ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜ್ಞಾನಿಗಳಿಂದ ವಾರ್ನಿಂಗ್: ಮೇ ವೇಳೆಗೆ ಭಾರತದಲ್ಲಿ 13 ಲಕ್ಷ ಕೊರೊನಾ ಸೋಂಕಿತರು!

|
Google Oneindia Kannada News

ವಿಶ್ವದಾದ್ಯಂತ ಮಹಾಮಾರಿಯಾಗಿ ಕಾಡುತ್ತಿರುವ ಕೊರೊನಾ ವೈರಸ್ ಸೋಂಕು ಭಾರತದಲ್ಲೂ ಹೆಚ್ಚು ಆತಂಕ ಸೃಷ್ಟಿಸಿದೆ. ಕೊರೊನಾ ವೈರಸ್ ಸೋಂಕು ಹರಡದಂತೆ ಕಠಿಣ ಕ್ರಮಗಳನ್ನು ಕೈಗೊಂಡಿರುವ ಭಾರತ ಸರ್ಕಾರ, ಇಡೀ ದೇಶವನ್ನು ಲಾಕ್ ಡೌನ್ ಮಾಡಿದೆ. 21 ದಿನಗಳ ಕಾಲ ಮನೆಯಿಂದ ಯಾರೂ ಹೊರಗೆ ಬರಬೇಡಿ ಎಂದು ಭಾರತೀಯರಲ್ಲಿ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ಇತ್ತ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಭಾರತದಲ್ಲಿ 600 ರ ಗಡಿ ದಾಟಿದೆ. ಪರಿಸ್ಥಿತಿ ಹೇಗೆ ಮುಂದುವರೆದರೆ ಮೇ ವೇಳೆಗೆ ಭಾರತದಲ್ಲೇ ಕೊರೊನಾ ಸೋಂಕಿತರ ಸಂಖ್ಯೆ 13 ಲಕ್ಷ ತಲುಪಬಹುದು, ಜೋಕೆ! ಎಂದು ವಿಜ್ಞಾನಿಗಳು ವಾರ್ನ್ ಮಾಡಿದ್ದಾರೆ.

ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣಗಳು 'ಸೊನ್ನೆ': ಹಿಂದಿದೆ ಕರಾಳ ಸತ್ಯ!ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣಗಳು 'ಸೊನ್ನೆ': ಹಿಂದಿದೆ ಕರಾಳ ಸತ್ಯ!

''ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರುವುದನ್ನ ನೋಡಿದರೆ, ಮೇ ಮಧ್ಯ ಭಾಗದ ಹೊತ್ತಿಗೆ 1 ಲಕ್ಷದಿಂದ 13 ಲಕ್ಷದಷ್ಟು ಕೊರೊನಾ ಕೇಸ್ ಗಳು ದಾಖಲಾಗುವ ಸಾಧ್ಯತೆ ಇದೆ'' ಎಂದು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡ ಎಚ್ಚರಿಕೆಯ ಕರೆಗಂಟೆ ಮೊಳಗಿಸಿದೆ.

ಲಾಕ್ ಡೌನ್ ಮಾಡಿದರೆ ಸಾಲದು

ಲಾಕ್ ಡೌನ್ ಮಾಡಿದರೆ ಸಾಲದು

ಕೋವಿಡ್-19 ತಡೆಗಟ್ಟಲು ಲಾಕ್ ಡೌನ್ ಮಾಡಿದರೆ ಮಾತ್ರ ಸಾಲದು. ಸೋಂಕಿತರನ್ನು ಹುಡುಕಿ, ಟೆಸ್ಟ್ ಮಾಡಿ, ಚಿಕಿತ್ಸೆ ಕೊಟ್ಟು, ಪ್ರತ್ಯೇಕಗೊಳಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಮುಂಜಾಗ್ರತಾ ಕ್ರಮ ಕೈಗೊಂಡಿರುವ ಭಾರತ

ಮುಂಜಾಗ್ರತಾ ಕ್ರಮ ಕೈಗೊಂಡಿರುವ ಭಾರತ

ಸಂಶೋಧಕರ ತಂಡವನ್ನು ಒಳಗೊಂಡ ಕೋವಿಡ್-19 ಸ್ಟಡಿ ಗ್ರೂಪ್ ಸಲ್ಲಿಸಿರುವ ರಿಪೋರ್ಟ್ ಪ್ರಕಾರ, ಯು.ಎಸ್.ಎ ಮತ್ತು ಇಟಲಿಗೆ ಹೋಲಿಸಿದರೆ ಕೋವಿಡ್-19 ಪಾಸಿಟಿವ್ ಕೇಸ್ ಗಳನ್ನು ನಿಯಂತ್ರಿಸುವಲ್ಲಿ ಭಾರತ ಉತ್ತಮ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ. ಆದರೆ, ನಿಜವಾದ ಕೊರೊನಾ ಪೀಡಿತ ಪ್ರಕರಣಗಳ ಸಂಖ್ಯೆಯನ್ನು ಕಲೆಹಾಕುವಲ್ಲಿ ಭಾರತ ಹಿಂದೆಬಿದ್ದಿದೆ.

