ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್ ಜೋಡೋ ಯಾತ್ರೆಯಲ್ಲಿ ಭದ್ರತೆ ಲೋಪ: ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ

ಭಾರತ್ ಜೋಡೋ ಯಾತ್ರೆಯಲ್ಲಿ ಯಾತ್ರೆಯಲ್ಲಿ ಭದ್ರತಾ ಲೋಪವಾಗಿದೆ ಎಂದು ಕೆಸಿ ವೇಣುಗೋಪಾಲ್ ಆರೋಪಿಸಿದ್ದಾರೆ. ಹೀಗಾಗಿ ಜಮ್ಮು ಮತ್ತು ಕಾಶ್ಮೀರದ ಬನಿಹಾಲ್‌ನ ಖಾಜಿಗುಂಡ್‌ನಲ್ಲಿ 20 ನಿಮಿಷಗಳ ಕಾಲ ಯಾತ್ರೆಯನ್ನು ನಿಲ್ಲಿಸಲಾಗಿತ್ತು.

|
Google Oneindia Kannada News

ಭಾರತ್ ಜೋಡೋ ಯಾತ್ರೆಯಲ್ಲಿ ಯಾತ್ರೆಯಲ್ಲಿ ಭದ್ರತಾ ಲೋಪವಾಗಿದೆ ಎಂದು ಕೆಸಿ ವೇಣುಗೋಪಾಲ್ ಆರೋಪಿಸಿದ್ದಾರೆ. ಹೀಗಾಗಿ ಜಮ್ಮು ಮತ್ತು ಕಾಶ್ಮೀರದ ಬನಿಹಾಲ್‌ನ ಖಾಜಿಗುಂಡ್‌ನಲ್ಲಿ 20 ನಿಮಿಷಗಳ ಕಾಲ ಯಾತ್ರೆಯನ್ನು ನಿಲ್ಲಿಸಲಾಗಿತ್ತು. ಯಾತ್ರೆಗೆ ಹೆಚ್ಚಿನ ಭದ್ರತೆ ಒದಗಿಸದ ಕಾರಣ ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅವರಿಗೆ ಹೆಚ್ಚಿನ ಭದ್ರತೆ ಒದಗಿಸುವವರೆಗೆ ಯಾತ್ರೆ ಆರಂಭಿಸುವುದಿಲ್ಲ ಎಂದು ಮುಖಂಡರು ಕಿಡಿ ಕಾರಿದರು. ಕೆಲ ಸಮಯದ ನಂತರ ಭಾರತ್ ಜೋಡೋ ಯಾತ್ರೆ ಪುನರಾರಂಭವಾಯಿತು.

ರಾಂಬನ್ ಜಿಲ್ಲೆಯ ಬನಿಹಾಲ್‌ನಿಂದ ಕಾಶ್ಮೀರ ಪ್ರವೇಶಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನಾಯಕ ಒಮರ್ ಅಬ್ದುಲ್ಲಾ ಅವರು ಭಾಗಿಯಾದರು. ಬಳಿಕ ಟ್ರಕ್ ಯಾರ್ಡ್‌ನಲ್ಲಿ ಇಬ್ಬರು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಿದರು.

ಒಮರ್ ಅಬ್ದುಲ್ಲಾ ಶ್ರೀನಗರದಿಂದ 120 ಕಿಲೋಮೀಟರ್ ದೂರದಲ್ಲಿರುವ ರಾಂಬನ್ ಜಿಲ್ಲೆಯ ಬನಿಹಾಲ್‌ಗೆ ಆಗಮಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ರಾಹುಲ್ ಗಾಂಧಿಯವರ ಕಾರ್ಯ ವೈಖರಿಯನ್ನು ಹೊಗಳಿದರು. "ನಮ್ಮ ಧ್ವನಿ ದೆಹಲಿವರೆಗೂ ಕೇಳಿಸುವುದಿಲ್ಲ. ಸ್ವತಃ ಕಾಶ್ಮೀರಿ ಪಂಡಿತ್ ಕುಟುಂಬಕ್ಕೆ ಸೇರಿದ ರಾಹುಲ್ ಗಾಂಧಿ ಇಲ್ಲಿಗೆ ಆಗಮಿಸಿದ್ದಾರೆ. ಹೀಗಾಗಿ ನಾವು ಅವರನ್ನು ಪ್ರೀತಿಯಿಂದ ಸ್ವಾಗತಿಸುತ್ತೇವೆ' ಎಂದರು. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅಬ್ದುಲ್ಲಾ, ಅವರು ಹೇಡಿಗಳು. ಇಂದು ಇಲ್ಲಿ ಚುನಾವಣೆ ನಡೆಸಿದರೆ, ಅವರಿಗೆ ಮಾತ್ರ ಅವಕಾಶ ಸಿಗುವುದಿಲ್ಲ'' ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದರು.

