ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'11 ಕೋಟಿ ಜನರಿಗೆ ಕೋವಿಡ್‌ ಲಸಿಕೆಯ 2 ನೇ ಡೋಸ್‌ ಅವಧಿ ಮೀರಿದೆ': ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಅಕ್ಟೋಬರ್‌ 27: ಸುಮಾರು 11 ಕೋಟಿ ಜನರಿಗೆ ಕೊರೊನಾ ಕೊರೊನಾ ಲಸಿಕೆಯ ಎರಡನೇ ಡೋಸ್‌ನ ಅವಧಿ ಮುಗಿದಿದೆ ಎಂದು ಕೇಂದ್ರ ಸರ್ಕಾರದ ಅಂಕಿ ಅಂಶ ತಿಳಿಸಿದೆ. ಸುಮಾರು 11 ಕೋಟಿ ಜನರು ಕೊರೊನಾ ಲಸಿಕೆಯ ಮೊದಲ ಡೋಸ್‌ ಅನ್ನು ಹಾಕಿಸಿಕೊಂಡಿದ್ದಾರೆ. ಈಗ ಎರಡನೇ ಡೋಸ್‌ ಲಸಿಕೆ ಪಡೆಯುವ ಅವಧಿ ಮುಗಿದಿದೆ. ಆದರೆ ಇನ್ನು ಕೂಡಾ ಲಸಿಕೆಯನ್ನು ಹಾಕಿಸಿಕೊಂಡಿಲ್ಲ ಎಂದು ಕೇಂದ್ರ ಸರ್ಕಾರದ ಡೇಟಾವು ಉಲ್ಲೇಖ ಮಾಡಿದೆ.

ಕೊರೊನಾ ವೈರಸ್‌ ಸೋಂಕಿನ ವಿರುದ್ದ ಮೊದಲ ಡೋಸ್‌ ಲಸಿಕೆಯನ್ನು ಪಡೆದ 3.92 ಕೋಟಿಗೂ ಹೆಚ್ಚು ಫಲಾನುಭವಿಗಳು ಕೊರೊನಾ ಲಸಿಕೆಯ ಎರಡನೇ ಡೋಸ್‌ ಅನ್ನು ಆರು ವಾರಗಳು ಕಳೆದರೂ ಕೂಡಾ ಹಾಕಿಸಿಕೊಂಡಿಲ್ಲ. 3.92 ಕೋಟಿಗೂ ಹೆಚ್ಚು ಮಂದಿ ಮೊದಲ ಡೋಸ್‌ ಲಸಿಕೆಯನ್ನು ಪಡೆದು ಆರು ವಾರಗಳು ಕಳೆದಿದೆ ಎಂದು ಡೇಟಾವು ತೋರಿಸಿದೆ.

ಮಕ್ಕಳ ಕೊರೊನಾ ಲಸಿಕೆ ಜೈಕೋವ್-ಡಿ ಬೆಲೆ ಅಂತಿಮಗೊಳಿಸಿದ ಕೇಂದ್ರ ಸರ್ಕಾರಮಕ್ಕಳ ಕೊರೊನಾ ಲಸಿಕೆ ಜೈಕೋವ್-ಡಿ ಬೆಲೆ ಅಂತಿಮಗೊಳಿಸಿದ ಕೇಂದ್ರ ಸರ್ಕಾರ

ಸುಮಾರು 1.57 ಕೋಟಿ ಮಂದಿ ನಾಲ್ಕರಿಂದ ಆರು ವಾರಗಳವರೆಗೆ ಕಳೆದರೂ ಕೂಡಾ ಎರಡನೇ ಡೋಸ್‌ ಲಸಿಕೆಯನ್ನು ಪಡೆದುಕೊಂಡಿಲ್ಲ. ಕೋವಿಶೀಲ್ಡ್ ಅಥವಾ ಕೋವಾಕ್ಸಿನ್‌ನ ಎರಡನೇ ಡೋಸ್‌ ಲಸಿಕೆಯನ್ನು ಪಡೆಯಲು 1.50 ಕೋಟಿಗಿಂತ ಹೆಚ್ಚು ಮಂದಿ ಬಾಕಿ ಆಗಿದ್ದಾರೆ. 1.50 ಕೋಟಿಗಿಂತ ಹೆಚ್ಚು ಮಂದಿ ಮೊದಲ ಡೋಸ್‌ ಲಸಿಕೆಯನ್ನು ಪಡೆದು ನಾಲ್ಕು ವಾರಗಳು ಆಗಿದೆ ಎಂದು ವರದಿಯು ಹೇಳಿದೆ. ಅಲ್ಲದೆ, 3.38 ಕೋಟಿಗೂ ಹೆಚ್ಚು ಜನರು ಸಂಪೂರ್ಣವಾಗಿ ಲಸಿಕೆಯನ್ನು ಪಡೆಯಲು ಎರಡು ವಾರಗಳವರೆಗೆ ವಿಳಂಬ ಮಾಡಿಕೊಂಡಿದ್ದಾರೆ.

Second Dose Of Covid Vaccine Overdue For Around 11 Crore People says Centre

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಬುಧವಾರ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಈ ವಿಷಯವನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯಾ ಚರ್ಚೆ ಮಾಡಿದ್ದಾರೆ. ಎರಡನೇ ಡೋಸ್‌ನ ಅವಧಿ ಮುಗಿದಿದ್ದರೂ ಇನ್ನೂ ಕೂಡಾ ಲಸಿಕೆಯನ್ನು ಪಡೆಯದವರಿಗೆ ಲಸಿಕೆ ನೀಡುವ ಕ್ರಮವನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕೇಂದ್ರ ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ.

