ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಟಿಕಲ್ 370: ಅಮಿತ್ ಶಾ ಭಾಷಣದ ಕೊನೆಯ ಸಾಲಿನ ಮುತ್ತಿನಂತ ಮಾತುಗಳು

|
Google Oneindia Kannada News

Recommended Video

ಆರ್ಟಿಕಲ್ 370: ಅಮಿತ್ ಶಾ ಭಾಷಣದ ಕೊನೆಯ ಸಾಲಿನ ಮುತ್ತಿನಂತ ಮಾತುಗಳು/ Amith shah.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸುವ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಸವಿಸ್ತಾರವಾಗಿ ರಾಜ್ಯಸಭೆಯಲ್ಲಿ ಭಾಷಣ ಮಾಡಿ ಮಸೂದೆಯನ್ನು ಪಾಸ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಿಂದಿನಿಂದಲೂ ಈ 370ನೇ ವಿಧಿಯನ್ನು ಬಿಜೆಪಿ ಯಾಕೆ ವಿರೋಧಿಸಿಕೊಂಡು ಬರುತ್ತಿದೆ, ಇದನ್ನು ಕಿತ್ತುಹಾಕುವುದರಿಂದ ಆಗುವ ಲಾಭವೇನು ಎನ್ನುವುದನ್ನು ಅಮಿತ್ ಶಾ, ಸುಮಾರು 46 ನಿಮಿಷಗಳ ಭಾಷಣದಲ್ಲಿ ವಿವರಿಸಿದ್ದಾರೆ.

ಅವರ ಭಾಷಣದ ಕೊನೆಯ ಕೆಲವೊಂದು ಸಾಲುಗಳು, ಭೂಲೋಕದ ಸ್ವರ್ಗ ಎಂದೇ ಕರೆಯಲ್ಪಡುವ ಕಾಶ್ಮೀರವನ್ನು ನಿಜವಾಗಲೂ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಹೆಜ್ಜೆಯಿಡಲಿದೆ ಎನ್ನುವ ಧಾಟಿಯಲ್ಲಿತ್ತು. ಅವರ ಭಾಷಣದ ಆಯ್ದ ಅಂಶಗಳು:

ಏಕರೂಪ ನಾಗರಿಕ ಸಂಹಿತೆ ಜಾರಿ ಮೋದಿ-ಶಾ ಮುಂದಿನ ಗುರಿ?ಏಕರೂಪ ನಾಗರಿಕ ಸಂಹಿತೆ ಜಾರಿ ಮೋದಿ-ಶಾ ಮುಂದಿನ ಗುರಿ?

'ಕಾಶ್ಮೀರ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯಲು ಇನ್ನೂ ಸಮಯ ಬೇಕಾಗಬಹುದು. ಆದರೆ, ಆರ್ಟಿಕಲ್ 370 ರದ್ದುಗೊಳಿಸುವುದೇ ಇದಕ್ಕೆ ಮೂಲ ಪರಿಹಾರ. ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಎಲ್ಲರ ಯೋಗದಾನವಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಆ ಕೆಲಸ ನಡೆದಿಲ್ಲ ಎನ್ನುವುದನ್ನು ಪ್ರಾಮಾಣಿಕವಗಿ ಎಲ್ಲರೂ ಒಪ್ಪಿಕೊಳ್ಳಬೇಕು'.

ಮಕ್ಕಳು ಆಟವಾಡುತ್ತಾ, ಶಾಲೆಗೆ ಹೋಗುವುದನ್ನು ನಾವು ನೋಡೋಣ

ಮಕ್ಕಳು ಆಟವಾಡುತ್ತಾ, ಶಾಲೆಗೆ ಹೋಗುವುದನ್ನು ನಾವು ನೋಡೋಣ

'ಕೆಲವೇ ದಿನಗಳಲ್ಲಿ ಸಂಪೂರ್ಣ ಶಾಂತಿಯುತವಾದ ಕಾಶ್ಮೀರವನ್ನು ನಾವು ನೋಡಬಹುದು. ಬಾಂಬ್, ಗನ್, ಉಗ್ರಕೃತ್ಯದಿಂದ ಕಂಗಾಲಾಗಿರುವ ಕಾಶ್ಮೀರದಲ್ಲಿ, ಮಕ್ಕಳು ಆಟವಾಡುತ್ತಾ, ಶಾಲೆಗೆ ಹೋಗುವುದನ್ನು ನಾವು ಸಂತೋಷದಿಂದ ನೋಡೋಣ. ಹಾಗಾಗಿ, ಈ ಬಿಲ್ ಗೆ ನೀವೆಲ್ಲಾ ಪಕ್ಷಾತೀತವಾಗಿ ನಮಗೆ ಬೆಂಬಲ ನೀಡಿ' - ಅಮಿತ್ ಶಾ. (ಚಿತ್ರ:ಪಿಟಿಐ)

ಅಂದು ಮೋದಿ ವಿರುದ್ದ ಆರ್ಭಟಿಸಿದ್ದ ಫಾರೂಕ್, ಮುಫ್ತಿ, ಈಗೇನಂತಾರೆ? ಅಂದು ಮೋದಿ ವಿರುದ್ದ ಆರ್ಭಟಿಸಿದ್ದ ಫಾರೂಕ್, ಮುಫ್ತಿ, ಈಗೇನಂತಾರೆ?

