ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2ನೇ ಬಾರಿ ಪೇಪರ್ ಲೆಸ್ ಕೇಂದ್ರ ಬಜೆಟ್: ಅಂಗೈಯಲ್ಲೇ ಪ್ರತಿ ಪಡಿಯಿರಿ

|
Google Oneindia Kannada News

ನವದೆಹಲಿ, ಜನವರಿ 28: ಭಾರತದಲ್ಲಿ 2022-23ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಗಮನದಲ್ಲಿಟ್ಟುಕೊಂಡು ಎರಡನೇ ಬಾರಿ ಕಾಗದರಹಿತ ಬಜೆಟ್ ಮಂಡನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ.

ನಾಲ್ಕನೇ ಬಾರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದು, ಈ ಪೈಕಿ ಎರಡನೇ ಬಾರಿ ಕಾಗದರಹಿತವಾದ ಬಜೆಟ್ ಮಂಡನೆ ಮಾಡಲಿದ್ದಾರೆ. ಕೇಂದ್ರ ಬಜೆಟ್ ಪ್ರತಿಯು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತದೆ. ಕಳೆದ ಬಾರಿ ಆಯವ್ಯಯಕ್ಕೆ ಹೋಲಿಸಿದರೆ 2022-23ನೇ ಸಾಲಿನ ಬಜೆಟ್ ಹಲವು ವಿಶೇಷತೆಗಳನ್ನು ಒಳಗೊಂಡಿದೆ.

Union Budget 2021: ಇತಿಹಾಸದಲ್ಲೇ ಮೊದಲ ಬಾರಿ Union Budget 2021: ಇತಿಹಾಸದಲ್ಲೇ ಮೊದಲ ಬಾರಿ "ಕಾಗದರಹಿತ ಬಜೆಟ್"

ಡಿಜಿಟಲ್​ ರೂಪಕ್ಕೆ ಮತ್ತಷ್ಟು ಪುಷ್ಠಿ ನೀಡುವ ನಿಟ್ಟಿನಲ್ಲಿ ಮೊಬೈಲ್​ ಅಪ್ಲಿಕೇಶನ್​​​ ಅನ್ನು ಸಿದ್ಧಪಡಿಸಲಾಗಿದೆ. 'ಯೂನಿಯನ್​ ಬಜೆಟ್​' ಹೆಸರಿನಲ್ಲಿ ಮೊಬೈಲ್​ ಅಪ್ಲಿಕೇಶನ್​ ಲಭ್ಯವಿರಲಿದ್ದು, ರಾಷ್ಟ್ರೀಯ ಮಾಹಿತಿ, ಎಲೆಕ್ಟ್ರಾನಿಕ್ಸ್​ ಮತ್ತು ಐಟಿ ಸಚಿವಾಲಯ ಇದನ್ನು ಅಭಿವೃದ್ಧಿಪಡಿಸಿದೆ. ಸಂಸತ್​​ನಲ್ಲಿ ಬಜೆಟ್ ಮಂಡನೆಯಾದ ಬಳಿಕ ಈ ಅಪ್ಲಿಕೇಶನ್‌ನಲ್ಲಿ ಪ್ರತಿಯು ಲಭ್ಯವಾಗಲಿದೆ.

Second Time Union Budget 2022 to be presented in paperless form; to be available on mobile app

ನಿಮ್ಮ ಅಂಗೈಯಲ್ಲಿ ಬಜೆಟ್ ಪ್ರತಿ:

ಆಂಡ್ರಾಯ್ಡ್ ಮತ್ತು ಐಓಎಸ್ ಮೊಬೈಲ್ ಹೊಂದಿರುವ ಬಳಕೆದಾರರು ತಮ್ಮ ಅಂಗೈಯಲ್ಲೇ ಕೇಂದ್ರ ಬಜೆಟ್ ಪ್ರತಿಯನ್ನು ಪಡೆದುಕೊಳ್ಳಬಹುದು. ವೆಬ್​​ ಪೋರ್ಟಲ್​ ಮೂಲಕ ಎಲ್ಲ ದಾಖಲೆ ಡೌನ್​​ಲೋಡ್​ ಮಾಡಬಹುದಾಗಿದ್ದು, ಇಂಗ್ಲಿಷ್​ ಮತ್ತು ಹಿಂದಿಯಲ್ಲಿ ಮೊಬೈಲ್​ ಅಪ್ಲಿಕೇಶನ್ ಬಳಕೆ ಮಾಡಲು ಅವಕಾಶವಿದೆ.

