇಲೆ ದೇಶದಲ್ಲಿ ಲಸಿಕೆ ಪ್ರಯೋಗ ಮುಕ್ತಾಯಗೊಳ್ಳುವ ಮೊದಲೇ ಈ ಸಂಸ್ಥೆಯು ಲಸಿಕೆ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು,'' ಎಂದು ಮಾಧ್ಯಮವೊಂದಕ್ಕೆ ಪೂನವಾಲಾ ಮಾಹಿತಿ ನೀಡಿದ್ದಾರೆ.

''ಲಸಿಕೆ ಎನ್‌ವಿಎಕ್ಸ್-ಕೋವಿ 2373 ಮಧ್ಯಮ ಮತ್ತು ತೀವ್ರವಾದ ಕೋವಿಡ್ -19 ಸೋಂಕಿನ ವಿರುದ್ಧ 100 ಪ್ರತಿಶತ ರಕ್ಷಣೆ ನೀಡಿದೆ, ಒಟ್ಟಾರೆ 90.4 ಪ್ರತಿಶತ ಪರಿಣಾಮಕಾರಿತ್ವ, '' ಎಂದು ನೋವಾವಾಕ್ಸ್ ಜೂನ್ 14 ರಂದು ಹೇಳಿಕೆ ನೀಡಿದೆ.

 ವರ್ಷಾಂತ್ಯಕ್ಕೆ ಎಲ್ಲರಿಗೂ ಲಸಿಕೆ ನೀಡಲು ದಿನಕ್ಕೆ ಎಷ್ಟು ಡೋಸ್ ನೀಡುವುದು ಅವಶ್ಯಕ ವರ್ಷಾಂತ್ಯಕ್ಕೆ ಎಲ್ಲರಿಗೂ ಲಸಿಕೆ ನೀಡಲು ದಿನಕ್ಕೆ ಎಷ್ಟು ಡೋಸ್ ನೀಡುವುದು ಅವಶ್ಯಕ

''ಲಸಿಕೆಯ ಪರಿಣಾಮಕಾರಿತ್ವ, ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿಯನ್ನು ಮೌಲ್ಯಮಾಪನ ಮಾಡಲು ಯುಎಸ್ ಮತ್ತು ಮೆಕ್ಸಿಕೊದ 119 ಪ್ರದೇಶದ 29,960 ಮಂದಿಯ ಮೇಲೆ ಲಸಿಕೆಯ ಅಧ್ಯಯನವು ಮಾಡಲಾಗಿದೆ,'' ಎಂದು ತನ್ನ ಹೇಳಿಕೆಯಲ್ಲಿ ಸಂಸ್ಥೆ ಉಲ್ಲೇಖಿಸಿದೆ. ಹಾಗೆಯೇ ''ನೊವಾವಾಕ್ಸ್‌ನ ಕೊರೊನಾವೈರಸ್ ಲಸಿಕೆ ಮುಖ್ಯವಾಗಿ ಹರಡುವ ರೂಪಾಂತರಗಳ ವಿರುದ್ಧ ಶೇಕಡಾ 93 ರಷ್ಟು ಪರಿಣಾಮಕಾರಿತ್ವವನ್ನು ಪ್ರದರ್ಶಿಸಿದೆ,'' ಎಂದೂ ಹೇಳಿದೆ.

(ಒನ್‌ಇಂಡಿಯಾ ಸುದ್ದಿ)

Recommended Video

Sputnik V ಲಸಿಕೆ ನಮ್ಮ Covishieldಗಿಂತಲೂ ಸುರಕ್ಷಿತವೇ | Oneindia Kannada

English summary
A new milestone has been reached; this week we began our first batch of Covovax (a COVID-19 vaccine developed by Novavax) at our facility, here in Pune, Twitted Serum Institute of India company friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X