ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಧ್ಯಮದ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿಲ್ಲವೇ; ಸುಪ್ರೀಂ

|
Google Oneindia Kannada News

ನವದೆಹಲಿ, ಮೇ 31; "ಶವಗಳನ್ನು ನದಿಗೆ ಎಸೆಯುವ ವರದಿಗಳನ್ನು ಟಿವಿ ಮಾಧ್ಯಮಗಳಲ್ಲಿ ನೋಡಿದೆ. ಅವುಗಳ ವಿರುದ್ಧ ಇನ್ನು ದೇಶದ್ರೋಹದ ಪ್ರಕರಣವನ್ನು ದಾಖಲು ಮಾಡಿಲ್ಲವೇ ನನಗೆ ತಿಳಿದಿಲ್ಲ" ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಕೋವಿಡ್ ಪರಿಸ್ಥಿತಿ ನಿರ್ವಹಣೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಂಡಿದೆ. ಡಿ. ವೈ. ಚಂದ್ರಚೂಡ್ ನೇತೃತ್ವದ ತ್ರಿ ಸದಸ್ಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯುವಾಗ ಈ ಅಭಿಪ್ರಾಯ ವ್ಯಕ್ತವಾಗಿದೆ.

ಲಸಿಕೆ ಬೆಲೆ ಮತ್ತು ಹಂಚಿಕೆಯ ಬಗ್ಗೆ ಕೇಂದ್ರದ ಮುಂದೆ ಕಠಿಣ ಪ್ರಶ್ನೆಗಳನ್ನಿಟ್ಟ ಸುಪ್ರೀಂ ಕೋರ್ಟ್ಲಸಿಕೆ ಬೆಲೆ ಮತ್ತು ಹಂಚಿಕೆಯ ಬಗ್ಗೆ ಕೇಂದ್ರದ ಮುಂದೆ ಕಠಿಣ ಪ್ರಶ್ನೆಗಳನ್ನಿಟ್ಟ ಸುಪ್ರೀಂ ಕೋರ್ಟ್

ಕೋವಿಡ್ ಪರಿಸ್ಥಿತಿ ಬಗ್ಗೆ ವರದಿ ಮಾಡುವ ಮಾಧ್ಯಮಗಳನ್ನು ಸರ್ಕಾರ ನೋಡುವ ರೀತಿಯ ಬಗ್ಗೆ ಅಸಮಾಧಾನ ಹೊಂದಿರುವ ನ್ಯಾಯಾಲಯ ಅರ್ಜಿ ವಿಚಾರಣೆ ಸಮಯದಲ್ಲಿ ಈ ಅಭಿಪ್ರಾಯವನ್ನು ಹೇಳಿದೆ.

CBSE, ICSE: 12ನೇ ತರಗತಿ ಪರೀಕ್ಷೆ ರದ್ದು ಕೋರಿ ಅರ್ಜಿ: ವಿಚಾರಣೆ ಮುಂದೂಡಿದ ಸುಪ್ರೀಂ CBSE, ICSE: 12ನೇ ತರಗತಿ ಪರೀಕ್ಷೆ ರದ್ದು ಕೋರಿ ಅರ್ಜಿ: ವಿಚಾರಣೆ ಮುಂದೂಡಿದ ಸುಪ್ರೀಂ

Sedition Case Has Been Filed Against News Channel Yet SC

ಉತ್ತರ ಪ್ರದೇಶದ ಸೇತುವೆ ಮೇಲಿನಿಂದ ಶವಗಳನ್ನು ನದಿಗೆ ಎಸೆಯುವ ವಿಡಿಯೋವನ್ನು ಸುದ್ದಿ ಮಾಧ್ಯಮಗಳು ಪ್ರಸಾರ ಮಾಡುತ್ತಿದ್ದವು. ಈ ವರದಿಗಳ ಬಗ್ಗೆಯೇ ಮುಖ್ಯ ನ್ಯಾಯಮೂರ್ತಿಗಳು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಸಂಸದನ ವಿರುದ್ಧ ಸುಪ್ರೀಂ ತೀರ್ಪು ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಸಂಸದನ ವಿರುದ್ಧ ಸುಪ್ರೀಂ ತೀರ್ಪು

ಕೋವಿಡ್ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸಹಾಯ ಕೇಳುವವರ ವಿರುದ್ಧ ಸರ್ಕಾರ ಕೇಸು ದಾಖಲು ಮಾಡುತ್ತಿರುವ ಕುರಿತು ಹಲವು ಬಾರಿ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಏಪ್ರಿಲ್ 30ರಂದು ಅರ್ಜಿಯ ವಿಚಾರಣೆ ಸಮಯದಲ್ಲಿ ನ್ಯಾಯಾಲಯ ಕೋವಿಡ್ ಸಂರ್ಭದಲ್ಲಿ ಜನರು ತಮ್ಮ ಸಮಸ್ಯೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿಕೊಳ್ಳುವ ಬಗ್ಗೆ ಮಾತನಾಡಿತ್ತು.

ಉತ್ತರ ಪ್ರದೇಶ ಸರ್ಕಾರ ಸಾಮಾಜಿಕ ಜಾಲತಾಣಗಳ ಮೂಲಕ ಕೋವಿಡ್ ಸಂದರ್ಭದಲ್ಲಿ ತಪ್ಪು ಮಾಹಿತಿ ನೀಡುವ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕೋರ್ಟ್ ದೇಶದ್ರೋಹದ ಪ್ರಕರಣ ದಾಖಲಿಸಿಲ್ಲವೇ? ಎಂದು ಕೇಳಿದೆ.

ಪತ್ರಿಕಾ ಸ್ವಾತಂತ್ರ್ಯದ ಹಿನ್ನಲೆಯಲ್ಲಿ ಐಪಿಸಿ ಸೆಕ್ಷನ್ 124 ಎ ಬಗ್ಗೆ ವಿವರವಾದ ಅಭಿಪ್ರಾಯದ ಅಗತ್ಯವಿದೆ ಎಂದು ನ್ಯಾಯಮೂರ್ತಿ ಎಲ್. ನಾಗೇಶ್ವರರಾವ್, ರವೀಂದ್ರ ಭಟ್ ಅವರಿದ್ದ ಪೀಠ ತ್ರಿ ಸದಸ್ಯ ಪೀಠ ಹೇಳಿದೆ.

ಕೋವಿಡ್ ಲಸಿಕೆ ಯೋಜನೆ ಕುರಿತು ಸಹ ನ್ಯಾಯಾಲಯ ವಿಚಾರಣೆ ವೇಳೆ ಗಮನಹರಿಸಿದ್ದು, ದೇಶಾದ್ಯಂತ ಒಂದೇ ದರದಲ್ಲಿ ಲಸಿಕೆ ಸಿಗಬೇಕು ಎಂದು ಅಭಿಪ್ರಾಯಪಟ್ಟಿದೆ.

English summary
A news report showed dead body was being thrown into river. I don't know if a sedition case has been filed against the news channel yet Justice Chandrachud remarked.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X