ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದೊಂದು ದಿನ ಭಾರತಕ್ಕೆ ಭದ್ರತೆಯ ಸಮಸ್ಯೆ ಎದುರಾಗಬಹುದು ಎಂದ ರಾಜನಾಥ್ ಸಿಂಗ್

|
Google Oneindia Kannada News

ನವದೆಹಲಿ, ಡಿಸೆಂಬರ್ 18: ಮುಂದೊಂದು ದಿನ ಭಾರತಕ್ಕೆ ಭದ್ರತೆಯ ಸಮಸ್ಯೆ ಎದುರಾಗಬಹುದು ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಹೇಳಿದ್ದಾರೆ.

ಅವರು ಇಂದು ಮಿಲಿಟರಿ ಸಾಹಿತ್ಯ ಸಮ್ಮೇಳನ-2020ನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡುತ್ತಾ, ಇನ್ನೊಂದು ದೃಷ್ಟಿಕೋನದ ಮೂಲಕವೂ ಈ ಕಾರ್ಯಕ್ರಮ ಬಹಳ ಮುಖ್ಯವಾಗುತ್ತದೆ. ಕಾಲ ಬದಲಾಗುತ್ತಿದ್ದಂತೆ ನಮ್ಮ ದೇಶದ ಮೇಲಾಗುತ್ತಿರುವ ಬೆದರಿಕೆಗಳು ಮತ್ತು ಯುದ್ಧದ ರೀತಿಗಳು ಬದಲಾಗುತ್ತಿರುತ್ತವೆ.

ಲಡಾಖ್‌ ಅಪ್ರಚೋದಿತ ದಾಳಿ, ಜಗತ್ತಿನ ಬದಲಾವಣೆ ತೋರಿಸುತ್ತದೆ: ರಾಜನಾಥ್ ಸಿಂಗ್ಲಡಾಖ್‌ ಅಪ್ರಚೋದಿತ ದಾಳಿ, ಜಗತ್ತಿನ ಬದಲಾವಣೆ ತೋರಿಸುತ್ತದೆ: ರಾಜನಾಥ್ ಸಿಂಗ್

ಭವಿಷ್ಯದಲ್ಲಿ ನಾವು ಹೆಚ್ಚೆಚ್ಚು ಭದ್ರತೆ ಕುರಿತ ವಿಷಯಗಳಿಗೆ ಆದ್ಯತೆ ನೀಡಬೇಕಾಗಬಹುದು ಎಂದು ಅಭಿಪ್ರಾಯಪಟ್ಟರು. ಮಿಲಿಟರಿ ಸಾಹಿತ್ಯವನ್ನು ಸಾಮಾನ್ಯ ಜನತೆಯೊಂದಿಗೆ ಸಂಪರ್ಕಿಸುವ ಬಗ್ಗೆ ನನಗೆ ಅತೀವ ಆಸಕ್ತಿಯಿದೆ, ನಮ್ಮ ಮುಂದಿನ ಜನಾಂಗ ದೇಶದ ಇತಿಹಾಸದ ಬಗ್ಗೆ ಅರ್ಥ ಮಾಡಿಕೊಳ್ಳಲು, ಅದರಲ್ಲೂ ವಿಶೇಷವಾಗಿ ಗಡಿಭಾಗಗಳ ಬಗ್ಗೆ ತಿಳಿದುಕೊಳ್ಳಲು ಇದು ಸಹಾಯವಾಗಬಹುದು ಎಂದು ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಗಡಿಭಾಗದ ಇತಿಹಾಸ ಸಾರುತ್ತಿದೆ ಸಮಿತಿ

ಗಡಿಭಾಗದ ಇತಿಹಾಸ ಸಾರುತ್ತಿದೆ ಸಮಿತಿ

ನಾನು ರಕ್ಷಣಾ ಇಲಾಖೆ ಸಚಿವನಾದ ನಂತರ ಸಮಿತಿಯನ್ನು ರಚಿಸಿದೆ. ಅದು ನಮ್ಮ ಗಡಿಭಾಗದ ಇತಿಹಾಸ ಮತ್ತು ಅದಕ್ಕೆ ಸಂಬಂಧಪಟ್ಟ ಯುದ್ಧಗಳ ಬಗ್ಗೆ ಜನರಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಆಫ್‌ಲೈನ್ ಆನ್‌ಲೈನ್ ಸಂಶೋಧನೆಗಳು

ಆಫ್‌ಲೈನ್ ಆನ್‌ಲೈನ್ ಸಂಶೋಧನೆಗಳು

ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿದಂತೆ ಆಫ್‌ಲೈನ್ ಮತ್ತು ಆನ್‌ಲೈನ್ ಸಂಶೋಧನೆಗಳು, ನಿಯತಕಾಲಿಕೆಗಳಿಂದಾಗಿ ಈ ವಿಷಯಗಳಿಗೆ ಸಂಬಂಧಿಸಿದಂತೆ ಆಸಕ್ತಿ ಹೊಂದಿರುವ ಜನರನ್ನು ತಲುಪಲು ಸಾಧ್ಯವಾಗುತ್ತದೆ.

ಪುಸ್ತಕಗಳ ಮೂಲಕ ವಿಷಯ ರವಾನೆ

ಪುಸ್ತಕಗಳ ಮೂಲಕ ವಿಷಯ ರವಾನೆ

ಇಲ್ಲಿ ಜನರು ಪುಸ್ತಕಗಳ ಮೂಲಕ ಸೇನೆಗೆ ಸಂಬಂಧಿಸಿದ ಮಾಹಿತಿ ಪಡೆಯಬಹುದು, ಅಧಿಕಾರಿಗಳು ಮತ್ತು ಸೈನಿಕರೊಂದಿಗೆ ಮಾತುಕತೆ ನಡೆಸುವ ಮೂಲಕ ಸೇನಾ ಸಿಬ್ಬಂದಿಯ ಅನುಭವಗಳ ಬಗ್ಗೆಯೂ ತಿಳಿದುಕೊಳ್ಳಬಹುದು.

ದೇಶದ ಬಗ್ಗೆ ಜನರಲ್ಲಿ ಪ್ರೀತಿಯ ಭಾವನೆ ಮೂಡಿಸಿದ ಸಾಹಿತ್ಯ

ದೇಶದ ಬಗ್ಗೆ ಜನರಲ್ಲಿ ಪ್ರೀತಿಯ ಭಾವನೆ ಮೂಡಿಸಿದ ಸಾಹಿತ್ಯ

ನಮ್ಮ ದೇಶದಲ್ಲಿ ಮೊದಲಿನಿಂದಲೂ ರಾಷ್ಟ್ರೀಯತೆಯ ಗುಂಗಿನಲ್ಲಿಯೇ ಸಾಹಿತ್ಯವನ್ನು ರಚಿಸುವುದನ್ನು ನೋಡಿದ್ದೇವೆ.ಅದು ಹಿಂದು, ಪಂಜಾಬಿ, ಅಥವಾ ಗುಜರಾತಿ ಯಾವುದೇ ಆಗಿರಲಿ, ಬಹುತೇಕ ಎಲ್ಲಾ ಭಾಷೆಯಲ್ಲೂ ಬರಹಗಳು ಜಾಗೃತಗೊಂಡಿವೆ. ಜನರಲ್ಲಿ ದೇಶದ ಬಗ್ಗೆ ಪ್ರೀತಿಯ ಭಾವನೆಯನ್ನು ಬೆಳಸಿದೆ.

English summary
Defence Minister Rajnath Singh on Friday said that with changing times, the nature of threats and wars is also changing, adding that in the future, more security-related issues may arise before India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X