ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

BBC documentary on PM Modi : ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಪಿಎಂ ಮೋದಿ ವರ್ಸಸ್ ಕಾಶ್ಮೀರ ಫೈಲ್‌ ಚಿತ್ರ ಪ್ರದರ್ಶನ

ಪಿಎಂ ಮೋದಿ ಕುರಿತ ಸಾಕ್ಷ್ಯಚಿತ್ರದ ಜೊತೆಗೆ ಪೈಪೋಟಿಯಾಗಿ 'ದಿ ಕಾಶ್ಮೀರ ಫೈಲ್‌' ಚಿತ್ರ ಪ್ರದರ್ಶನ ಮಾಡಿರುವುದು ಬೆಳಕಿಗೆ ಬಂದಿದೆ. ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಈ ಘಟನೆ ನಡೆದಿದೆ.

|
Google Oneindia Kannada News

ಪಿಎಂ ಮೋದಿ ಕುರಿತ ಸಾಕ್ಷ್ಯಚಿತ್ರದ ಜೊತೆಗೆ ಪೈಪೋಟಿಯಾಗಿ 'ದಿ ಕಾಶ್ಮೀರ ಫೈಲ್‌' ಚಿತ್ರ ಪ್ರದರ್ಶನ ಮಾಡಿರುವುದು ಬೆಳಕಿಗೆ ಬಂದಿದೆ. ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಈ ಘಟನೆ ನಡೆದಿದೆ. ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಗುರುವಾರ ಪ್ರಧಾನಿ ಮೋದಿ ಅವರ ಬಿಬಿಸಿ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಆಯೋಜಿಸಿತ್ತು. ಆದರೆ ಇದೇ ವೇಳೆ ಆರ್‌ಎಸ್‌ಎಸ್-ಸಂಯೋಜಿತ ಎಬಿವಿಪಿ ಕ್ಯಾಂಪಸ್‌ನಲ್ಲಿ ವಿವಾದಾತ್ಮಕ ಚಲನಚಿತ್ರ ದಿ ಕಾಶ್ಮೀರ್ ಫೈಲ್ಸ್ ಅನ್ನು ಪ್ರದರ್ಶಿಸಿದೆ ಎನ್ನಲಾಗುತ್ತಿದೆ. ಇದರಿಂದಾಗಿ ಈ ಎರಡು ಚಿತ್ರಗಳ ಪ್ರದರ್ಶನ ವಿದ್ಯಾರ್ಥಿಗಳ ನಡುವೆ ದ್ವೇಷದ ಭಾವನೆಗಳನ್ನು ಹೆಚ್ಚುಸುತ್ತಿವೆಯೆ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಗಣರಾಜ್ಯೋತ್ಸವದ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದಲ್ಲಿ ಮೋದಿ ಕುರಿತ ಸಾಕ್ಷ್ಯಚಿತ್ರದ ಪ್ರದರ್ಶನ ಯಶಸ್ವಿಯಾಗಿದೆ. ಬಿಬಿಸಿ ನಿರ್ಮಿಸಿದ ವಿವಾದಾತ್ಮಕ ಎರಡು ಭಾಗಗಳ ಸರಣಿಯನ್ನು ನೋಡಲು 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸಿದ್ದಾರೆ ಎಂದು ಎಸ್‌ಎಫ್‌ಐ ತಿಳಿಸಿದೆ. ಪೂರ್ವ ಸೂಚನೆ ಅಥವಾ ಅನುಮತಿಯಿಲ್ಲದೆ ಕ್ಯಾಂಪಸ್‌ನಲ್ಲಿ ಮೋದಿ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿರುವುದು ಆಕ್ರೋಶಕ್ಕೆ ಗುರಿ ಮಾಡಿದೆ. ಸ್ಕ್ರೀನಿಂಗ್ ಬಗ್ಗೆ ಎಬಿವಿಪಿ ಆಕ್ರೋಶ ವ್ಯಕ್ತಪಡಿಸಿದ್ದು ಪೊಲೀಸ್ ದೂರು ದಾಖಲಿಸಿದೆ ಎಂದು ಹೇಳಿಕೊಂಡಿದೆ.

ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಸ್ಕ್ರೀನಿಂಗ್ ವಾರ್

"ಎಸ್‌ಎಫ್‌ಐ ಆಯೋಜಿಸಿದ್ದ ಸ್ಕ್ರೀನಿಂಗ್‌ಗೆ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸಿದ್ದರು. ಸುಳ್ಳು ಪ್ರಚಾರ ಮತ್ತು ಅಶಾಂತಿ ಸೃಷ್ಟಿಸುವ ಎಬಿವಿಪಿ ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸಿ ತಿರಸ್ಕರಿಸಿತು. ಆದರೂ ಮೋದಿ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶನ ಯಶಸ್ವಿಯಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಕ್ಯಾಂಪಸ್ ಪ್ರಜಾಪ್ರಭುತ್ವಕ್ಕಾಗಿ ನಿಂತಿರುವ ವಿದ್ಯಾರ್ಥಿ ಸಮುದಾಯವನ್ನು ಎಸ್‌ಎಫ್‌ಐ-ಎಚ್‌ಸಿಯು ವಂದಿಸುತ್ತದೆ'' ಎಂದು ಎಸ್‌ಎಫ್‌ಐ ಎಚ್‌ಸಿಯು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದೆ.

