ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯುಪಡೆಗೆ ಶೀಘ್ರದಲ್ಲಿಯೇ ಮತ್ತೆ 3-4 ರಫೇಲ್ ಸೇರ್ಪಡೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 16: ಚೀನಾದೊಂದಿಗಿನ ಗಡಿ ಬಿಕ್ಕಟ್ಟಿನ ನಡುವೆ ಭಾರತೀಯ ವಾಯುಪಡೆಯ ಬಳಿ ಇರುವ ಅತ್ಯಾಧುನಿಕ ತಂತ್ರಜ್ಞಾನದ ರಫೇಲ್ ಯುದ್ಧ ವಿಮಾನಗಳ ಶಕ್ತಿ ಹೆಚ್ಚಳವಾಗಲಿದೆ. ಹರಿಯಾಣದ ಅಂಬಾಲಾದಲ್ಲಿರುವ ವಾಯುನೆಲೆಗೆ ನವೆಂಬರ್ ಮೊದಲ ವಾರದಲ್ಲಿ 3-4 ರಫೇಲ್ ಯುದ್ಧ ವಿಮಾನಗಳು ಸೇರಿಕೊಳ್ಳಲಿವೆ.

ಇದು ಐಎಎಫ್‌ಗೆ ಸೇರ್ಪಡೆಯಾಗಲಿರುವ 36 ಯುದ್ಧ ವಿಮಾನಗಳ ಪೈಕಿ, ಎರಡನೆಯ ಬ್ಯಾಚ್ ಆಗಲಿದೆ. ಫ್ರಾನ್ಸ್‌ ಡಸಾಲ್ಟ್ ಏವಿಯೇಷನ್ ನಿರ್ಮಾಣದ ರಫೇಲ್ ಯುದ್ಧ ವಿಮಾನಗಳ ಪೈಕಿ ಐದು ವಿಮಾನಗಳು ಮೊದಲ ಬ್ಯಾಚ್‌ನಲ್ಲಿ ಜುಲೈ 28ರಂದು ಭಾರತಕ್ಕೆ ಬಂದಿದ್ದವು. ಅವುಗಳನ್ನು ಸೆಪ್ಟೆಂಬರ್ 10ರಂದು ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿತ್ತು.

ರಫೇಲ್ ಜೆಟ್ ಆಫ್‌ಸೆಟ್ ತಂತ್ರಜ್ಞಾನ ಹಸ್ತಾಂತರಿಸದ ಡಸಾಲ್ಟ್: ಸಿಎಜಿ ವರದಿರಫೇಲ್ ಜೆಟ್ ಆಫ್‌ಸೆಟ್ ತಂತ್ರಜ್ಞಾನ ಹಸ್ತಾಂತರಿಸದ ಡಸಾಲ್ಟ್: ಸಿಎಜಿ ವರದಿ

ಈ ವಿಮಾನಗಳ ಸೇರ್ಪಡೆಯೊಂದಿಗೆ ಐಎಎಫ್, ಪ್ರಸ್ತುತದ ಉದ್ವಿಗ್ನ ಸನ್ನಿವೇಶದ ಮಧ್ಯೆ ಇನ್ನು ಕೆಲವೇ ದಿನಗಳಲ್ಲಿ ಒಟ್ಟು 8-9 ಅತ್ಯಾಧುನಿಕ ಸಾಮರ್ಥ್ಯದ ಯುದ್ಧ ವಿಮಾನಗಳ ಕಾರ್ಯಾಚರಣೆ ಶುರುಮಾಡಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

 Second Batch Of Rafale Fighter Jets To Join Indian Air Force In November First Week

ರಫೇಲ್ ಯುದ್ಧ ವಿಮಾನ ಹಾರಿಸಲಿದ್ದಾರೆ ಮೊದಲ ಮಹಿಳಾ ಪೈಲಟ್ ಶಿವಾಂಗಿರಫೇಲ್ ಯುದ್ಧ ವಿಮಾನ ಹಾರಿಸಲಿದ್ದಾರೆ ಮೊದಲ ಮಹಿಳಾ ಪೈಲಟ್ ಶಿವಾಂಗಿ

ರಫೇಲ್ ಯುದ್ಧ ವಿಮಾನಗಳು ಈಗಾಗಲೇ ಕಾರ್ಯಾಚರಣೆ ನಡೆಸುತ್ತಿವೆ. ಲಡಾಖ್‌ನ ಸಂಘರ್ಷ ಪೀಡಿತ ಭಾಗದಲ್ಲಿ ಅವುಗಳನ್ನು ನಿಯೋಜಿಸಲಾಗಿದೆ. ಐಎಎಫ್‌ಗೆ ಸೇರ್ಪಡೆಯಾದ ಕೆಲವೇ ದಿನಗಳಲ್ಲಿ ಗಡಿ ಭಾಗದ ಕಾರ್ಯಾಚರಣೆಗಳಲ್ಲಿ ತೊಡಗಿಸಲಾಗಿದೆ.

English summary
Second batch of Rafale Fighter Jets to join Indian Air Force in November first week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X