ಅಲರ್ಟ್ ಪ್ಲೀಸ್: ಕೊರೊನಾ ವಿಚಾರದಲ್ಲಿ ಮತ್ತೊಂದು ಕರೆಗಂಟೆ ಮೊಳಗಿಸಿದ WHO!ಅಲರ್ಟ್ ಪ್ಲೀಸ್: ಕೊರೊನಾ ವಿಚಾರದಲ್ಲಿ ಮತ್ತೊಂದು ಕರೆಗಂಟೆ ಮೊಳಗಿಸಿದ WHO!

ನಿಜವಾದ ಕೊರೊನಾ ಪ್ರಕರಣಗಳ ಸಂಖ್ಯೆ ಯಾವುದರ ಮೇಲೆ ಅವಲಂಬಿತ?

ನಿಜವಾದ ಕೊರೊನಾ ಪ್ರಕರಣಗಳ ಸಂಖ್ಯೆ ಯಾವುದರ ಮೇಲೆ ಅವಲಂಬಿತ?

ಪರೀಕ್ಷೆಯ ವ್ಯಾಪ್ತಿ, ಪರೀಕ್ಷಾ ಫಲಿತಾಂಶಗಳ ನಿಖರತೆ ಮತ್ತು ರೋಗ ಲಕ್ಷಣಗಳನ್ನು ಹೊಂದಿಲ್ಲದವರ ಟೆಸ್ಟ್ ರಿಸಲ್ಟ್ ಗಳ ಮೇಲೆ ನಿಜವಾದ ಕೊರೊನಾ ಪೀಡಿತ ಪ್ರಕರಣಗಳ ಸಂಖ್ಯೆ ಅವಲಂಬಿತವಾಗಿರುತ್ತದೆ ಎಂದು ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾನಿಲಯದ ಸಂಶೋಧಕಿ ದೇಬಶ್ರೀ ರೇ ತಿಳಿಸಿದ್ದಾರೆ.

ಟೆಸ್ಟ್ ಗೆ ಒಳಗಾದವರು ಕಡಿಮೆ

ಟೆಸ್ಟ್ ಗೆ ಒಳಗಾದವರು ಕಡಿಮೆ

ಇಲ್ಲಿಯವರೆಗೂ ಭಾರತದಲ್ಲಿ ಕೋವಿಡ್-19 ಟೆಸ್ಟ್ ಗೆ ಒಳಗಾದವರ ಸಂಖ್ಯೆ ಬಹಳ ಕಮ್ಮಿ. ಹೆಚ್ಚಿನ ಸಂಖ್ಯೆಯಲ್ಲಿ ಟೆಸ್ಟ್ ಮಾಡದ ಪರಿಣಾಮ, ಆಸ್ಪತ್ರೆಯ ಆಚೆ ಎಷ್ಟು ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ನಿಖರವಾಗಿ ಹೇಳಲು ಅಸಾಧ್ಯ ಎಂದು ವರದಿಯಲ್ಲಿ ಸಂಶೋಧಕರು ಉಲ್ಲೇಖಿಸಿದ್ದಾರೆ.

ಆತಂಕಕಾರಿ ವಿಚಾರ ಬಹಿರಂಗ

ಆತಂಕಕಾರಿ ವಿಚಾರ ಬಹಿರಂಗ

''ಆರಂಭಿಕ ಹಂತದ ದತ್ತಾಂಶಗಳ ಆಧಾರದಿಂದಾಗಿ ಪ್ರಸ್ತುತ ಅಂದಾಜುಗಳು ಲಭ್ಯವಾಗಿದೆ. ಹೀಗಾಗಿ, ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ತೋರಿಸುತ್ತಿದೆ'' ಎಂಬ ಆತಂಕಕಾರಿ ವಿಚಾರವನ್ನು ಸಂಶೋಧಕರು ಬಹಿರಂಗ ಪಡಿಸಿದ್ದಾರೆ.

English summary
Scientists Warning: India May See Up To 13 Lakh Cases Of Coronavirus By Mid May.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X