ಕೊರೊನಾದಿಂದಾಗಿ ಭಾರತದಲ್ಲಿ ಜನರ ಜೀವಿತಾವಧಿ 2 ವರ್ಷ ಕಡಿತಕೊರೊನಾದಿಂದಾಗಿ ಭಾರತದಲ್ಲಿ ಜನರ ಜೀವಿತಾವಧಿ 2 ವರ್ಷ ಕಡಿತ

ಕೋವಿಶೀಲ್ಡ್‌ ಲಸಿಕೆಯನ್ನು ಪಡೆದವರಿಗೆ ಮೊದಲ ಮತ್ತು ಎರಡನೇ ಡೋಸ್ ನಡುವಿನ ಅಂತರವು 12 ವಾರಗಳು ಆಗಿದೆ. ಹಾಗೆಯೇ ಕೋವಾಕ್ಸಿನ್‌ ಲಸಿಕೆಯನ್ನು ಪಡೆದವರಿಗೆ ಮೊದಲ ಮತ್ತು ಎರಡನೇ ಡೋಸ್ ನಡುವಿನ ಅಂತರವು ನಾಲ್ಕು ವಾರಗಳು ಆಗಿದೆ. ಎರಡೂ ಡೋಸ್‌ ಲಸಿಕೆಯನ್ನು ಪಡೆದರೆ ಮಾತ್ರ ದೇಶದಲ್ಲಿ ಸಂಪೂರ್ಣವಾಗಿ ಕೊರೊನಾ ಲಸಿಕೆಯನ್ನು ಪಡೆಯಲಾಗಿದೆ ಎಂದು ಪರಿಗಣಿಸಲಾಗುತ್ತದೆ.

ಎರಡನೇ ಡೋಸ್‌ ಹಾಕಿಸಿಕೊಳ್ಳದವರು ಅಧಿಕ ಯಾವ ರಾಜ್ಯದಲ್ಲಿ?

ಕೊರೊನಾ ಲಸಿಕೆಯ ಎರಡನೇ ಡೋಸ್‌ನ ಅವಧಿ ಮುಗಿದಿದ್ದರೂ ಕೂಡಾ ಇನ್ನು ಕೂಡಾ ಎರಡನೇ ಡೋಸ್‌ ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಳ್ಳದವರು ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ತಾನ, ಮಹಾರಾಷ್ಟ್ರ ಹಾಗೂ ಬಿಹಾರದಲ್ಲಿ ಇಂತಹ 49 ಶೇಕಡದಷ್ಟು ಮಂದಿ ಇದ್ದಾರೆ ಎಂದು ವರದಿಯು ಹೇಳಿದೆ. ಈ ನಿಟ್ಟಿನಲ್ಲಿ ಕೊರೊನಾ ಲಸಿಕೆಯ ಎರಡನೇ ಡೋಸ್‌ ಪಡೆಯವರಿಗೆ ಹೆಚ್ಚಿನ ಆದ್ಯತೆಯನ್ನು ನೀಡುವಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯಾ ಸೂಚನೆ ನೀಡಿ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿದೆ.

ದೇಶದ ಒಂಬತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಶೇಕಡ 76 ಮಂದಿ ವಯಸ್ಕರು ಕೊರೊನಾ ಲಸಿಕೆಯ ಎರಡನೇ ಡೋಸ್‌ ಅನ್ನು ಪಡೆದುಕೊಂಡಿದ್ದಾರೆ. ಹನ್ನೊಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಎರಡನೇ ಡೋಸ್‌ ಲಸಿಕೆಯನ್ನು ಶೇಕಡ 50 ರಷ್ಟು ಜನರಿಗೆ ನೀಡುವಲ್ಲಿ ಸಫಲವಾಗಿದೆ. ಲಕ್ಷದ್ವೀಪ, ಸಿಕ್ಕಿಂ, ಗೋವಾ, ಲಡಾಖ್‌, ಅಂಡಮಾನ್‌ ಹಾಗೂ ನಿಕೋಬಾರ್‌ ದ್ವೀಪ, ಚಂಡೀಗಢ, ಹಿಮಾಚಲ ಪ್ರದೇಶ, ಮಿಜೋರಾಂ, ದಮನ್ ಮತ್ತು ದಿಯು, ಅರುಣಾಚಲ ಪ್ರದೇಶ ಹಾಗೂ ಜಮ್ಮು ಕಾಶ್ಮೀರದಲ್ಲಿ ಶೇಕಡ 50 ರಷ್ಟು ಜನರಿಗೆ ಎರಡೂ ಡೋಸ್‌ ಲಸಿಕೆಯನ್ನು ನೀಡಲಾಗಿದೆ. ದೇಶದ ಶೇಕಡ 32 ರಷ್ಟು ಮಂದಿ ವಯಸ್ಕರಿಗೆ ಅಂದರೆ 94 ಕೋಟಿ ವಯಸ್ಕರಿಗೆ ಎರಡನೇ ಡೋಸ್‌ ಕೋವಿಡ್‌ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

Recommended Video

ಟೀಂ ಇಂಡಿಯಾ ಆಟಗಾರರಿಗೆ ಖಡಕ್ ಅಭ್ಯಾಸ ಮಾಡಿಸಿದ MS ಧೋನಿ | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
Second Dose Of Covid Vaccine Overdue For Around 11 Crore People says Centre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X