ಕಾಶ್ಮೀರದಲ್ಲಿ ಭದ್ರತೆ ಲೋಪದ ಆರೋಪ

ಕಾಶ್ಮೀರದಲ್ಲಿ ಭದ್ರತೆ ಲೋಪದ ಆರೋಪ

ವಿಡಿಯೋದಲ್ಲಿ ರಾಹುಲ್ ಗಾಂಧಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಒಟ್ಟಿಗೆ ಯಾತ್ರೆಯಲ್ಲಿ ನಡೆಯುತ್ತಿರುವುದು ಕಂಡುಬಂದಿದೆ. ಇಬ್ಬರೂ ಬಿಳಿ ಟೀ ಶರ್ಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಭದ್ರತಾ ಕಾರಣಗಳಿಂದ ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಕಾಂಗ್ರೆಸ್ ನಿಲ್ಲಿಸಿದೆ. ಸೂಕ್ತ ಭದ್ರತೆ ನೀಡುತ್ತಿಲ್ಲ ಎಂಬ ಆರೋಪವನ್ನು ಕಾಂಗ್ರೆಸ್ ತಂದಿದೆ.

ರಾಹುಲ್ ಗಾಂಧಿ ಜೊತೆ ಓಮರ್ ಅಬ್ದುಲ್ಲಾ ಭಾಗಿ

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಕುರಿತು ಕಾಂಗ್ರೆಸ್‌ನ ನಿಲುವನ್ನು ಪರಿಶೀಲಿಸಲು ಬಯಸುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹೇಳಿದರು. ಭಾರತ್ ಜೋಡೋ ಯಾತ್ರೆಯು ರಾಹುಲ್ ಗಾಂಧಿಯವರ ಇಮೇಜ್ ಅನ್ನು ಸುಧಾರಿಸುವ ಗುರಿಯನ್ನು ಹೊಂದಿಲ್ಲ. ಆದರೆ ದೇಶದ ಪರಿಸ್ಥಿತಿಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ದೇಶದ ಚಿತ್ರಣದ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದರಿಂದ ಯಾತ್ರೆಯಲ್ಲಿ ಪಾಲ್ಗೊಂಡಿದ್ದೇನೆ. ನಾವು ವ್ಯಕ್ತಿಯ ಚಿತ್ರಣಕ್ಕಾಗಿ ಸೇರಿಲ್ಲ, ಆದರೆ ದೇಶದ ಚಿತ್ರಕ್ಕಾಗಿ ಸೇರಿದ್ದೇವೆ ಎಂದು ಅವರು ಹೇಳಿದರು.

ಬಿಜೆಪಿ ವಿರುದ್ಧ ಕಿಡಿಕಾರಿದ ಮಾಜಿ ಸಿಎಂ

ಬಿಜೆಪಿ ವಿರುದ್ಧ ಕಿಡಿಕಾರಿದ ಮಾಜಿ ಸಿಎಂ

ಗಾಂಧಿಯವರು ವೈಯಕ್ತಿಕ ಕಾರಣಗಳಿಗಾಗಿ ಯಾತ್ರೆಯನ್ನು ಪ್ರಾರಂಭಿಸಲಿಲ್ಲ, ಆದರೆ ದೇಶದಲ್ಲಿ ಕೋಮು ಉದ್ವಿಗ್ನತೆಯನ್ನು ಸೃಷ್ಟಿಸುವ ಮತ್ತು ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಪ್ರಯತ್ನಗಳ ಬಗ್ಗೆ ಅವರ ಕಾಳಜಿಯಿಂದಾಗಿ ಯಾತ್ರೆಯನ್ನು ಆರಂಭಿಸಿದರು ಎಂದು ಅವರು ಹೇಳಿದರು.

"ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಆಡಳಿತ ಪಕ್ಷವು ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಮುಸ್ಲಿಂ ಸಮುದಾಯದಿಂದ ಒಬ್ಬ ಸಂಸತ್ ಸದಸ್ಯರನ್ನು ಹೊಂದಿಲ್ಲ. ಇದು ಅವರ ಮನೋಭಾವವನ್ನು ತೋರಿಸುತ್ತದೆ" ಎಂದು ಅವರು ಹೇಳಿದರು. 370ನೇ ವಿಧಿ ರದ್ದತಿ ಕುರಿತು ಕಾಂಗ್ರೆಸ್ ನಿಲುವಿನ ಕುರಿತು ಮಾತನಾಡಿದ ಅಬ್ದುಲ್ಲಾ, 370ನೇ ವಿಧಿ ಮರುಸ್ಥಾಪನೆಗಾಗಿ ನಾವು ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತೇವೆ. ಅರ್ಜಿಯ ವಿಚಾರಣೆಯಲ್ಲಿ ಸರ್ಕಾರ ಗೋಲ್ಮಾಲ್ ಮಾಡುತ್ತಿದೆ" ಎಂದರು.

ಯಾತ್ರೆಗೆ ಭದ್ರತೆ ನೀಡುವಂತೆ ಕೇಂದ್ರಕ್ಕೆ ಒತ್ತಾಯ

ಯಾತ್ರೆಗೆ ಭದ್ರತೆ ನೀಡುವಂತೆ ಕೇಂದ್ರಕ್ಕೆ ಒತ್ತಾಯ

ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆದು ಎಂಟು ವರ್ಷಗಳಾಗಿವೆ. "ಕಳೆದ ವಿಧಾನಸಭಾ ಚುನಾವಣೆ 2014 ರಲ್ಲಿ ನಡೆದಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಚುನಾವಣೆಗಳ ನಡುವೆ ಇದು ಸುದೀರ್ಘ ಅವಧಿಯಾಗಿದೆ. ಉಗ್ರಗಾಮಿತ್ವದ ಉತ್ತುಂಗದಲ್ಲಿಯೂ ಇದು ಇರಲಿಲ್ಲ. ಜಮ್ಮು ಮತ್ತು ಕಾಶ್ಮೀರದ ಜನರು ಚುನಾವಣೆಗೆ ಭಿಕ್ಷೆ ಬೇಡಬೇಕೆಂದು ಸರ್ಕಾರ ಬಯಸುತ್ತದೆ. ನಾವು ಭಿಕ್ಷುಕರಲ್ಲ" ಎಂದು ಓಮರ್ ಅಬ್ದುಲ್ಲಾ ಆಕ್ರೋಶಗೊಂಡರು.

ಕಾಂಗ್ರೆಸ್ ಸಂಸದ ಕೆಸಿ ವೇಣುಗೋಪಾಲ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಯಾತ್ರೆಯಲ್ಲಿ ಭಾಗವಹಿಸುವ ಕಾಂಗ್ರೆಸ್ ನಾಯಕರ ಭದ್ರತೆಯನ್ನು ನೀಡಲು ಕೇಂದ್ರಕ್ಕೆ ಒತ್ತಾಯಿಸಿದ್ದಾರೆ. ಆದರೆ, ಸ್ವಲ್ಪ ಹೊತ್ತಿನ ಬಳಿಕ ಯಾತ್ರೆ ಪುನರಾರಂಭವಾಯಿತು.

English summary
KC Venugopal has alleged security lapses in the Bharat Jodo Yatra. Thus, the Yatra was stopped for 20 minutes at Qazigund, Banihal, Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X