ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಾಮ' ಕಂಡರೆ ಭಯವೆಂದ ಸಿದ್ದು ವಿರುದ್ಧ #SelfieWithTilak ಅಸ್ತ್ರ

|
Google Oneindia Kannada News

Recommended Video

ನಾಮ' ಕಂಡರೆ ಭಯವೆಂದ ಸಿದ್ದು ವಿರುದ್ಧ #SelfieWithTilak ಅಸ್ತ್ರ| Oneindia kannada

ಬೆಂಗಳೂರು, ಮಾರ್ಚ್ 07: 'ತಿಲಕ ಇಟ್ಟರೆ ಸ್ವರ್ಗ ಸಿಗದು, ವಿಭೂತಿ ಬಳಿದರೆ ಕೈಲಾಸ ಸಿಗದು' ಎಂಬ ಹಾಡಿನ ಸಾರವನ್ನು ಹೊತ್ತಿರುವ ನಾಡನಲ್ಲಿ 'ತಿಲಕ' ಇಟ್ಟವರ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ ಮಾತುಗಳು ಈಗ ಟ್ರೆಂಡಿಂಗ್ ನಲ್ಲಿವೆ.

ತಿಲಕ, ಉದ್ದ ನಾಮ ಇಟ್ಟವರನ್ನು ಕಂಡರೆ ನನಗೆ ಭಯವಾಗುತ್ತೆ ಎಂದು ಸಿದ್ದರಾಮಯ್ಯ ಹೇಳಿದ ಮಾತನ್ನು ಇಟ್ಟುಕೊಂಡು ಬಿಜೆಪಿ #selfiewiththilak ಎಂಬ ಅಭಿಯಾನವನ್ನು ಟ್ವಿಟ್ಟರ್ ನಲ್ಲಿ ನಡೆಸಿತು. ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿಟಿ ರವಿ ಸೇರಿದಂತೆ ಅನೇಕರು ಪ್ರತಿಕ್ರಿಯಿಸಿದರು. ದೆಹಲಿಯ ಬಿಜೆಪಿ ವಕ್ತಾರ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ಟ್ವೀಟ್ ಮಾಡಿದ ಬಳಿಕ ಅಭಿಯಾನ ವೈರಲ್ ಆಗಲು ಶುರುವಾಯಿತು.

ತಿಲಕದ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ತಿಲಕದ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ

ಇತ್ತೀಚೆಗೆ ವರುಣಾ ವಿಧಾನಾಸಭಾ ಕ್ಷೇತ್ರದ ಗರ್ಗೇಶ್ವರಿ ಗ್ರಾಮದಲ್ಲಿ ನಡೆದ ಟಿ ನರಸೀಪುರ ತಾಲೂಕ್ ಪಂಚಾಯತಿ ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಡೆದುಕೊಂಡ ರೀತಿ ಭಾರಿ ಟೀಕೆಗೆ ಒಳಗಾಗಿತ್ತು. ತಮ್ಮ ಪುತ್ರನ ಬಗ್ಗೆ ಪ್ರಶ್ನಿಸಿದ ಮಾಜಿ ಜಿ.ಪಂ ಸದಸ್ಯೆ ಜಮಾಲರ್ ಎಂಬ ಮಹಿಳೆಯ ಬಾಯ್ಮಿಚ್ಚಿಸಲು ಹೋದಾಗ ನಡೆದ ಘಟನೆಯನ್ನು ವಿಪಕ್ಷದವರು ಸೇರಿದಂತೆ ಸಾರ್ವಜನಿಕರು ತಮಗಿಷ್ಟ ಬಂದ ಹಾಗೆ ಬಳಸಿಕೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಯಾಗುವಂತೆ ಮಾಡಿದ್ದರು.

Array

ತೇಜಿಂದರ್ ಪಾಲ್ ಸಿಂಗ್ ಬಗ್ಗಾ

ದೆಹಲಿ ಬಿಜೆಪಿ ವಕ್ತಾರ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ಟ್ವೀಟ್ ಮಾಡಿ, ನಾನು ನನ್ನ ತಿಲಕದೊಂದಿಗೆ ಚಿತ್ರ ಟ್ವೀಟ್ ಮಾಡುತ್ತಿದ್ದೇನೆ. ಇದು ಹಿಂದು ವಿರೋಧಿ/ ಭಾರತೀಯ ಸಂಸ್ಕೃತಿ ವಿರೋಧಿ ಸಿದ್ದರಾಮಯ್ಯ ವಿರುದ್ಧದ ಪ್ರತಿಭಟನೆ. ನೀವು ಸೂಕ್ತ ಹ್ಯಾಶ್ ಟ್ಯಾಗ್ ಬಳಸಿ ನಿಮ್ಮ ಸೆಲ್ಫಿ ವಿಥ್ ತಿಲಕ್ ಹಾಕಿ ಎಂದು ಕೋರಿದ್ದರು.

ತಿಲಕ ಇಡುವವರನ್ನು ಕಂಡ್ರೆ ಭಯ: ಸಿದ್ದರಾಮಯ್ಯ ವಿಡಿಯೋ ವೈರಲ್

ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ

ಚಿಕ್ಕಮಗಳೂರಿನ ಶಾಸಕ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರಿಗೆ ತಿಲಕ ಇಟ್ಟವರನ್ನು ಕಂಡರೆ ಭಯವಂತೆ, ಹಾಗಾದರೆ, ಸಿದ್ದರಾಮಯ್ಯ ಅವರು ತಿಲಕ ಏಕೆ ಇಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಅವರ ಫೋಟೋಗಳನ್ನು ಹಾಕಿದ್ದಾರೆ. ಹಿಂದುಗಳನ್ನು ಏಕೆ ಅಷ್ಟು ವಿರೋಧ ಎಂದು ಪ್ರಶ್ನಿಸಿದ್ದಾರೆ.

ನಿಖಿಲ್ ಎಂಬುವರಿಂದ ಟ್ವೀಟ್

ನಿಖಿಲ್ ಎಂಬುವರು ಟ್ವೀಟ್ ಮಾಡಿ, ನಿಮ್ಮಂಥ ಊಸರವಳ್ಳಿಗಳನ್ನು ನೋಡಿದರೆ ಭಯವಾಗುತ್ತದೆ ಎಂದಿದ್ದಾರೆ. ಟ್ವೀಟ್ ನಲ್ಲಿ ಸಿದ್ದರಾಮಯ್ಯ ಅವರು ಹಣೆಯಲ್ಲಿ ನಾಮ ಇಟ್ಟುಕೊಂಡಿರುವ ಚಿತ್ರವೊಂದನ್ನು ಹಾಕಿದ್ದಾರೆ.

ಪಾಕಿಸ್ತಾನದಿಂದ ಬಂದ ಸಂದೇಶ

ಲಾಹೋರ್ ಪೊಲೀಸ್ ಹೆಸರಿನಲ್ಲಿರುವ ಅನಧಿಕೃತ ಟ್ವಿಟ್ಟರ್ ಖಾತೆಯೊಂದರಲ್ಲಿ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಅವರ ಚಿತ್ರವೊಂದನ್ನು ಹಾಕಲಾಗಿತ್ತು. ಇಮ್ರಾನ್ ಹಣೆಗೆ ತಿಲಕ ಇಟ್ಟು ಪಕ್ಕದಲ್ಲಿ ಜೈ ಶ್ರೀರಾಮ್ ಎಂಬ ಅಡಿಬರಹ ನೀಡಲಾಗಿದೆ.

English summary
Former Chief Minister Siddaramaiah has once again courted controversy after making a statement that he was "scared of people who sport long kumkum or ash tikas".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X