ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟಿಷರ ಕಾಲದ ದೇಶದ್ರೋಹ ಕಾಯ್ದೆ ಸ್ವತಂತ್ರ ಭಾರತಕ್ಕೆ ಬೇಕೆ?: ಸುಪ್ರೀಂಕೋರ್ಟ್‌

|
Google Oneindia Kannada News

ನವದೆಹಲಿ, ಜುಲೈ 15: ಬ್ರಿಟಿಷರ ಕಾಲದ ದೇಶದ್ರೋಹ ಕಾಯ್ದೆ ಸ್ವತಂತ್ರ ಭಾರತಕ್ಕೆ ಅಗತ್ಯವಿದೆಯೇ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.

ಸಿಜೆಐ ಎನ್‌ವಿ ರಮಣ ಅವರು ಸುಪ್ರೀಂಕೋರ್ಟ್‌ನಲ್ಲಿ ಈ ಪ್ರಶ್ನೆ ಎತ್ತಿದ್ದು, 1870ರ ವಸಾಹತು ಕಾಲದಲ್ಲಿ ಜಾರಿಗೆ ತಂದಿದ್ದ ದೇಶದ್ರೋಹ ಕಾಯ್ದೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75ವರ್ಷ ಕಳೆದರೂ ಅದರ ಅಗತ್ಯ ದೇಶದಲ್ಲಿದೆಯೇ ಎಂದು ಪ್ರರ್ಶನೆ ಮಾಡಿದ್ದಾರೆ.

ವಿಶೇಷ ಲೇಖನ; 'ರಾಜದ್ರೋಹ' ಕಾಯ್ದೆ ಆಳ-ಅಗಲ ಏನು?ವಿಶೇಷ ಲೇಖನ; 'ರಾಜದ್ರೋಹ' ಕಾಯ್ದೆ ಆಳ-ಅಗಲ ಏನು?

ದೇಶದ್ರೋಹ ಕಾನೂನನ್ನು ಅನೇಕ ಅರ್ಜಿಗಳ ಮೂಲಕ ಪ್ರಶ್ನಿಸಲಾಗಿದೆ. ಇವುಗಳನ್ನೆಲ್ಲ ಒಟ್ಟಿಗೆ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ. ದೇಶದ್ರೋಹ ಕಾಯ್ದೆಯ ಮಾನ್ಯತೆಯನ್ನು ಪರಿಶೀಲಿಸುವುದಾಗಿ ತಿಳಿಸಿರುವ ನ್ಯಾಯಾಲಯ, ಈ ಬಗ್ಗೆ ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದೆ.

Sedition Law Colonial Why Dont You Drop It, Supreme Court Asks Centre

ಬ್ರಿಟಿಷರು ಆ ಸಮಯದಲ್ಲಿ ಮಹಾತ್ಮ ಗಾಂಧಿಯನ್ನು ಸಮ್ಮುನಾಗಿಸಲು ಇದೇ ಕಾನೂನನ್ನು ಬಳಸುತ್ತಿದ್ದರು. ವಿವಾದವಿರುವುದು ಅದು ವಸಾಹತು ಕಾನೂನು ಎಂದು.

ಬ್ರಿಟಿಷರ ಕಾಲದ ದೇಶದ್ರೋಹ ಕಾಯ್ದೆಈ ಕಾನೂನು ದುರ್ಬಳಕೆಯಾಗುತ್ತಿದೆ ಎಂಬುದು ನಮ್ಮ ಕಾಳಜಿಯಾಗಿದೆ. ಅಲ್ಲದೆ ಇದನ್ನು ಜಾರಿಗೊರಿಸುವವರು ಯಾವುದೇ ಹೊಣೆಗಾರಿಕೆಯನ್ನು ಹೊಂದಿಲ್ಲ. 'ಇದುವರೆಗೂ ದಾಖಲಾದ ಪ್ರಕರಣಗಳಲ್ಲಿ ಕೆಲವೇ ಪ್ರಕರಣಗಳು ಮಾತ್ರ ಸಾಬೀತಾಗಿದ್ದು, ಅಪರಾಧ ದರ ತೀರಾ ಕಡಿಮೆಯಿರುವುದನ್ನು ಇತಿಹಾಸ ತೋರಿಸಿದೆ' ಎಂದು ಎನ್‌ವಿ ರಮಣ ತಿಳಿಸಿದ್ದಾರೆ.

ಯಾವುದೇ ಗ್ರಾಮದಲ್ಲಿ ಯಾರಾದರೂ ಪ್ರಶ್ನಿಸಿದರೆ ಅವರನ್ನು ಬಂಧಿಸಿ ಪೊಲೀಸರು ಆತನ ಮೇಲೆ 124ಎ ಪ್ರಕರಣ ದಾಖಲಿಸಬಹುದಾಗಿದೆ. ಇದರಿಂದ ಜನ ಭಯಭೀತರಾಗಿದ್ದಾರೆ ಎಂದು ರಮಣ ಅಭಿಪ್ರಾಯಪಟ್ಟಿದ್ದಾರೆ.

ನಾವು ಯಾವುದೇ ಸರ್ಕಾರವನ್ನು ದೂಷಿಸುತ್ತಿಲ್ಲ. ಆದರೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಎ ಅನ್ನು ರದ್ದುಪಡಿಸಿ ಬಹಳ ದಿನಗಳಾದರೂ ಇನ್ನು ಬಳಕೆಯಲ್ಲಿದೆ. ಅದೇ ರೀತಿ ಈ ದೇಶದ್ರೋಹ ಕಾನೂನು ಸಹ ದುರ್ಬಳಕೆಯಾಗುತ್ತಿದೆ. ಇದರ ಸಿಂಧುತ್ವವನ್ನು ಪರಿಶೀಲಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಈ ಕಾಯ್ದೆ ಅತಿಯಾಗಿ ದುರ್ಬಳಕೆಯಾಗಿದೆ. ಬಡಗಿಯೊಬ್ಬನಿಗೆ ಕಾಡೊದನ್ನು ತೋರಿಸಿ ಯಾವುದಾದರೊಂದು ಮರವನ್ನು ಬಳಸಿಕೊ ಎಂದರೆ ಆತನ ಇಡೀ ಕಾಡನ್ನು ಕಡಿದ ರೀತಿ ಈ ಕಾನೂನು ಎಲ್ಲರ ವಿರುದ್ಧ ಪ್ರಯೋಗಿಸಲ್ಪಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮಾನವ ಹಕ್ಕುಗಳ ಹೋರಾಟಗಾರ 84 ವರ್ಷ ವಯಸ್ಸಿನ ಫಾದರ್ ಸ್ಟ್ಯಾನ್‌ ಸ್ವಾಮಿ ನಿಧನದ ನಂತರ ದೇಶದಲ್ಲಿ ಯುಎಪಿಎ ಕಾಯ್ದೆ ಕುರಿತು ತೀವ್ರ ಟೀಕೆಗಳು ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ಜಸ್ಟಿಸ್‌ ಚಂದ್ರಚೂಡ್‌ ಅವರ ಹೇಳಿಕೆ ಮಹತ್ವದ ಸ್ಥಾನ ಪಡೆದುಕೊಂಡಿದೆ.

English summary
Describing the British-era sedition law as "colonial", the Supreme Court today questioned whether the law was "still necessary after 75 years of Independence".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X