ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ 2ನೇ ದಿನವೂ ಅಮೆರಿಕಕ್ಕಿಂತ ಭಾರತದಲ್ಲೇ ಹೆಚ್ಚು ಕೊವಿಡ್ ಕೇಸ್!

|
Google Oneindia Kannada News

ದೆಹಲಿ, ಆಗಸ್ಟ್ 04: ಭಾರತದಲ್ಲಿ ಸೋಮವಾರ 50 ಸಾವಿರಕ್ಕಿಂತ ಹೆಚ್ಚು ಕೊವಿಡ್ ಪ್ರಕರಣಗಳು ದಾಖಲಾಗುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ರಾಜ್ಯವಾರು ಅಂಕಿ ಅಂಶಗಳು ಪ್ರಕಟಗೊಂಡಿದ್ದು, ಸೋಮವಾರದ ಒಟ್ಟಾರೆ ಸೋಂಕು 50 ಸಾವಿರ ಗಡಿ ದಾಟಿದೆ ಎಂಬ ಅಂದಾಜು ಸಿಕ್ಕಿದೆ.

Recommended Video

ರಾಮ ಮಂದಿರದಲ್ಲಿ ಬೆರೆಯಲಿದೆ ನೆಲಮಂಗಲ ಮಣ್ಣು | Oneindia Kannada

ಈ ಮೂಲಕ ಸತತ ಎರಡನೇ ದಿನವೂ ಅಮೆರಿಕ ಮತ್ತು ಬ್ರೆಜಿಲ್‌ ದೇಶಗಳನ್ನು ಭಾರತ ಹಿಂದಿಕ್ಕಿದೆ. ಸೋಮವಾರವೂ ಅಮೆರಿಕ-ಬ್ರೆಜಿಲ್‌ ದೇಶವನ್ನು ಹೊಸ ಕೇಸ್ ಹಾಗೂ ಸಾವಿನ ಸಂಖ್ಯೆಯಲ್ಲಿ ಭಾರತ ಹಿಂದಿಕ್ಕಿದೆ.

ಅಮೆರಿಕ, ಬ್ರೆಜಿಲ್ ಹಿಂದಿಕ್ಕಿದ ಭಾರತ: ಹೆಚ್ಚು ಕೇಸ್, ಹೆಚ್ಚು ಸಾವು ಭಾರತದಲ್ಲೇ!ಅಮೆರಿಕ, ಬ್ರೆಜಿಲ್ ಹಿಂದಿಕ್ಕಿದ ಭಾರತ: ಹೆಚ್ಚು ಕೇಸ್, ಹೆಚ್ಚು ಸಾವು ಭಾರತದಲ್ಲೇ!

ಆಗಸ್ಟ್ 3ರಂದು ಅಮೆರಿಕದಲ್ಲಿ 48,622 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಬ್ರೆಜಿಲ್‌ನಲ್ಲಿ 17,988 ಜನರಿಗೆ ಕೊವಿಡ್ ತಗುಲಿದೆ. ಪ್ರಸ್ತುತ ಮೊದಲೆರಡು ಸ್ಥಾನದಲ್ಲಿದ್ದ ಈ ದೇಶಗಳನ್ನು ಭಾರತ ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಏರಿದೆ.

Second Time India Reports The Most No Of Daily Coronavirus Cases In World

ಸಾವಿನ ಸಂಖ್ಯೆಯಲ್ಲೂ ಅಮೆರಿಕ ಹಾಗೂ ಬ್ರೆಜಿಲ್‌ಗಿಂತ ಭಾರತದಲ್ಲೇ ಹೆಚ್ಚು. ಸದ್ಯದ ವರದಿ ಪ್ರಕಾರ, ಭಾರತದಲ್ಲಿ ಸೋಮವಾರ ಸುಮಾರು 800 ಮಂದಿ ಮೃತಪಟ್ಟಿದ್ದಾರೆ. ಅಮೆರಿಕದಲ್ಲಿ ಆಗಸ್ಟ್ 3ರ ಸಾವಿನ ಸಂಖ್ಯೆ 568, ಬ್ರೆಜಿಲ್‌ನಲ್ಲಿ 572 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇಂದಿನ ವರದಿ ಪ್ರಕಾರ ಅಮೆರಿಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4,862,174 ಮೃತಪಟ್ಟವರ ಸಂಖ್ಯೆ 158,929. ಬ್ರೆಜಿಲ್‌ನಲ್ಲಿ ಒಟ್ಟು ಕೊವಿಡ್ ಪ್ರಕರಣ ಸಂಖ್ಯೆ 2,751,665, ಸಾವಿನ ಸಂಖ್ಯೆ 94,702.

English summary
Second time, India reports the most no of daily Coronavirus cases in the world, ahead of USA and Brazil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X