ಎಲ್ಲರೂ ಅವರವರ ಕುಟುಂಬದವರ ಜೊತೆಗೆ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ

ಎಲ್ಲರೂ ಅವರವರ ಕುಟುಂಬದವರ ಜೊತೆಗೆ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ

'ಇನ್ನು ಮುಂದೆ ಯುವಕರಿಗೆ ಉದ್ಯೋಗವೂ ಸಿಗಲಿದೆ, ಇಡೀ ಕಣಿವೆ ರಾಜ್ಯದ ನಾಗರೀಕರು ಭಯಭೀತರಾಗದೇ ಬದುಕುವಂತಾಗುತ್ತದೆ, ಎಲ್ಲರೂ ಅವರವರ ಕುಟುಂಬದವರ ಜೊತೆಗೆ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ನಮ್ಮ ಮೈತ್ರಿಕೂಟದ ಹೊರತಾದ ಪಕ್ಷಗಳಾದ, ಆಪ್, ಬಿಎಸ್ಪಿ, ಟಿಡಿಪಿ, ಬಿಜೆಡಿ, ವೈಎಸ್ಆರ್ ಕಾಂಗ್ರೆಸ್ ಮುಂತಾದ ಪಕ್ಷಗಳೂ ನಮಗೆ ಈ ವಿಚಾರದಲ್ಲಿ ಬೆಂಬಲ ಸೂಚಿಸಿವೆ' - ಅಮಿತ್ ಶಾ.

ರಾತ್ರಿ ಊಟ ಆದ ಮೇಲೆ ಇಂದು ಬೆಳಗ್ಗೆಯಿಂದ ನಡೆದ ವಿದ್ಯಮಾನಗಳನ್ನು ಒಮ್ಮೆ ನೋಡಿ

ರಾತ್ರಿ ಊಟ ಆದ ಮೇಲೆ ಇಂದು ಬೆಳಗ್ಗೆಯಿಂದ ನಡೆದ ವಿದ್ಯಮಾನಗಳನ್ನು ಒಮ್ಮೆ ನೋಡಿ

'ರಾತ್ರಿ ಊಟ ಆದ ಮೇಲೆ ಇಂದು ಬೆಳಗ್ಗೆಯಿಂದ ನಡೆದ ವಿದ್ಯಮಾನಗಳನ್ನು ಒಮ್ಮೆ ನೋಡಿ, ದೇಶದ ಜನರು ಒಕ್ಕೂರಿಲಿನಿಂದ ಈ ಮಸೂದೆ ರದ್ದತಿಗೆ ಬೆಂಬಲ ಸೂಚಿಸಿದ್ದಾರೆ. ಈ ವಿಚಾರವನ್ನು ಇಟ್ಟುಕೊಂಡು ಯಾವುದಾದರೂ ಪಕ್ಷಗಳು ರಾಜಕೀಯ ಮಾಡಿದರೆ, ಅಂತಹ ಸವಾಲುಗಳನ್ನು ಸಮರ್ಥವಾಗಿ ನಾವು ಎದುರಿಸುತ್ತೇವೆ' - ಅಮಿತ್ ಶಾ.

ನಿಮ್ಮೆಲ್ಲರ ಸಹಕಾರ ನಮಗೆ ಬೇಕಿದೆ

ನಿಮ್ಮೆಲ್ಲರ ಸಹಕಾರ ನಮಗೆ ಬೇಕಿದೆ

'ಕಾಶ್ಮೀರವನ್ನು ಸಹಜಸ್ಥಿತಿಗೆ ತರಲು ನಿಮ್ಮೆಲ್ಲರ ಸಹಕಾರ ನಮಗೆ ಬೇಕಿದೆ. ಇದರಿಂದ ಅಲ್ಲಿನ ಯುವಕರಿಗೂ ಸಹಾಯ ಮಾಡಿದಂತಾಗುತ್ತದೆ. ಕಾಶ್ಮೀರಕ್ಕೆ ಒಳ್ಳೆದಾಗಬೇಕೆಂದು ಬಯಸುವವರೆಲ್ಲರೂ ಆರ್ಟಿಕಲ್ 370 ರದ್ದುಗೊಳಿಸುವ ಈ ಮಸೂದೆಯನ್ನು ಬೆಂಬಲಿಸುತ್ತೀರಾ ಎನ್ನುವ ಖಚಿತ ವಿಶ್ವಾಸ ನನಗಿದೆ' - ರಾಜ್ಯಸಭೆಯಲ್ಲಿ ಅಮಿತ್ ಶಾ ಭಾಷಣ.

ವೋಟ್ ಬ್ಯಾಂಕಿನ ರಾಜಕೀಯದಿಂದ ಮೇಲೆ ಬನ್ನಿ

ವೋಟ್ ಬ್ಯಾಂಕಿನ ರಾಜಕೀಯದಿಂದ ಮೇಲೆ ಬನ್ನಿ

'ನಾವು ಇಂದು ಏನು ಎರಡು ಮಸೂದೆಯ ಅನುಮೋದನೆ ಪಡೆಯಲು ಬಂದಿದ್ದೇವೋ, ಇದು ಕಣಿವೆ ರಾಜ್ಯಕ್ಕೆ ಶಾಸ್ವತ ಪರಿಹಾರ ನೀಡುವಲ್ಲಿ ಮಹತ್ವದ ಹೆಜ್ಜೆಯಾಗಲಿದೆ. ವೋಟ್ ಬ್ಯಾಂಕಿನ ರಾಜಕೀಯದಿಂದ ಮೇಲೆ ಬಂದು, ಈ ಮಸೂದೆಗೆ ನೀವೆಲ್ಲರೂ ಧ್ವನಿಮತದಿಂದ ಅನುಮತಿ ನೀಡುತ್ತೀರಾ ಎಂದು ನಂಬಿದ್ದೇನೆ' - ಅಮಿತ್ ಶಾ.

English summary
Jammu And Kashmir : Scrapping Article 370, Most Effective Speech Of Union Home Minister Amit Shah In Rajya Sabha on August 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X