ಪ್ರಧಾನಿ ಮೋದಿ ಸರ್ಕಾರದ 10ನೇ ಆಯವ್ಯಯ:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಕೇಂದ್ರ ಬಜೆಟ್ 2022-23 ಅನ್ನು ಮಂಡಿಸಲಿದ್ದಾರೆ. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ 10ನೇ ಬಜೆಟ್ ಮತ್ತು ಸೀತಾರಾಮನ್ ಮಂಡಿಸುತ್ತಿರುವ ನಾಲ್ಕನೇ ಬಜೆಟ್ ಆಗಿದೆ. ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾತನಾಡುವ ಮೂಲಕ ಸಂಸತ್ತಿನಲ್ಲಿ ಬಜೆಟ್ ಅಧಿವೇಶನವನ್ನು ಪ್ರಾರಂಭಿಸಲಿದ್ದಾರೆ. ಬಜೆಟ್ ಅಧಿವೇಶನದ ಮೊದಲಾರ್ಧವು ಜನವರಿ 31 ರಿಂದ ಫೆಬ್ರವರಿ 11 ರವರೆಗೆ ನಡೆಯುತ್ತದೆ, ದ್ವಿತೀಯಾರ್ಧವು ಮಾರ್ಚ್ 14 ರಿಂದ ಏಪ್ರಿಲ್ 8 ರವರೆಗೆ ಇರುತ್ತದೆ. ರಾಜ್ಯಸಭೆಯಲ್ಲಿ ಬಜೆಟ್ ಮಂಡಿಸುವ ಮೊದಲು ಸಂಸತ್ತಿನ ಕೆಳಮನೆ ಎನಿಸಿರುವ ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ. ಈ ಸಲದ ಕೇಂದ್ರ ಬಜೆಟ್​ 2022ರ ಮೇಲೆ ಉದ್ಯೋಗಿಗಳು, ಉದ್ಯಮಿಗಳು, ಕೃಷಿಕರು ಹಾಗೂ ಸಾಮಾನ್ಯ ಜನರು ಹೆಚ್ಚಿನ ನಿರೀಕ್ಷೆಗಳನ್ನಿಟ್ಟುಕೊಂಡಿದ್ದು, ಆರೋಗ್ಯ ವಲಯ ಹಾಗೂ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನದ ನೀಡುವ ಸಾಧ್ಯತೆಯಿದೆ.

Second Time Union Budget 2022 to be presented in paperless form; to be available on mobile app

ಪೇಪರ್ ಲೆಸ್ ಬಜೆಟ್ ಮಂಡನೆ ಹಿಂದಿನ ಉದ್ದೇಶ:

ಕೇಂದ್ರ ಸರ್ಕಾರವು 2021-22ನೇ ಸಾಲಿನಲ್ಲಿ ಮೊದಲ ಬಾರಿಗೆ ಪೇಪರ್ ಲೆಸ್ ರೂಪದಲ್ಲಿ ಬಜೆಟ್ ಮಂಡನೆ ಮಾಡಿತ್ತು. ಇದೀಗ ಎರಡನೇ ಬಾರಿ 2022-23ನೇ ಸಾಲಿನ ಬಜೆಟ್ ಅನ್ನು ಪೇಪರ್ ಲೆಸ್ ಆಗಿ ಹಾಗೂ ಡಿಜಿಟಲ್ ರೂಪದಲ್ಲಿ ಮಂಡಿಸುವುದಕ್ಕೆ ನಿರ್ಧರಿಸಲಾಗಿದೆ.

ಪೇಪರ್ ಲೆಸ್ ಬಜೆಟ್ ಮಂಡನೆ ಹಿಂದೆ ಹಲವು ಕಾರಣಗಳಿವೆ. ಈ ಹಿಂದೆ ಬಜೆಟ್ ನ ಪ್ರತಿಗಳನ್ನು ಮುದ್ರಣ ರೂಪದಲ್ಲಿ ಪಡೆಯಲು ಹಲವು ಮಂದಿ ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ ನಿರ್ವಹಿಸಬೇಕಾದ ಅವಶ್ಯಕತೆಯಿತ್ತು. ಬಜೆಟ್ ಮಂಡನೆಯ 15 ದಿನಗಳ ಮುನ್ನವೇ ಮುದ್ರಣ ಕಾರ್ಯ ಆರಂಭ ಮಾಡಬೇಕಿತ್ತು. ಬಜೆಟ್ ದಾಖಲೆಗಳನ್ನು ಮುದ್ರಣ ಮಾಡಿ, ಸೀಲ್ ಮಾಡಿ, ಬಜೆಟ್ ದಿನ ಅವುಗಳನ್ನು ಕಳುಹಿಸುವವರೆಗೂ ಸುಮಾರು 100ಕ್ಕೂ ಹೆಚ್ಚು ಮಂದಿಯನ್ನು ಈ ಮುದ್ರಣಾ ಪ್ರಕ್ರಿಯೆಯಲ್ಲಿ ಬಳಸಿಕೊಳ್ಳಲಾಗುತ್ತಿತ್ತು. ಕೊರೊನಾವೈರಸ್ ಸೋಂಕಿನ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಬಜೆಟ್ ಪ್ರತಿಗಳನ್ನು ಮುದ್ರಣ ಮಾಡುವ ಬದಲು "ಸಾಫ್ಟ್ ಪ್ರತಿ" ವಿದ್ಯುನ್ಮಾನ ಕಾಗದಗಳನ್ನು ನೀಡಲು ತೀರ್ಮಾನಿಸಲಾಗಿದೆ. ಇದರ ಜೊತೆಗೆ ಕಾಗದದ ಮೂಲಕವೂ ಸೋಂಕು ಹರಡುವ ಸಾಧ್ಯತೆಯಿದ್ದು, ಅದನ್ನು ತಡೆಗಟ್ಟಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

Recommended Video

ಮೊಹಮ್ಮದ್ ಶಮಿಗೆ ಟೆಸ್ಟ್ ತಂಡದ ನಾಯಕನಾಗುವ ಆಸೆ | Oneindia Kannada

English summary
Second Time Union Budget 2022 to be presented in paperless form; to be available on mobile app.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X