ಇದನ್ನು ವಿರೋಧಿಸಿ, ಎಬಿವಿಪಿ ಎಚ್‌ಸಿಯು ವಿದ್ಯಾರ್ಥಿಗಳು ಅದೇ ದಿನ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ದಿ ಕಾಶ್ಮೀರ ಫೈಲ್ಸ್ ಸ್ಕ್ರೀನಿಂಗ್ ಅನ್ನು ಆಯೋಜಿಸಿದರು. ಸ್ಕ್ರೀನಿಂಗ್ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಮತ್ತು ಕ್ಯಾಂಪಸ್ ಶಾಂತಿಯುತವಾಗಿತ್ತು ಎಂದು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಹೇಳಿಕೊಂಡರೂ, ಕ್ಯಾಂಪಸ್‌ನಲ್ಲಿ ಭದ್ರತಾ ಅಧಿಕಾರಿಗಳು ತಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎಬಿವಿಪಿ ಆರೋಪಿಸಿದೆ.

ಎಬಿವಿಪಿ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ

ಎಬಿವಿಪಿ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ

ವಿಶ್ವವಿದ್ಯಾನಿಲಯ ಆಡಳಿತವು "ದಿ ಕಾಶ್ಮೀರ್ ಫೈಲ್ಸ್" ಚಲನಚಿತ್ರದ ಪ್ರದರ್ಶನವನ್ನು ನಿಲ್ಲಿಸಲು ಪ್ರಯತ್ನಿಸಿತು. ಎಬಿವಿಪಿ ಕಾರ್ಯಕರ್ತರು ಪ್ರೊಜೆಕ್ಟರ್ ಅನ್ನು ಮುಖ್ಯದ್ವಾರದಿಂದ ತರುತ್ತಿದ್ದಾಗ ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದರು. ನಮ್ಮ ಪ್ರೊಜೆಕ್ಟರ್ ಅನ್ನು ವಶಪಡಿಸಿಕೊಳ್ಳಲು ಆಡಳಿತದಿಂದ ಮತ್ತೊಂದು ಪ್ರಯತ್ನ ನಡೆದಿದೆ ಎಂದು ಎಬಿವಿಪಿ ಎಚ್‌ಸಿಯು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹೇಳಿಕೊಂಡಿದೆ.

ಸಾಕ್ಷ್ಯಾಚಿತ್ರ ನಿರ್ಬಂಧಿಸಿ ಸರ್ಕಾರ ಆದೇಶ

ಸಾಕ್ಷ್ಯಾಚಿತ್ರ ನಿರ್ಬಂಧಿಸಿ ಸರ್ಕಾರ ಆದೇಶ

ಪಿಎಂ ಮೋದಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 2002 ರ ಗುಜರಾತ್ ಗಲಭೆಗೆ ಸಂಬಂಧಿಸಿದ ಕೆಲವು ಅಂಶಗಳನ್ನು ತನಿಖೆ ಮಾಡಿದೆ ಎಂದು ಹೇಳುವ ಬಿಬಿಸಿ ಸಾಕ್ಷ್ಯಚಿತ್ರದ ಲಿಂಕ್‌ಗಳನ್ನು ನಿರ್ಬಂಧಿಸುವಂತೆ ಸರ್ಕಾರವು ಕಳೆದ ವಾರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಟ್ವಿಟರ್ ಮತ್ತು ಯೂಟ್ಯೂಬ್‌ಗೆ ನಿರ್ದೇಶನ ನೀಡಿತ್ತು.

ಸರ್ಕಾರದ ಕ್ರಮವಕ್ಕೆ ವಿರೋಧ ಪಕ್ಷಗಳ ವಿರೋಧ

ಸರ್ಕಾರದ ಕ್ರಮವಕ್ಕೆ ವಿರೋಧ ಪಕ್ಷಗಳ ವಿರೋಧ

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಾಕ್ಷ್ಯಚಿತ್ರವನ್ನು "ಪ್ರಚಾರದ ತುಣುಕು" ಎಂದು ಕಸದ ಬುಟ್ಟಿಗೆ ಹಾಕಿದೆ. ಸಾಕ್ಷ್ಯಚಿತ್ರಕ್ಕೆ ಪ್ರವೇಶವನ್ನು ನಿರ್ಬಂಧಿಸುವ ಸರ್ಕಾರದ ಕ್ರಮವನ್ನು ವಿರೋಧ ಪಕ್ಷಗಳು ಸೆನ್ಸಾರ್ಶಿಪ್ ಎಂದು ಟೀಕಿಸಿವೆ. ಸರ್ಕಾರದ ನಿರ್ದೇಶನವನ್ನು ಧಿಕ್ಕರಿಸಿ, ವಿದ್ಯಾರ್ಥಿ ಸಂಘಟನೆಗಳು ಮತ್ತು ವಿರೋಧ ಪಕ್ಷಗಳ ಯುವ ಘಟಕಗಳು ವಿವಿಧ ರಾಜ್ಯಗಳ ಕಾಲೇಜು ಕ್ಯಾಂಪಸ್‌ಗಳಲ್ಲಿ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ನಡೆಸುವ ಉದ್ದೇಶವನ್ನು ಘೋಷಿಸಿವೆ.

English summary
Screening War: A BBC documentary on PM Modi and The Kashmir File were screened at Hyderabad University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X