ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರೀ ಗೆಲುವಿನತ್ತ ಬಿಜೆಪಿ; 40 ಸಾವಿರ ಅಂಶಗಳ ಗಡಿ ದಾಟಿದ ಸೂಚ್ಯಂಕ

|
Google Oneindia Kannada News

ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟ ಆಗಲು ಆರಂಭವಾಗುತ್ತಿದ್ದಂತೆ ಮತ್ತೊಂದು ಅವಧಿಗೆ ಬಿಜೆಪಿ ಸ್ಪಷ್ಟ ಬಹುಮತ ಪಡೆದು, ಅಧಿಕಾರಕ್ಕೆ ಏರುವ ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆ ಅದ್ಭುತವಾದ ಜಿಗಿತ ಕಂಡಿದೆ. ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ ಸೂಚ್ಯಂಕವು 40 ಸಾವಿರ ಅಂಶಗಳ ಗಡಿ ದಾಟಿದೆ ಮತ್ತು ನಿಫ್ಟಿ ಸೂಚ್ಯಂಕವು 12 ಸಾವಿರದ ಗಡಿ ದಾಟಿದೆ.

ಒಂದು ವೇಳೆ ಬಿಜೆಪಿಯು ಸ್ವತಂತ್ರವಾಗಿ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದಲ್ಲಿ ಷೇರು ಮಾರುಕಟ್ಟೆ ಮತ್ತೊಂದು ಎತ್ತರಕ್ಕೆ ಏರಲಿದೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದರ ಬಗ್ಗೆ ಬಂದಾಗಲೇ ಸೆನ್ಸೆಕ್ಸ್ ಹಾಗೂ ನಿಫ್ಟಿ ಉತ್ತಮ ಏರಿಕೆ ದಾಖಲಿಸಿದ್ದವು. ಇದೀಗ ಬಹುಮತದ ಸರಕಾರ ಅಧಿಕಾರಕ್ಕೆ ಬರುವುದು ಖಾತ್ರಿ ಆಗುತ್ತಿದ್ದಂತೆ ಹೂಡಿಕೆದಾರರು ಮತ್ತಷ್ಟು ಉತ್ತೇಜಿತರಾಗಿದ್ದಾರೆ.

Sensex crosses 40 thousand mark after clear indication of NDA victory in LS polls

ಲೋಕಸಭಾ ಚುನಾವಣೆ ಫಲಿತಾಂಶ ಬರುವ ತನಕ ಹೆಚ್ಚಿನ ಪ್ರಮಾಣದ ಹೂಡಿಕೆ ಮಾಡದಂತೆ ಷೇರು ದಲ್ಲಾಳಿಗಳು ಸಲಹೆ ನೀಡಿದ್ದರು. ಚುನಾವಣೋತ್ತರ ಸಮೀಕ್ಷೆಯಲ್ಲಿ ಬಹುತೇಕ ಸಂಸ್ಥೆಗಳು ಬಿಜೆಪಿ ಮಿತ್ರ ಪಕ್ಷಗಳ ಗೆಲುವಿನ ಬಗ್ಗೆ ಸೂಚನೆ ನೀಡಿದ್ದವು. ಇದೀಗ ಬಹುಮತದ ಸರಕಾರ ರಚನೆ ಆಗುವ ಬಗ್ಗೆ ಬಹುತೇಕ ಖಚಿತವಾಗಿದೆ.

English summary
India stock market Sensex crosses 40,000 mark after clear indication of NDA victory in Lok Sabha Elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X